ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮ ಹಾಗೂ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ (ರಿ)ಹೊಸಳ್ಳಿ ಕ್ಯಾಂಪ್ ವತಿಯಿಂದ ಕರ್ನಾಟಕ ಸರ್ಕಾರದ ವಿಧಾನ ಪರಿಷತ್ ಶಾಸಕರಾದ ಬಸನಗೌಡ ಬಾದರ್ಲಿ ಅವರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ವಿಧಾನ ಪರಿಷತ್ ಶಾಸಕರಾದ ಬಸನಗೌಡ ಬಾದರ್ಲಿ ಮಾತನಾಡಿ ನಮ್ಮ ಹರೇಟನೂರು ಹಿರೇಮಠದ ಜಂಗಮ ಸಮಾಜದ ಗುರುಗಳಾದ ವೇದಮೂರ್ತಿ ಅಮರಯ್ಯ ಸ್ವಾಮಿ ಅವರು ಒಳಬಳ್ಳಾರಿ ಲಿಂಗೈಕ್ಯ ಶ್ರೀ ಚನ್ನಬಸವ ಮಹಾಶಿವಯೋಗಿಗಳ ಕನಸಿನಂತೆ ಸಮಾಜದಲ್ಲಿನ ಅನಾಥ ಜೀವಿಗಳ ನೊಂದು. ಬೆಂದ ಜೀವಿಗಳ ಮತ್ತು ಅರೆ ನಗ್ನ ಸ್ಥಿತಿಯಲ್ಲಿ ಓಡಾಡುತ್ತಿರುವ ವಯಸ್ಕರ ಬುದ್ಧಿಮಾಂದ್ಯ ಮಾನವ ಜೀವಿಗಳಿಗೆ ತಮ್ಮದೇ ಆದಂತಹ ಒಂದು ಕುಟುಂಬವನ್ನು ನಿರ್ಮಿಸಿ ಅವರ ಹಿಂದಿನ ನೋವು ಕಷ್ಟಗಳನ್ನು ಮರೆಸುವ ಪ್ರಯತ್ನ ಮಾಡಿರುವ ಕಾರುಣ್ಯ ಕುಟುಂಬವು ಕಾರುಣ್ಯ ಎನ್ನುವ ಪದಕ್ಕೆ ಸಂಪೂರ್ಣ ಅರ್ಥ ಕಲ್ಪಿಸಿ ಕೊಟ್ಟಿದೆ. ಇಂತಹ ಸಾಮಾಜಿಕ ಕಾರ್ಯಗಳನ್ನು ಮಾಡುವ ಶಕ್ತಿಯನ್ನು ಭಗವಂತ ಜಂಗಮ ಸಮಾಜಕ್ಕೆ ಆಶೀರ್ವದಿಸಿರುವುದು ಮಾನವ ಧರ್ಮದ ಮಾನವೀಯತೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. ಕಾರುಣ್ಯ ಆಶ್ರಮಕ್ಕೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕಲ್ಯಾಣ ಕರ್ನಾಟಕದ ಸಂತ ಶರಣರ ಆಶಯದಂತೆ ಕಾರುಣ್ಯ ಕುಟುಂಬ ಸೇವೆ ಮಾಡುತ್ತಿದೆ. ಈ ಕಾರುಣ್ಯ ಕುಟುಂಬಕ್ಕೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಡಾ. ಚನ್ನಬಸವ ಸ್ವಾಮಿ ಹಿರೇಮಠ ಹಾಗೂ ಅಶೋಕ ನಲ್ಲ ಇವರು ನಮ್ಮ ಸ್ವಂತ ಸಹೋದರರಿದ್ದಂತೆ. ಈ ನಮ್ಮ ಕಾರುಣ್ಯ ಕುಟುಂಬದ ಸೇವೆಯನ್ನು ಗುರುತಿಸಿ ನಮ್ಮ ಸರ್ಕಾರವು ಕರ್ನಾಟಕ ರಾಜ್ಯದಲ್ಲಿ ಹಿರಿಯ ನಾಗರಿಕ ಸೇವಾ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದಂತಹ ಏಕೈಕ ಸಂಸ್ಥೆ ಎಂದು ಪ್ರಶಸ್ತಿ ನೀಡಿರುವುದು ಆ ಪ್ರಶಸ್ತಿಗೆ ಉನ್ನತವಾದ ಗೌರವ ಸಿಕ್ಕಿದೆ. ನಮ್ಮ ಸರ್ಕಾರವು ಪ್ರಾಮಾಣಿಕ ಸಮಾಜ ಸೇವಕರುಗಳು ಹಾಗೂ ಪ್ರಾಮಾಣಿಕ ಸಂಸ್ಥೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಮೂಲ ಉದ್ದೇಶವಾಗಿದೆ. ನಮ್ಮ ಕುಟುಂಬದ ಎಲ್ಲಾ ಹಿರಿಯರ ಒಡನಾಟ ಹೊಂದಿರುವ ಈ ಕಾರುಣ್ಯ ಕುಟುಂಬ ಕರುನಾಡಿನ ಕರುಣೆಯ ಅರಮನೆಯಾಗಿರುವುದು ಸಿಂಧನೂರಿನ ಕರುಣೆಯ ಸಂಸ್ಕೃತಿ ಸಂಪ್ರದಾಯವನ್ನು ನಾಡಿಗೆ ತೋರಿಸಿಕೊಟ್ಟ ಕೀರ್ತಿ ಕಾರುಣ್ಯ ಆಶ್ರಮಕ್ಕೆ ಸಲ್ಲುತ್ತದೆ. ಇಲ್ಲಿರುವ ಎಲ್ಲಾ ತಂದೆ ತಾಯಿಗಳು ಹಾಗೂ ಸಹೋದರ ಸಹೋದರಿಯರು ನಮ್ಮ ದೇವರುಗಳು ನಾವುಗಳು ಇವರಿಗೆ ಪೂಜಾರಿಗಳಾಗಿ ಇವರುಗಳನ್ನು ಪೂಜನೀಯ ಭಾವನೆಯಿಂದ ಕಂಡಾಗ ಮಾತ್ರ ನಮ್ಮ ನಾಡಿನ ಕರುಣೆಯ ಸಂಸ್ಕೃತಿಯನ್ನು ಉಳಿಸಿದಂತಾಗುತ್ತದೆ. ರಾಜಕಾರಣಿಗಳು ಬರಿ ಭಾಷಣಕಾರರಾಗಿ ಉಳಿದುಕೊಳ್ಳದೆ ಪ್ರಾಮಾಣಿಕವಾದಂತಹ ಕಾರ್ಯಗಳಿಗೆ ಸಹಾಯ ಸಹಕಾರ ನೀಡಿ ಪ್ರೋತ್ಸಾಹಿಸಿದರೆ ಮಾತ್ರ ರಾಜಕಾರಣಕ್ಕೆ ಅರ್ಥ ಸಿಗುತ್ತದೆ. ಯಾವುದೇ ರಾಜಕಾರಣಿಯಾಗಲಿ ಅನಾಥ ಜೀವಿಗಳ ನೊಂದ ಜೀವಿಗಳ ಬಡಜನರ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದಾಗ ಮಾತ್ರ ಉತ್ತಮ ಭಾರತೀಯ ಪ್ರಜೆಯಾಗಲು ಸಾಧ್ಯ ಇಂತಹ ಸೇವೆಯನ್ನು ಮಾಡುವ ಮನಸ್ಸುಗಳಿಗೆ ಹತ್ತಿರವಾಗಲು ಅಧಿಕಾರವನ್ನು ಬಿಟ್ಟು ಇಂತಹ ಸಮಾಜ ಸೇವಕರುಗಳಿಗೆ ಮಾರ್ಗದರ್ಶಕರುಗಳಾಗಿ ಇವರುಗಳನ್ನು ಬೆನ್ನು ತಟ್ಟಿದರೆ ಸಮಾಜ ಸುಧಾರಣೆಯಾಗಬಹುದು ಮುಂದಿನ ದಿನಮಾನಗಳಲ್ಲಿ ಸರ್ಕಾರದ ಸೌಲಭ್ಯಗಳ ಜೊತೆ ನನ್ನ ವೈಯ್ಯಕ್ತಿಕವಾದ ಸಹಾಯ ಸಹಕಾರ ಕಾರುಣ್ಯ ಆಶ್ರಮಕ್ಕೆ ನಿರಂತರವಾಗಿರುತ್ತದೆ ಎಂದು ಭಾವನಾತ್ಮಕವಾಗಿ ಮಾತನಾಡಿ ಆಶ್ರಮದಲ್ಲಿ ಆಶ್ರಯ ಪಡೆದಿರುವ ಎಲ್ಲಾ ಹಿರಿಯ ವೃದ್ಧರು ಹಾಗೂ ವಯಸ್ಕರ ಬುದ್ಧಿಮಾಂದ್ಯರಿಗೆ ಆತ್ಮಸ್ಥೈರ್ಯ ತುಂಬಿ ಹಣ್ಣು ಹಂಪಲುಗಳನ್ನು ವಿತರಿಸಿ ಆಶೀರ್ವಾದ ಪಡೆದರು. ಈ ಕಾರ್ಯಕ್ರಮದಲ್ಲಿ ಕಾರುಣ್ಯ ಆಶ್ರಮದ ಸಲಹಾ ಸಮಿತಿಯ ಮುಖಂಡರಾದ ವೀರೇಶ ರಾಠಾವಿ ಮಠ ಅವರನ್ನು ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಿ ಸಿದ್ದಗಂಗಾ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಭಾವಚಿತ್ರವನ್ನು ನೆನಪಿನ ಕಾಣಿಕೆಯಾಗಿ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಆದಿ ಬಸವರಾಜ ಪ್ರಧಾನ ಕಾರ್ಯದರ್ಶಿಗಳು ಜಂಗಮ ಕ್ಷೇಮಾಭಿವೃದ್ಧಿ ಸಂಘ (ರಿ) ಸಿಂಧನೂರು. ಅಶೋಕ ನಲ್ಲ ಕಾರ್ಯದರ್ಶಿಗಳು ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ (ರಿ)ಹೊಸಳ್ಳಿ ಕ್ಯಾಂಪ್ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಕಾರುಣ್ಯ ನೆಲೆ ವೃದ್ದಾಶ್ರಮ. ಮತ್ತು ಆಶ್ರಮದ ಸಿಬ್ಬಂದಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ.ಸುಜಾತ ಹಿರೇಮಠ. ಸಿದ್ದಯ್ಯ ಸ್ವಾಮಿ. ಶರಣಮ್ಮ. ಮಲ್ಲಯ್ಯ ಸ್ವಾಮಿ. ಮರಿಯಪ್ಪ ನಾಯಕ. ಹರ್ಷವರ್ಧನ ಅನೇಕರು ಉಪಸ್ಥಿತರಿದ್ದರು