ಚನ್ನಮ್ಮನ ಕಿತ್ತೂರು : ಐತಿಹಾಸಿಕ ಕಿತ್ತೂರು ರಾಣಿ ಚನ್ನಮ್ಮನ 202ನೇ ವಿಜಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜಗುರು ಪ್ರತಿಷ್ಠಾನ ರಾಜಗುರು ಶಿಕ್ಷಣ ಸಂಸ್ಥೆ ಶಾಲೆಯ ವಿದ್ಯಾರ್ಥಿಗಳು ಕಿತ್ತೂರು ಉತ್ಸವದಲ್ಲಿ ತಮ್ಮ ನೃತ್ಯವನ್ನು ಪ್ರದರ್ಶಿಸಿದರು.
ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ನೃತ್ಯ ಶಿಕ್ಷಕರಾದ ಸುರೇಶ ಶಿವಾನಂದ ಹರಕೂಣಿ, ಅಕ್ಷತಾ ಸಾಂಸ್ಕೃತಿಕ ಕಲಾ ಅಕಾಡೆಮಿ, ಕಿತ್ತೂರು, ಹಾಗೂ
ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ರಾಜೇಶ್ವರಿ ಕಳಸಣ್ಣವರ, ಸಹ ಶಿಕ್ಷಕಿಯರಾದ ಜಯಶ್ರೀ ಕಮ್ಮಾರ, ಸಾವಿತ್ರಿ ಗಾರಿಗೆ, ಮತ್ತು ರೂಪಾ ದೊಡ್ಡಮನಿ ಹಾಗೂ ಎಲ್ಲ ಶಿಕ್ಷಕಿಯರು ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿ ನೀಡಿದ್ದಾರೆ.
ನೃತ್ಯವು ಪ್ರೇಕ್ಷಕರಿಗೆ ವಿಶೇಷ ಗಮನ ಸೆಳೆಯುವಂತೆ ಮಾಡಿತು..
ಶಾಲೆಯ ಪ್ರಸ್ತುತಪಡಿಸಿದ ವಿದ್ಯಾರ್ಥಿಗಳ ನೃತ್ಯ ಮೆಚ್ಚುಗೆ ವ್ಯಕ್ತಪಡಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಅವರು ನೃತ್ಯ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಗೌರವಿಸಿದರು.
ವಿದ್ಯಾರ್ಥಿಗಳನ್ನು ಶಾಲೆಯ ಅಧ್ಯಕ್ಷರಾದ ಪೂಜ್ಯ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ನೃತ್ಯ ಮಾಡಿದ ಮಕ್ಕಳಿಗೆ ,ನೃತ್ಯ ತರಬೇತಿ ನೀಡಿದ ಸುರೇಶ ಸರ್ ಹಾಗೂ ಶಾಲೆಯ ಶಿಕ್ಷಕರು ವರ್ಗಕ್ಕೆ ಅಭಿನಂದಿಸಿದರು.

