ದಕ್ಷ ಪೋಲಿಸ್ ಅಧಿಕಾರಿಗಳ ಅವಶ್ಯಕತೆ ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಇದೆ. ಚೊಟ್ಟಾ ಬಾಂಬೆ ಎಂದೆ ಖ್ಯಾತಿ ಹೊಂದಿರುವ ಹುಬ್ಬಳ್ಳಿ ನಗರದಲ್ಲಿ ಕ್ರೈಮ್ ಗಳು ಹೆಚ್ಚಾಗುತ್ತಿದ್ದು ಜನರು ಭಯಬಿತರಾಗಿದ್ದಾರೆ.ಜನರ ಸುರಕ್ಷಿತೆ ದೃಷ್ಟಿಯಿಂದ ದಕ್ಷ ಅಧಿಕಾರ ಎಂದು ಹೆಸರು ಪಡೆದಿರುವ ಮಹಾಲಿಂಗ ನಂದಗಾವಿಯರನ್ನು ಲಾ ಆಂಡ್ ಆಡರ್ ಡಿಸಿಪಿ ಆಗಿ ವರ್ಗಾವಣೆ ಮಾಡಿದು ಸ್ವಾಗತಾರ್ಹ ಎಂದು ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷರಾ ಅಮರೇಶಣ್ಣ ಕಾಮನಕೇರಿ ಮಾಧ್ಯಮ ತಿಳಿಸಿದ್ದಾರೆ12
ಬೆಂಗಳೂರು: ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದ ಸಮಯದಲ್ಲಿ ಡಿಸಿಪಿ ರಾಜೀವ್ ಅವರ ಅಮಾನತ್ತಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ಪ್ರಭಾರಿಯಾಗಿ ಬಂದಿದ್ದ ಕುಶಾಲ್ ಚೌಕ್ಸೆ ಅವರನ್ನ ರಾಜ್ಯ ಸರಕಾರ ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿದೆ.
ಎರಡು ತಿಂಗಳ ಹಿಂದಷ್ಟೇ ಬಂದಿದ್ದ ಅವರ ಸ್ಥಾನಕ್ಕೆ ಮಹಾನಿಂಗ ನಂದಗಾವಿ ಅವರನ್ನ ವರ್ಗಾವಣೆ ಮಾಡಿ ಆದೇಶ ಮಾಡಲಾಗಿದೆ.
ಅವಳಿನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾದ ಸಮಯದಲ್ಲಿ ಹಲವರ ಸ್ಥಾನಪಲ್ಲಟ ಆಗಬೇಕೆಂದು ಕಾಂಗ್ರೆಸ್ ನಾಯಕರೇ ಒತ್ತಾಯ ಮಾಡಿದ್ದರು. ಅದಾದ ನಂತರ ಹಲವು ಬದಲಾವಣೆಗಳು ಆರಂಭಗೊಂಡಿವೆ.