ವರದಿ: ರಮೇಶ ಕಾಮನಕೇರಿ
ಹೂವಿನ ಹಿಪ್ಪರಗಿ: ಸಾಂಕ್ರಾಮಿಕ ರೋಗ ಹರಡುತ್ತಿರವ ಸಮಯದಲ್ಲಿ ಸ್ವಚ್ಚತೆ ಕಾಪಾಡಿ ಅಂತ ಹೇಳುವ ಸರ್ಕಾರಿ ಅಧಿಕಾರಿಗಳು ಕಾರ್ಯನಿರ್ವಹಿಸುವ ಸ್ಥಳದಲ್ಲಿಯೇ ಸ್ವಚ್ಚತೆ ಕಾಪಾಡುವಲ್ಲಿ ವಿಫಲವಾಗಿದ್ದು,ಸರ್ಕಾರಿ ಅಧಿಕಾರಿಗಳಿಂದಲೇ ಡೆಂಗಿ ಮಲೇರಿಯಾ, ಸಾಂಕ್ರಾಮಿಕ ಹರಡುವ ಸಾಧ್ಯತೆ ಹೆಚ್ಚಾಗಿದೆ. ಹಾಗಿದ್ರೆ, ಎಲ್ಲಿ ಏನು…? ಅಂತೀರಾ ಈ ಸ್ಟೋರಿ ನೋಡಿ…
ಹೂವಿನ ಹಿಪ್ಪರಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಮೂಗುಮುಚ್ಚಿ ಓಡಾಡುವ ಪರಿಸ್ಥಿತಿ ಬಂದಿದೆ ದಿನಕ್ಕೆ ಸಾವಿರಾರು ಮಂದಿ ಪ್ರಯಾಣ ಮಾಡುವಂತಹ ನಿಲ್ದಾಣವಾಗಿದ್ದು ರಾಯಚೂರು, ಮಂತ್ರಾಲಯ, ಮುದ್ದೇಬಿಹಾಳ,ನಾರಾಯಣಪುರ,ಲಿಂಗಸ್ಗೂರ,ಸಿಂದನೂರ ,ಬಳ್ಳಾರಿ,ಆಂಧ್ರಪ್ರದೇಶ,ತಾಳಿಕೋಟಿ, ಹುಣಸಗಿ,ಸುರಪುರ, ಯಾದಗಿರಿ ಯಿಂದ ನಿತ್ಯ ವಿಜಯಪುರ ಕ್ಕೆ ಹೋಗುವ ಬಸ್ಸ ಗಳು ಹೂವಿನ ಹಿಪ್ಪರಗಿ ಬಸ್ ನಿಲ್ದಾಣದ ಮೂಲಕ ಹಾದು ಹೋಗುತ್ತವೆ. ಎಲ್ಲೆಂದರಲ್ಲಿ ಸ್ವಚ್ಚಗೋಳಿಸದೆ ಹಾಗೆ ಬಿದ್ದರುವ ಕಸದ ರಾಶಿ, ಮಳೆ ಬಂದರೆ ಸಾಕು ಕೆರಯಂತೆ ನೀಲ್ಲುವ ನೀರು, ಶೌಚಾಲಯದ ಮಲ -ಮೂತ್ರ ಗಬ್ಬೆದ್ದು ದುರ್ವಾಸನೆ ಬರುತ್ತಿದ್ದು ಸಾರ್ವಜನಿಕರು ಹಾಗೂ ಪ್ರಯಾಣಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವ ವರ್ಷಗಳಿಂದ ಈ ನಿಲ್ದಾಣ ಕ್ಕೆ ಬಂದು ಹೋಗುತ್ತಿರವವರೆಲ್ಲರಿಗೂ ಸಾಂಕ್ರಾಮಿಕ ರೋಗಕ್ಕೆ ಒಳಗಾಗುತ್ತಿದ್ದಾರೆ. ನಿಲ್ದಾಣ ಕಡೆಗೆ ಅಧಿಕಾರಿಗಳು ಸರಿಯಾಗಿ ಗಮನಿಸದೇ ಇರುವುದರಿಂದ ನಿಲ್ದಾಣ ಕಸದ ರಾಶಿ ಬಿದ್ದಿದು,ನೀರು ನಿಲ್ಲುತ್ತಿದ್ದು, ಸುತ್ತಮುತ್ತ ಪಾಚಿ ಬೆಳದು ಕ್ರಿಮಿಕೀಟಗಳು ಉತ್ಪತಿಯಾಗಿ ಸಾಂಕ್ರಾಮಿಕ ರೋಗ ಹರಡುವ ಅವಾಸನ ಕೇಂದ್ರವಾಗಿದ್ದು ಬಾಟಲ್, ತಂಬಾಕು ತಿಂದು ಎಸೆದ ಪ್ಲಾಸ್ಟಿಕ್ ಕವರ್ ಗಳು, ಗುಟ್ಕಾ ಪಾಕೇಟ್, ಸೇರಿದಂತೆ ಮದ್ಯದ ಬಾಟಲಿಗಳು, ಬಿದ್ದಿದ್ದರೂ ಅದನ್ನ ಸ್ವಚ್ಚಗೊಳಿಸುವ ಕಾರ್ಯವನ್ನ ಮಾಡಿಲ್ಲ. ಹೀಗಾಗಿ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದು,ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ನಿಲ್ದಾಣದಲ್ಲಿ ಕುಳಿತು ಕೋಳು ಯೋಚಿಸುವಂತಾಗಿದೆ. ಶೌಚಾಲಯಕ್ಕೆ ಹೋಗಲು ಹಿಂದು ಮುಂದು ನೋಡುತ್ತಿದ್ದಾರೆ.
ನಿಲ್ದಾಣ ಸಮೀಪ ವಾಸದ ಮನೆಗಳಿದ್ದು ಸರ್ಕಾರ ಸ್ವಚ್ಛತೆಗಾಗಿ ಕೋಟಿಗಟ್ಟಲೇ ಹಣ ಸುರಿಯುತ್ತಿದೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಧಿಕಾರಿಗಳೇ ಕಣ್ಣು ಮುಚ್ಚಿ ಕುಳಿತಿರುವುದು ಜನಸಾಮಾನ್ಯರ ಅಸಮಾಧಾನಕ್ಕೆ ಕಾರಣವಾಗಿದೆ.