KRGRV
Monday, August 18, 2025
Homeಕ್ರೀಡೆಅಂದು ಉಗಿದವರೇ ‘ಉಘೇ ಉಘೇ’ ಎನ್ನುವಂತೆ ಮಾಡಿದ ಚಲಗಾರ

ಅಂದು ಉಗಿದವರೇ ‘ಉಘೇ ಉಘೇ’ ಎನ್ನುವಂತೆ ಮಾಡಿದ ಚಲಗಾರ

ಮುಗಿದನಾ.. ಮುಗಿಸಿದನಾ..?

ಅವನ ಕಥೆ finish ಎಂದರು.

He is finished ಎಂದು ಷರಾ ಬರೆದರು..

ಯಾರನ್ನೋ ಮೆರೆಸಲು ಇವನನ್ನು ಬಲಿ ಕೊಡುವ ಪ್ರಯತ್ನ ಮಾಡಿದರು.

ಅವನೋ.. ಛಲಗಾರ.. ಬೆಂಕಿಯ ಮೇಲೆ ನಡೆಯಲು ಆರಂಭಿಸಿದವನು ಅಲ್ಲಿಂದಲೇ ಹೊಸ ಅಧ್ಯಾಯ ಶುರು ಮಾಡಿದ್ದಾನೆ.

ಅವನನ್ನು ಕಡಿಮೆ ಬೈದರಾ ಅದೊಂದು ಇನ್ನಿಂಗ್ಸ್’ಗೆ..? 2023ರ ಏಕದಿನ ವಿಶ್ವಕಪ್ ಫೈನಲ್’ನಲ್ಲಿ ರಾಹುಲ್ ಆಡಿದ ಆಟ ಅವನನ್ನು ಖಳನಾಯಕನ ಸ್ಥಾನದಲ್ಲಿ ನಿಲ್ಲಿಸಿತ್ತು (ನಿಲ್ಲಿಸಿದ್ದರು). ತಂಡದ ಸೋಲನ್ನು ಇವನೊಬ್ಬನ ತಲೆಗೆ ಕಟ್ಟಲಾಗಿತ್ತು. ಓರಗೆಯವರ ವೈಫಲ್ಯವನ್ನು ಮರೆ ಮಾಚಲು ಇವನನ್ನು ಬಲಿಪೀಠದಲ್ಲಿ ಕೂರಿಸಲಾಗಿತ್ತು.

ಆದರೆ ಇವತ್ತು..?
ಅಂದು ಉಗಿದವರೇ ‘ಉಘೇ ಉಘೇ’ ಎನ್ನುತ್ತಿದ್ದಾರೆ. ಮುಗಿಯಿತು ಇವನ ಕಥೆ ಎಂದವರಿಗೆ ಮುಟ್ಟಿ ನೋಡಿಕೊಳ್ಳುವ ರೀತಿಯಲ್ಲಿ ತಿರುಗಿಸಿ ಕೊಟ್ಟಿದ್ದಾನೆ ರಾಹುಲ್. ಅವನು ಮುಗಿದಿಲ್ಲ, ಮುಗಿಸಿದ್ದಾನೆ..

ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್’ನಲ್ಲಿ crucial 42 ನಾಟೌಟ್. ನ್ಯೂಜಿಲೆಂಡ್ ವಿರುದ್ಧದ ಫೈನಲ್’ನಲ್ಲಿ ಅಜೇಯ 34 ರನ್.

ಸಂದೇಶ ಸ್ಪಷ್ಟ.. ‘’ನೀವು ನನ್ನನ್ನು ಎಷ್ಟೇ ತುಳಿದರೂ ನಾನು ಎದ್ದು ಬರುತ್ತಲೇ ಇರುತ್ತೇನೆ’’.

ಭಾರತ ಚಾಂಪಿಯನ್ಸ್ ಟ್ರೋಫಿ ಗೆದ್ದ ಬೆನ್ನಲ್ಲೇ ಒಬ್ಬರು ವಿಶೇಷ ವ್ಯಕ್ತಿ ಕರೆ ಮಾಡಿದರು. ಅವರು ನನ್ನ ಪಾಲಿಗೆ ತುಂಬಾ ವಿಶೇಷ. ನಾನು ಅತ್ಯಂತ ಗೌರವಿಸುವ ವ್ಯಕ್ತಿ ಅವರು.

ಒಬ್ಬ ಶಿಷ್ಯನ ಸಫಲತೆಯ ಶ್ರೇಯ ಅವನ ಗುರುವಿನದ್ದೇ ಆಗಿರುತ್ತದೆ.

ಆದರೆ ರಾಹುಲ್ ಬಗ್ಗೆ ಕೇಳಿದಾಗಲೆಲ್ಲಾ ಈ ವ್ಯಕ್ತಿ ಒಂದು ಮಾತು ಹೇಳುತ್ತಾರೆ.
‘’Coach can’t make player, A player can make coach’’

‘ಅವನನ್ನು ನಾನು ಬೆಳೆಸಿದೆ, ಅವನು ನನ್ನ ಹುಡುಗ..’ ಎಂದೆಲ್ಲಾ ಆಟಗಾರರ ಯಶಸ್ಸಿನ ಶ್ರೇಯವನ್ನು ಪಡೆಯಲು ತುದಿಗಾಲಲ್ಲಿ ನಿಂತಿರುವವರ ಮಧ್ಯೆ ಎಂಥಾ ವ್ಯಕ್ತಿತ್ವ..! ಅವರು ಸ್ಯಾಮುಯೆಲ್ ಜಯರಾಜ್.

ಅವರೊಂದಿಗೆ ಮಾತನಾಡುತ್ತಿದ್ದಾಗ ಅವರು ಹೇಳಿದ ಒಂದು ಮಾತು ಕಿವಿ ನೆಟ್ಟಗಾಗುವಂತೆ ಮಾಡಿತು.

‘’ಚಾಂಪಿಯನ್ಸ್ ಟ್ರೋಫಿಯಲ್ಲಿ ರಾಹುಲ್ ಆಟ ಅವನ ಅಂಡರ್-15 ದಿನಗಳನ್ನು ನೆನಪಿಸಿತು ನನಗೆ’’ ಎಂದರು.

‘ಏನದು ನೆನಪು’ ಎಂದು ಕೇಳಿದೆ. ‘’ರಾಹುಲ್ ಕರ್ನಾಟಕ U-15 ತಂಡದ ಪರ ಆಡುತ್ತಿದ್ದಾಗ ತಮಿಳುನಾಡು, ಆಂಧ್ರಪ್ರದೇಶ, ಹೈದರಾಬಾದ್ ವಿರುದ್ಧ ಶತಕ ಬಾರಿಸಿದ್ದ. ತುಂಬಾ calm & composure ಆಗಿ ಕಾಣುತ್ತಿದ್ದ ಆಗ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ರಾಹುಲ್ ಆಟವನ್ನು ನೋಡಿದಾಗ ಆ ದಿನಗಳು ನೆನಪಾದವು’’ ಎಂದರು ಜಯರಾಜ್ ಸರ್.

ಹೌದು. ರಾಹುಲ್ ಬದಲಾಗಿದ್ದಾನೆ. ಇದು ಕೇವಲ ಬದಲಾವಣೆಯಲ್ಲ, ರಾಹುಲ್ ಕ್ರಿಕೆಟ್ ಜೀವನದ ಹೊಸ ಅಧ್ಯಾಯ.

ಬರಹ —– ಸುದರ್ಶನ್

klrahul #ChampionsTrophy2025 #indiancricketteam #CT #Rahul #cricket

ಹೆಚ್ಚಿನ ಸುದ್ದಿ