ಕಲಬುರಗಿ: ಮಾ 1, ಅಫಜಲಪುರ ತಾಲ್ಲೂಕಿನ ಸಾಗನೂರು ಗ್ರಾಮದ ನಿವಾಸಿ, ಡಾ// ಉಮೇಶ್ ಜಾಧವ್ ಸಂಸದರ ಆಪ್ತರು ಕೋಲಿ ಸಮಾಜದ ಯುವ ಮುಖಂಡ ಗಿರೀಶ್ ಬಾಬು ಚಕ್ರ (31) ಎಂಬುವವರನ್ನು ದುಷ್ಕರ್ಮಿಗಳು ಗುರುವಾರ ರಾತ್ರಿ ಹೊಲದಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಅವರು ಸಹೋದರ ಶ್ರೀ ನಾಗರಾಜ್ ಚಕ್ರ ಅವರು ಆರೋಪಿಸಿದ್ದಾರೆ.
ಬಿ ಎಸ ಎನ ಎಲ್ ಸಲಹಾ ಸಮಿತಿ ಸದಸ್ಯರಾಗಿ ನೇಮಕ ಮಾಡಿದರಿಂದ ಗೆಳೆಯರು ಪಾರ್ಟಿ ಇಟ್ಟಿದೆವೆ ಬಾ ಎಂದು ಜಮೀನಿಗೆ ಕರೆಸಿಕೊಂಡು ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ ಎಂದು ಸಹೋದರ ನಾಗರಾಜ್ ನೇರವಾಗಿ ಆರೋಪಿಸಿದ್ದಾರೆ.
ಗಾಣಗಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಸಿ ಆರೋಪಿಗಳ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ ಎಂದು ಗಣಗಾಪುರ ಪೋಲಿಸರು ತಿಳಿಸಿದ್ದಾರೆ.