KRGRV
Friday, November 14, 2025
HomeUncategorizedಪರಿಷತ್ ಸದಸ್ಯರಾಗಿ ಕಿಶೋರ್ ಸಭಾಪತಿ ಕೊಠಡಿಯಲ್ಲಿ ಪ್ರಮಾಣ ವಚನ ಸ್ವೀಕಾರ

ಪರಿಷತ್ ಸದಸ್ಯರಾಗಿ ಕಿಶೋರ್ ಸಭಾಪತಿ ಕೊಠಡಿಯಲ್ಲಿ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು, ಅ.30 : ವಿಧಾನಪರಿಷತ್ತಿನ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಆಯ್ಕೆಯಾದ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ವಿಧಾನಪರಿಷತ್‌ನ ನೂತನ ಸದಸ್ಯರಾಗಿ ಭಗವಂತ ಹಾಗೂ ತಾಯಿ ಭಾರತಾಂಬೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ವಿಧಾನಪರಿಷತ್ತಿನ ಸಭಾಪತಿಗಳಾದ ಬಸವರಾಜ ಎಸ್ ಹೊರಟ್ಟಿ ಅವರ ಸಮ್ಮುಖದಲ್ಲಿ ಸಭಾಪತಿಗಳ ಕಚೇರಿಯಲ್ಲಿ ನೂತನ ಸದಸ್ಯರ ಪ್ರಮಾಣವಚನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ, ವಿಧಾನಪರಿಷತ್‌ ಸದ ಸದಸ್ಯ ಎನ ರವಿಕುಮಾರ ಶಾಸಕರಾದ ಭರತ ಶೆಟ್ಟಿ,ಹರೀಶ ಪುಂಜಾ,ಬಿಜೆಪಿ ಸ್ಥಳೀಯ ಮುಖಂಡರು ಹಾಗೂ ಕಾರ್ಯದರ್ಶಿಗಳಾದ ಕೆ.ಆರ್.ಮಹಾಲಕ್ಷ್ಮಿ ಸೇರಿದಂತೆ ಬೆಂಬಲಿಗರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ