KRGRV
Wednesday, October 14, 2026
Homeವೈರಲ್ ಸುದ್ದಿಅಪಘಾತದ ಹೆಸರಲ್ಲಿ ಪ್ರಿಯಕರನೇ ಮುಗಿಸಿದ್ನಾ? 23 ವರ್ಷದ ಮುಗ್ಧೆಯ ನಿಗೂಢ ಸಾವಿನ ಸುತ್ತ ಬೆಚ್ಚಿಬೀಳಿಸೋ ರಹಸ್ಯ!...

ಅಪಘಾತದ ಹೆಸರಲ್ಲಿ ಪ್ರಿಯಕರನೇ ಮುಗಿಸಿದ್ನಾ? 23 ವರ್ಷದ ಮುಗ್ಧೆಯ ನಿಗೂಢ ಸಾವಿನ ಸುತ್ತ ಬೆಚ್ಚಿಬೀಳಿಸೋ ರಹಸ್ಯ! 💔🚨

ಅಂದಕ್ಕೆ ಆಭರಣದಂತಿದ್ದ ಆ ಹೆಣ್ಮಗಳು, ಹೆತ್ತವರ ಪಾಲಿಗೆ ಇಡೀ ಜಗತ್ತೇ ಆಗಿದ್ಳು. 23 ವರ್ಷಗಳಿಂದ ಕಣ್ಣಲ್ಲಿ ಕಣ್ಣಿಟ್ಟು ಸಾಕಿದ್ದ ಮಗಳಿಗೆ ಒಂದೊಳ್ಳೆ ಭವಿಷ್ಯ ಕಲ್ಪಿಸಬೇಕು, ಸುಂದರ ಸಂಸಾರ ಕಟ್ಟಿಕೊಡಬೇಕು ಅಂತ ಹೆತ್ತವರು ನೂರಾರು ಕನಸು ಕಂಡಿದ್ರು. ಆದರೆ ಜಸ್ಟ್ ಒಂದೇ ಒಂದು ವಾರದ ಹಿಂದೆ ಆ ಬಡ ಕುಟುಂಬದ ಮೇಲೆ ಆಕಾಶವೇ ಕಳಚಿ ಬಿದ್ದಿದೆ. “ನಿಮ್ಮ ಮಗಳು ಅಪಘಾತದಲ್ಲಿ ತೀರಿಕೊಂಡಿದ್ದಾಳೆ” ಅನ್ನೋ ಕಹಿ ಸುದ್ದಿ ಹೆತ್ತವರ ಎದೆಯನ್ನೇ ಸೀಳಿದೆ.

ಬೆಳಗ್ಗೆಯಷ್ಟೇ ಮುಗುಳುನಗುತ್ತಾ ಮನೆಯಿಂದ ಹೋದ ಮಗಳು, ಸಂಜೆಯಾಗುವಷ್ಟರಲ್ಲಿ ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿದ್ದನ್ನು ಕಂಡು ಆ ತಂದೆ-ತಾಯಿ ಕಣ್ಣೀರಿಟ್ಟ ಕರುಣಾಜನಕ ಸ್ಥಿತಿ ಕಲ್ಲು ಮನಸ್ಸನ್ನೂ ಕರಗಿಸುವಂತಿತ್ತು.

ಆದರೆ ಮೇಲ್ನೋಟಕ್ಕೆ ಆಕ್ಸಿಡೆಂಟ್ ಅಂದುಕೊಂಡಿದ್ದ ಈ ಘಟನೆಯ ಹಿಂದೆ ಈಗ ಅಸಲಿ ಕ್ರೈಂ ಕಹಾನಿಯೊಂದು ತೆರೆದುಕೊಂಡಿದೆ!

ಅಕ್ಟೋಬರ್ 3ರಂದು ನಡೆದಿದ್ದೇನು?
ಬೆಂಗಳೂರಿನ ರಾಮೋಹಳ್ಳಿ ನಿವಾಸಿಯಾಗಿದ್ದ ಭೂಮಿಕಾ, ಅಕ್ಟೋಬರ್ 3ರಂದು ತನ್ನ ಪ್ರಿಯಕರ ಕಿರಣ್‌ನನ್ನು ಭೇಟಿಯಾಗಲು ಕಾರು ಮಾಡಿಕೊಂಡು ಚನ್ನಪಟ್ಟಣಕ್ಕೆ ತೆರಳಿದ್ದಳು. ಇವರಿಬ್ಬರ ಪ್ರೀತಿಯ ವಿಷಯ ಇತ್ತೀಚೆಗಷ್ಟೇ ಮನೆಯವರಿಗೂ ಗೊತ್ತಾಗಿತ್ತು. ಆದರೆ ಚನ್ನಪಟ್ಟಣ ತಲುಪಿದ ಬೆನ್ನಲ್ಲೇ ಇಬ್ಬರ ನಡುವೆ ಜೋರು ಗಲಾಟೆ ನಡೆದಿದೆ.

ಕಾರು ಡ್ರೈವರ್ ಸಾಗರ್ ಹೇಳುವ ಪ್ರಕಾರ, ಕಿರಣ್ ಆಕ್ರೋಶದಿಂದ ಕಾರಿನ ಕೀ ಕಿತ್ತುಕೊಂಡು ಬೆದರಿಕೆ ಹಾಕಿದ್ದಲ್ಲದೆ, ತನ್ನ ಸಹೋದರನನ್ನೂ ಕರೆಸಿ ಭೂಮಿಕಾ ಮೇಲೆ ಹಲ್ಲೆ ನಡೆಸಿದ್ದನಂತೆ!

ಅನುಮಾನ ಮೂಡಿಸುತ್ತಿರುವ ಪ್ರಶ್ನೆಗಳು:
ಚನ್ನಪಟ್ಟಣದ ಸಂಕಲಗೆರೆ ಬಳಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ವಾಹನ ಡಿಕ್ಕಿಯಾಗಿ ಭೂಮಿಕಾ ಸ್ಥಳದಲ್ಲೇ ರಕ್ತಕಾರಿಕೊಂಡು ಪ್ರಾಣ ಬಿಟ್ಟಿದ್ದಾಳೆ. ಮೊದಲಿಗೆ ಇದು ಕೇವಲ ರಸ್ತೆ ಅಪಘಾತ ಎಂದೇ ಬಿಂಬಿಸಲಾಗಿತ್ತು. ಆದರೆ ಹೆತ್ತವರು ಹಾಗೂ ಸ್ಥಳೀಯರಲ್ಲಿ ಹತ್ತಾರು ಅನುಮಾನಗಳು ಹುಟ್ಟಿಕೊಂಡಿವೆ:

ಬೆಂಗಳೂರಿನಿಂದ ಕಾರಿನಲ್ಲಿ ಬಂದಿದ್ದ ಯುವತಿ, ಎಕ್ಸ್‌ಪ್ರೆಸ್‌ವೇ ಒಳಗೆ ಬೈಕ್‌ನಲ್ಲಿ ತೆರಳಿದ್ದೇಕೆ?

ಬೈಕ್‌ನಿಂದ ಇಳಿದು ರಸ್ತೆ ದಾಟುವಾಗ ಅಪಘಾತ ಸಂಭವಿಸಿದ ತಕ್ಷಣ, ಜೊತೆಯಲ್ಲಿದ್ದ ವ್ಯಕ್ತಿ ಆಕೆಯನ್ನು ಬಿಟ್ಟು ಎಸ್ಕೇಪ್ ಆಗಿದ್ದೇಕೆ?

ಯುವತಿಯ ಮೈಮೇಲಿರುವ ಹಲ್ಲೆಯ ಗುರುತುಗಳು ಅಪಘಾತಕ್ಕಿಂತ ಮುಂಚೆಯೇ ನಡೆದಿರುವ ದಾಳಿಯನ್ನು ಸಾರುತ್ತಿವೆಯೇ?

ಘಟನೆ ನಡೆದಾಗಿನಿಂದ ಪ್ರಿಯಕರ ಕಿರಣ್ ಏಕಾಏಕಿ ನಾಪತ್ತೆಯಾಗಿದ್ದೇಕೆ?

ಅಪಘಾತ ಕೇಸ್ ಈಗ ಮರ್ಡರ್ ಕೇಸ್!
ಮೊದಲು ಚನ್ನಪಟ್ಟಣ ಸಂಚಾರಿ ಠಾಣೆಯಲ್ಲಿ ಆಕ್ಸಿಡೆಂಟ್ ಕೇಸ್ ದಾಖಲಾಗಿತ್ತು. ಆದರೆ ಮಗಳ ಮೈಮೇಲಿನ ಗಾಯಗಳು ಹಾಗೂ ಕಿರಣ್‌ನ ವರ್ತನೆಯಿಂದ ಅನುಮಾನಗೊಂಡ ಹೆತ್ತವರು, ಕನ್ನಡಪರ ಹೋರಾಟಗಾರರ ಜೊತೆಗೂಡಿ ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಾರೆ. “ಇದು ಆಕ್ಸಿಡೆಂಟ್ ಅಲ್ಲ, ಪ್ರೀ ಪ್ಲ್ಯಾನ್ಡ್ ಮರ್ಡರ್!” ಎಂದು ಆಕ್ರೋಶ ಹೊರಹಾಕಿ, ಚನ್ನಪಟ್ಟಣ ಟೌನ್ ಠಾಣೆಯಲ್ಲಿ ಕೊಲೆ ದೂರು ದಾಖಲಿಸಿದ್ದಾರೆ.

ಪ್ರೀತಿಯ ಹೆಸರಲ್ಲಿ ನಂಬಿಸಿ ಕರೆದೊಯ್ದು ಮುಗ್ಧ ಜೀವವನ್ನು ಬಲಿ ಪಡೆಯಲಾಯಿತೇ? ತಲೆಮರೆಸಿಕೊಂಡಿರುವ ಕಿರಣ್ ಸಿಕ್ಕಿಬಿದ್ದರೆ ಮಾತ್ರ ಈ ಸಾವಿನ ಹಿಂದಿನ ಸಂಪೂರ್ಣ ಸತ್ಯಾಂಶ ಬಯಲಾಗಬೇಕಿದೆ.

ಹೆತ್ತ ಕರುಳಿನ ಈ ಆಕ್ರಂದನಕ್ಕೆ ನ್ಯಾಯ ಸಿಗಲೇಬೇಕು.

ಹೆಚ್ಚಿನ ಸುದ್ದಿ