KRGRV
Sunday, August 9, 2026
Homeಜಿಲ್ಲಾ ಸುದ್ದಿಗಳುತಾಲೂಕಿನ ಅತಿವೃಷ್ಠಿ ಹಾಗೂ ಅನಾವೃಷ್ಠಿ ಪರಿಶೀಲಿಸಿದ: ಸಚಿವ ಲಕ್ಷ್ಮಣ ಸವದಿ.

ತಾಲೂಕಿನ ಅತಿವೃಷ್ಠಿ ಹಾಗೂ ಅನಾವೃಷ್ಠಿ ಪರಿಶೀಲಿಸಿದ: ಸಚಿವ ಲಕ್ಷ್ಮಣ ಸವದಿ.

ಮುಂಡಗೋಡ: ಉತ್ತರ ಕನ್ನಡ ಜಿಲ್ಲೆ ಸಚಿವರಾದ ಲಕ್ಷ್ಮಣ ಸವದಿ ಜಿಲ್ಲೆಯಲ್ಲಿ ಸಂಭವಿಸುವ ಅತಿವೃಷ್ಠಿ ಹಾಗೂ ಅನಾವೃಷ್ಠಿ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸಲು ಅವರು ಶುಕ್ರವಾರ ಮುಂಡಗೋಡ ಪಟ್ಟಣಕ್ಕೆ ಅಗಮಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಅನೇಕ ರಿತೀಯ ಮಳೆಗಾಲದ ಸಂದರ್ಭದಲ್ಲಿ ಗುಡ್ಡ ಕುಸಿತ, ಬೆಳೆ ಹಾನಿ, ಕುಡಿಯುವ ನೀರು ಹಾಗೆ ಪ್ರಕೃತಿ ವಿಕೋಪ ಗಳಂತಹ ಪ್ರದೇಶ ಒಳಗೋಂಡಿದ್ದು ಅವುಗಳ ವರದಿ ಮಾಡಿ ತಕ್ಷಣಕ್ಕೆ ಬೆಕಾಗುವ ಪರಿಹಾರ ನೀಡುವಂತ್ತೆ ವರದಿ ಮುಖ್ಯಮಂತ್ರಿ ಅವರಿಗೆ ಸಲ್ಲಿಸುತ್ತೇನೆ ಎಂದು ಮಾಧ್ಯಮಗಳ ಮುಂದೆ ಹೇಳಿದರು.

ಈ ಸಂದರ್ಭದಲ್ಲಿ ಬಹಳಷ್ಟು ಜಿಲ್ಲೆಗಳಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ, ಜಿಲ್ಲೆಯಲ್ಲಿ ಕಾಂಗ್ರೇಸ್ ಭದ್ರ ಕೋಟೆ ಅಗಿದ್ದರು ಸಚಿವ ಸ್ಥಾನ ವಿಲ್ಲ, ಇಪ್ಪತ್ತು ವರ್ಷಗಳಿಂದ‌ ಸಿಕ್ಕಿದ ಸಚಿವ ಸ್ಥಾನ ಈ ವರ್ಷ ಏಕೆ‌ ಸಿಗಲಿಲ್ಲ‌ವೆಂಬ ಪ್ರಶ್ನೆಗಳಿಗೆ ಪ್ರತಿಕವಾಗಿ ಉತ್ತರಿಸಿದರು.

ಈ ಸಂದರ್ಭದಲ್ಲಿ ಯಲ್ಲಾಪುರ ಹಾಗೂ ಮುಂಡಗೋಡ ಶಾಸಕ ಶಿವರಾಮ ಹೆಬ್ಬಾರ್, ಶಿರಸಿ–ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ, ಮಾಜಿ ಶಾಸಕ ವಿ.ಎಸ್. ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿನಾಥ್ ಗಾಂವ್ಕರ್, ಸ್ಥಳೀಯ ಮುಖಂಡರು, ಪಕ್ಷದ ವಿವಿಧ ಹಂತಗಳ ಪದಾಧಿಕಾರಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿಗಾರರು: ಬಸಯ್ಯ ತೋಟಯ್ಯನವರ ಮುಂಡಗೋಡ

ಹೆಚ್ಚಿನ ಸುದ್ದಿ