KRGRV
Monday, December 23, 2024
Homeರಾಜಕೀಯಬಿಜೆಪಿ-ಜೆಡಿಎಸ ಕ್ಷಮೆ ಯಾತ್ರೆ ಮಾಡಲು ಸಲಹೆ ನೀಡಿದ :: ಸಲೀಂ‌ ಹಮ್ಮದ್

ಬಿಜೆಪಿ-ಜೆಡಿಎಸ ಕ್ಷಮೆ ಯಾತ್ರೆ ಮಾಡಲು ಸಲಹೆ ನೀಡಿದ :: ಸಲೀಂ‌ ಹಮ್ಮದ್

ಬೆಂಗಳೂರು: ಬಿಜೆಪಿ-ಜೆಡಿಎಸ್ ನಾಯಕರು ಪಾದಯಾತ್ರೆ ಮೂಲಕ ರಾಜಕೀಯ ನಾಟಕ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ ‌ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ಮಾಡುತ್ತಿದ್ದಾರೆ. ಯಾವ ಪುರುಷಾರ್ಥಕ್ಕೆ ಪಾದಯಾತ್ರೆ ಮಾಡ್ತಿದ್ದಾರೆ ಗೊತ್ತಿಲ್ಲ.ಇದು ರಾಜಕೀಯ ನಾಟಕ ಯಾತ್ರೆ. ಎರಡು ಹಗರಣಗಳ ಬಗ್ಗೆ ಬಿಜೆಪಿ-ಜೆಡಿಎಸ್ ಹೇಳ್ತಿದ್ದಾರೆ. ಸದನದಲ್ಲಿ ಸಿಎಂ ಉತ್ತರ ಕೊಡಲು ಮುಂದಾದಾಗ ಅವರಿಗೆ ಉತ್ತರ ನೀಡಲು ಅವಕಾಶ ಕೊಡಲಿಲ್ಲ. ಅಧಿವೇಶನದಲ್ಲಿ ಚರ್ಚೆ ಮಾಡದೇ ಬಿಜೆಪಿ-ಜೆಡಿಎಸ್ ಪಲಾಯನ ಮಾಡಿದೆ. ಸದನದ ಬಾವಿಗಳಿದು ಸಿಎಂ ಉತ್ತರ ಕೊಡದಂತೆ ಮಾಡಿ ಸದನದ ಸಮಯ ಹಾಳು ಮಾಡಿದ್ದಾರೆ ಅಂತ ಕಿಡಿಕಾರಿದರು.

ಬಿಜೆಪಿ-ಜೆಡಿಎಸ್‌ನವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ.4 ವರ್ಷ ಅಧಿಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ‌ಮಾಡಿದ್ದಾರೆ. ಅದಕ್ಕೆ ಜನ ಕಾಂಗ್ರೆಸ್‌ಗೆ ಅವಕಾಶ ನೀಡಿದ್ದಾರೆ. ರಾಜ್ಯದಲ್ಲಿ 40% ಬಿಜೆಪಿ ಸರ್ಕಾರ ಇತ್ತು. ನಿರ್ದಿಷ್ಟ ದಾಖಲೆ ಇಲ್ಲದೇ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ. ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡುತ್ತಿದ್ದಾರೆ. ಬಿಜೆಪಿ ಶೂಟ್ ಮಾಡಿ ಓಡಿ ಹೋಗೋ ಕೆಲಸ ಮಾಡ್ತಿದ್ದಾರೆ ಅಂತ ವಾಗ್ದಾಳಿ ನಡೆಸಿದರು.

40 ವರ್ಷ ರಾಜಕೀಯದಲ್ಲಿ ಯಾವುದೇ ಆರೋಪ ಇಲ್ಲದೆ ಸಿದ್ದರಾಮಯ್ಯ ಅವರು ಕೆಲಸ ಮಾಡ್ತಿದ್ದಾರೆ.ಸಿದ್ದರಾಮಯ್ಯ ಮೇಲಿನ ಆರೋಪ ನಿರಾಧಾರ. ಕೇಂದ್ರ ಸರ್ಕಾರ ಮೋದಿ ಅವರು ಸಿದ್ದರಾಮಯ್ಯ ಸರ್ಕಾರದ ವಿರುದ್ದ ಷಡ್ಯಂತ್ರ ಮಾಡ್ತಿದ್ದಾರೆ.ನಮ್ಮ ಸರ್ಕಾರ ಉತ್ತಮವಾಗಿ ಕೆಲಸ ಮಾಡ್ತಿದೆ. ಇದನ್ನ ಸಹಿಸಲು ಸಾಧ್ಯವಾಗ್ತಿಲ್ಲ.ಕೇಂದ್ರ ಸರ್ಕಾರ ನಮ್ಮ ಮೇಲೆ ಷಡ್ಯಂತ್ರ ಮಾಡ್ತಿದ್ದಾರೆ. ಇದಕ್ಕೆ ನಾವು ಭಯ ಬೀಳೊಲ್ಲ.ಬಿಜೆಪಿ ಭ್ರಷ್ಟಾಚಾರವನ್ನು ಬಯಲಿಗೆಳೆಯೋ ಕೆಲಸ ಮಾಡ್ತೀವಿ.ಬಿಜೆಪಿಯವರ ಅಕ್ರಮ ಬೆತ್ತಲೆ ಮಾಡೋ ಕೆಲಸ ಮಾಡ್ತೀವಿ ಅಂತ ಸವಾಲ್ ಹಾಕಿದ್ರು.

ವಾಲ್ಮೀಕಿ ಹಗರಣ ಗೊತ್ತಾಗದ ಕೂಡಲೇ ಸಿಎಂ SIT ತನಿಖೆ ಆದೇಶ ಮಾಡಿದ್ರು.‌ಮುಡಾ ಕೇಸ್ ನಲ್ಲಿ ಸ್ವತಃ ಸಿಎಂ ಅವರು ನಿವೃತ್ತಿ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಆದೇಶ ಮಾಡಿದ್ದಾರೆ. ಸಿಎಂ ಈಗಾಗಲೇ ಹೇಳಿದ್ದಾರೆ. ಯಾರೇ ತಪ್ಪು ಮಾಡಿದ್ರು ಕ್ರಮ ತೆಗೆದುಕೊಳ್ತೀವಿ ಅಂತ ಹೇಳಿದ್ದಾರೆ.ಬಿಜೆಪಿ ಅವರು ರಾಜಕೀಯ ಮಾಡಲು ಹೊರಟಿದ್ದಾರೆ.ಬಿಜೆಪಿ-ಜೆಡಿಎಸ್ ಅಕ್ರಮ ಬಯಲಿಗೆ ಎಳೆಯುತ್ತೇವೆ. ಆಗ ಏನ್ ಮಾಡ್ತಾರೆ ನೋಡೋಣ ಅಂತ ಸವಾಲ್ ಹಾಕಿದ್ರು.

ಬಿಜೆಪಿ ಅವಧಿಯಲ್ಲಿ 21 ಹಗರಣ ಆಗಿದೆ. ಇದರ ಬಗ್ಗೆ ನಾವು ತನಿಖೆ ‌ಮಾಡುತ್ತೇವೆ. ಬಿಜೆಪಿ-ಜೆಡಿಎಸ್ ಕರ್ಮಕಾಂಡ ಮುಚ್ಚಿ ಹಾಕಿಕೊಳ್ಳಲು ನಮ್ಮ ಮೇಲೆ ಆರೋಪ ಮಾಡ್ತಿದ್ದಾರೆ.‌ ಬಿಜೆಪಿ-ಜೆಡಿಎಸ್ ಪಾದಯಾತ್ರೆಯನ್ನು ದೆಹಲಿಗೆ ಮಾಡಲಿ. ರಾಜ್ಯದಿಂದ 19 ಜನ ಸಂಸದರು ಇದ್ದರೂ ಬಜೆಟ್‌ನಲ್ಲಿ ಅನ್ಯಾಯವಾಗಿದೆ. ಹೀಗಾಗಿ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು

ಸುಪ್ರೀಂಕೋರ್ಟ್ ಸೂಚನೆಯ ನಂತರ ಬರ ಪರಿಹಾರ ನೀಡಿದರು. 5 ಜನ ಮಂತ್ರಿಗಳು ಏನ್ ಮಾಡಿದ್ದೀರಿ? ಮಹದಾಯಿ, ಮೇಕೆದಾಟು ಏನು ಆಯ್ತು? ನಿರ್ಮಲಾ ಸೀತಾರಾಮನ್ ತಾಯಿ ಹೃದಯ ಕರಗಲಿಲ್ಲವಾ?

ಆಂಧ್ರ, ಬಿಹಾರಕ್ಕೆ ವಿಶೇಷ ಪ್ಯಾಕೇಜ್ ಸರ್ಕಾರ ಉಳಿಸಿದ್ದಕ್ಕೆ ನೀಡಿದ್ದಾ? ಮೋದಿ 400 ಸ್ಥಾನ ಸಿಗಲಿದೆ ಎಂದರು. ಆದರೆ ಜನ 200ಕ್ಕೆ ಇಳಿಸಿದರು. ಕೊನೆದಾಗಿ ಜೆಡಿಯು, ಟಿಡಿಪಿ ಬೆಂಬಲ ಪಡೆದು ಸರ್ಕಾರ ರಚನೆ ಮಾಡಿದರು. ಕೇಂದ್ರ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದರು.

2028ರವರೆಗೂ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿ ‌ಇರಲಿದೆ. ಬಿಜೆಪಿ-ಜೆಡಿಎಸ್ ಷಡ್ಯಂತ್ರಗಳಿಗೆ ನಾವು ಉತ್ತರ ನೀಡುತ್ತೇವೆ. ಬಿಜೆಪಿ-ಜೆಡಿಎಸ್ ಕಾಲದ ಹಗರಣಗಳನ್ನ ರಾಜ್ಯದ ಜನರಿಗೆ ಹೇಳುತ್ತೇವೆ ಎಂದರು.

ಹೆಚ್ಚಿನ ಸುದ್ದಿ