KRGRV
Monday, December 23, 2024
HomeUncategorizedಕರ್ನಾಟಕ ಗುತ್ತಿಗೆದಾರರಿಗೆ ಜೀವಹಿಂಡುತಿದೆ ಪರ್ಸಂಟೇಜ್..!

ಕರ್ನಾಟಕ ಗುತ್ತಿಗೆದಾರರಿಗೆ ಜೀವಹಿಂಡುತಿದೆ ಪರ್ಸಂಟೇಜ್..!

ಶಹಾಪುರ: ಕಲ್ಯಾಣ ಕರ್ನಾಟಕ ಭಾಗದ ಗುತ್ತಿಗೆದಾರರು ಹಲವಾರು ಸಮಸ್ಯೆ ಎದುರಿಸುತ್ತಿದ್ದು, ಗುತ್ತಿಗೆದಾರರೂ ಪ್ರತಿ ಕೆಲಸಕ್ಕೂ ಕಮಿಷನ್ ನೀಡಬೇಕಿದ್ದು, ಕಮಿಷನ್ ಕೊಡುವವರಿಗೆ ಮಾತ್ರ ಬಿಲ್ ಕ್ಲಿಯರ್ ಮಾಡುವಂತೆ ಸಚಿವರು, ಶಾಸಕರು ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಭ್ರಷ್ಟಚಾರಕ್ಕೆ ಕಡಿವಾಣ ಬೀಳಲಿದೆ ಎಂದು ಗುತ್ತಿಗೆದಾರರು ಅಂದು ಕೊಂಡಿದ್ದರು. ಆದರೆ, ಪ್ರಸ್ತುತ ಕಲ್ಯಾಣ ಕರ್ನಾಟಕ ಭಾಗದ ಗುತ್ತಿಗೆದಾರರ ಹಲವು ಸಮಸ್ಯೆಗಳ ನಡುವೆ ಸಂಕಷ್ಟ ಅನುಭವಿಸುತ್ತಿದ್ದು, ಕೇಲ ಗುತ್ತಿಗೆದಾರರಿಗೆ ಶೀಫಾರಸ್ಸು ಪತ್ರ ತಂದರೆ ಕಮಿಷನ್ ಪಡೆದು ರಾತ್ರೋರಾತ್ರಿ ಚೆಕ್ ನೀಡುತ್ತಿದ್ದಾರೆ. ಕೆಲ ಗುತ್ತಿಗೆದಾರರು ಸಾಲ-ಸೂಲ ಮಾಡಿ,ಇನ್ನೂ ಕೆಲವರು ಖಾಸಗಿ ಲೇವಾದೇವಿಗಳ ಬಳಿ ಆಸ್ತಿ ಪತ್ರ ಅಡವಿಟ್ಟು ಒಡೆವೆಗಳನ್ನು ಮಾರಿ ಕಾಮಗಾರಿ ಮಾಡಿದ್ದಾರೆ. ಅದೆಷ್ಟೋ ಗುತ್ತಿಗೆದಾರರು ಸಾಲಗಾರರು ಕಾಟಕ್ಕೆ ಊರು ಬಿಟ್ಟಿದ್ದಾರೆ.

ಸಚಿವರು, ಶಾಸಕರು, ಜೆಇ, ಇಇ, ಕಮೀಷನ ಎಲ್ಲ ಹಂತದಲ್ಲೂ ಲಂಚ ಇದೆ. ಶೇ.15 ರಷ್ಟು ಲಂಚ ಕೊಡಲೇಬೇಕು. ಇಎಮ್‌ಡಿ ಕಟ್ಟಿದರೂ ಸಹ ವರ್ಷದ ವರೆಗೆ ಟೆಂಡರ್ ಕರೆಯಲ್ಲಾ. ಬಿಲ್ ಬಿಡುಗಡೆಗೂ ಲಂಚ ಕೊಡಲೇಬೇಕು. ಮತ್ತು ಕಾಮಗಾರಿ ಮಾಡಬೇಕೆಂದರೆ ಅಲ್ಲಿನ ಮುಖಂಡರಿಗೂ ಕಮಿಷನ್ ಕೊಡಬೇಕು. ಒಂದು ವೇಳೆ ಕೊಡದಿದ್ದರೆ ಕಾಮಗಾರಿ ನಿಲ್ಲಿಸಬೇಕೆಂದು ಜಿಲ್ಲಾ ಸಚಿವರ ತನಕ ದೂರು ಹೋಗುತ್ತೇ.

ಪ್ರತಿ ಟೆಂಡರ್‌ಗೂ ಕನಿಷ್ಠ ಶೇ.5 ರಷ್ಟು ಕಮಿಷನ್ ಕೊಡಬೇಕಿದೆ. ಇಡೀ ಕಲ್ಯಾಣ ಕರ್ನಾಟಕದಲ್ಲಿ ಭ್ರಷ್ಟಚಾರ ತಾಂಡವವಾಡುತ್ತಿದೆ. ಜೆಜೆಎಂ, ಆರೋಗ್ಯ, ಕೆಬಿಜೆಎನ್‌ಎಲ್, ಪಿಡಬ್ಲೂಡಿ, ಪಿಆರ್‌ಇ ಸೇರಿ ವಿವಿಧ ಇಲಾಖೆಯಲ್ಲಿ ಭ್ರಷ್ಟಚಾರ ಮಿತಿ ಮೀರಿದೆ.

ಈಗಾಗಲೇ ಗುತ್ತಿಗೆದಾರರ ಬಿಲ್‌ಗಳು ಕ್ಲಿಯರ್ ಆಗುತ್ತಿಲ್ಲ. ಬಿಲ್ ಕ್ಲಿಯರ್ ಮಾಡಲು ಲಂಚ ಕೇಳಲಾಗುತ್ತಿದೆ. 15% ರಿಂದ 20% ಕಮಿಷನ್ ವಸೂಲಿ ಆಗುತ್ತಿದ್ದು, ಪರ್ಸೆಂಟೇಜ್ ಹೆಚ್ಚಾಗಿದೆ. ಕಾಂಟ್ಯಾಕ್ಟರ್‌ಗಳಿಂದ ಹೆಜ್ಜೆ -ಹೆಜ್ಜೆಗೂ ಕಮಿಷನ್ ವಸೂಲಿ ಆಗ್ತಿದೆ. ವರ್ಷಕ್ಕೆ 20 ರಿಂದ 25 ಸಾವಿರ ಕೋಟಿ ರಾಜಕಾರಣಿಗಳ ಜೇಬು ಸೇರುತ್ತಿದೆ. ಭ್ರಷ್ಟಚಾರದ ಬಗ್ಗೆ ಯಾರು ಕ್ರಮ ಕೈಗೊಳ್ತಿಲ್ಲ. ಶಾಸಕರಿಗೆ ಶೇ.15ರಷ್ಟು ಲಂಚ ಕೊಡದಿದ್ದರೆ ಗುತ್ತಿಗೆದಾರರಿಗೆ ಕಾರ್ಯದೇಶವೇ ಸಿಗುವುದಿಲ್ಲ.

ಕಮಿಷನ್ ಕೊಡದಿದ್ದರೆ ಕಾಮಗಾರಿ ಬಂದ್

ಒಂದು ಕಾಮಗಾರಿ ಪ್ರಾರಂಭವಾದ ಬಳಿಕ ಅದಕ್ಕೆ ಬೇಕಾದ ಎಲ್ಲ ಸಾಮಾಗ್ರಿ ಅಚ್ಚುಕಟ್ಟಾಗಿ ತಂದು ಹಾಕಿ ಗುಣಮಟ್ಟದಾಗಿ ಮಾಡಿದರೂ ಸಹ ಅದಕ್ಕೆ ಕಮಿಷನ್ ನೀಡಲೇ ಬೇಕು. ಇಲ್ಲದಿದ್ದರೆ ಅಧಿಕಾರಿಗಳಿಂದಲೇ ಸಂಘ-ಸಂಸ್ಥೆಗಳ, ಪುಂಡರ ಮೂಲಕ ಗುತ್ತಿಗೆದಾರರನ್ನು ಬ್ಲಾಕ್‌ಮೇಲ್ ಮಾಡುವ ಕೆಲಸ ಮಾಡುತ್ತಿದ್ದು, ಇನ್ನೂ ಕೇಲವರು ಪತ್ರಕರ್ತರ ಸೋಗಿನಲ್ಲಿ ಬಂದು ಗುತ್ತಿಗೆದಾರರಿಂದ ಹಣ ವಸೂಲಿ ನಡೆಯುತ್ತಿದೆ. ಇದರಿಂದ ಸಮಸ್ಯೆಗಳ ನಡುವೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಗುತ್ತಿಗೆದಾರರಿಗೆ ಬೆಲೆ ಇಲ್ಲದಂತಾಗಿದೆ.

ಕೇಳೋರಿಲ್ಲ ಗುತ್ತಿಗೆದಾರರ ಗೋಳು

ಹಲವು ಗುತ್ತಿಗೆದಾರರುಗಳು ಬ್ಯಾಂಕ್ ಬಡ್ಡಿ ಮತ್ತು ಜಿಎಸ್‌ಟಿ ಪಾವತಿಸಲು ಸಾಧ್ಯವಾಗದೇ ಕಂಗಾಲಾಗಿದ್ದಾರೆ. ಪ್ರಮಾಣಿಕವಾಗಿ ಕೆಲಸ ಮಾಡಿದರೂ ಸಹ ಗುತ್ತಿಗೆದಾರರಿಗೆ ನೆಮ್ಮದಿ ಇಲ್ಲದ ಹಾಗೇ ಆಗಿದೆ. ಕೈಗೊಂಡ ಕಾಮಗಾರಿಗೆ ಪೂರ್ಣ ಪ್ರಮಾಣದ ಬಿಲ್ ಆದರೆ ಮಾತ್ರ ಸಂಕಷ್ಟದಿಂದ ಪಾರಾಗುವ ಸಾಧ್ಯತೆ ಇದೆ. ಇಲ್ಲವಾದರೆ ಗುತ್ತಿಗೆದಾರರಿಗೆ ಆತ್ಮಹತ್ಯೆಯ ದಾರಿ ಹಿಡಿಯಬೇಕಿದ್ದಉದಾಹರಣಗೆ ಭೀಗುಡಿ ಸಿಓ ಕಚೇರಿಯಲ್ಲಿ ಶೇ. 8 ರಷ್ಟು ಕಮಿಷನ್‌ಗೆ ಬೇಡಿಕೆ ಇಡುತ್ತಿದ್ದು, ನೂರಾರು ಸಮಸ್ಯೆಗಳ ನಡುವೆ ಗುತ್ತಿಗೆದಾರರು ತಮ್ಮ ಕೆಲಸ ಮುಗಿಸಬೇಕಿದ್ದು ಈ ಬಗ್ಗೆ ಸರ್ಕಾರ ಹೆಚ್ಚು ಕಾಳಜಿ ವಹಿಸಬೇಕಿದೆ ಎಂದು ಅಂಬ್ರೇಶ ಸಜ್ಜನ್ ಗುತ್ತಿಗೆದಾರರು ಹೇಳಿದ್ದಾರೆ.

ಹೆಚ್ಚಿನ ಸುದ್ದಿ