KRGRV
Tuesday, November 18, 2025
Homeರಾಜ್ಯಅಭಿವೃದ್ದಿಗೆ ನನ್ನ ಮೊದಲ ಆದ್ಯತೆ ,ಸಾರ್ವಜನಿಕರಿಗೆ ಸುಗಮವಾಗಿ ಗ್ರಾಮಗಳಿಂದ ಪಟ್ಟಣಕ್ಕೆ ತಲುಪಲು ಸೂಕ್ತ ರಸ್ತೆಯ ನಿರ್ಮಾಣ...

ಅಭಿವೃದ್ದಿಗೆ ನನ್ನ ಮೊದಲ ಆದ್ಯತೆ ,ಸಾರ್ವಜನಿಕರಿಗೆ ಸುಗಮವಾಗಿ ಗ್ರಾಮಗಳಿಂದ ಪಟ್ಟಣಕ್ಕೆ ತಲುಪಲು ಸೂಕ್ತ ರಸ್ತೆಯ ನಿರ್ಮಾಣ ನನ್ನ ಗುರಿ:ಸಚಿವ ಮುನಿಯಪ್ಪ.

ವಿವಿಧ ರಸ್ತೆ ಕಾಮಗಾರಿಗಳಿಗೆ ಇಂದು ಸಚಿವರಿಂದ ಚಾಲನೆ.

ದೇವನಹಳ್ಳಿ.1

ದೇವನಹಳ್ಳಿ ತಾಲ್ಲೂಕಿನಲ್ಲಿ ಇಂದು ಲೋಕೋಪಯೋಗಿ ಇಲಾಖೆಯ ಮೂಲಕ ವಿವಿದ ‌ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ನವರು ಚಾಲನೆ ನಿಡಿದರು.

ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಯೋಗ್ಯವಾದ ರಸ್ತೆಗಳ ನಿರ್ಮಾಣ ನನ್ನ ಮೊದಲು ಆದ್ಯತೆ ಎಂದರು.

ದೇವನಹಳ್ಳಿ ಯಿಂದ ಚೌಡಪ್ಪನಹಳ್ಳಿ ಗಂಗವಾರ ರಸ್ತೆಯನ್ನು 90 ಲಕ್ಷಗಳ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿ,

ನಂದಿ ಮುಖ್ಯ ರಸ್ತೆಯಿಂದ ಸುಮಾರು 30 ಕಿ.ಮಿ ಗೊಲ್ಲಹಳ್ಳಿ ಜಂಕ್ಷನ್ ಸೇರುವ 2 ಕೋಟಿ ಅನುದಾನದ ಕಾಮಗಾರಿ.

ದೇವನಹಳ್ಳಿ ಪಟ್ಟಣದ ವಾಣಿಜ್ಯ ತೆರಿಗೆ ಕಛೇರಿಯ ಆವರಣದಲ್ಲಿರುವ ಭೌತಿಕ ಪರೀಕ್ಷಣ ಸಂಗ್ರಹಣ ಕೊಠಡಿಗಳ 89 ಲಕ್ಷದ ಕಾಮಗಾರಿಗೆ ಇಂದು ಪೂಜೆಯನ್ನು ಸಲ್ಲಿಸುವುದರ ಮೂಲಕ ಚಾಲನೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರರಾದ ಚಂದ್ರಶೇಖರ್,ಕಾಂಗ್ರೆಸ್ ಮುಖಂಡರಾದ ಜಗನ್ನಾಥ, ಶಾಂತಕುಮಾರ್,ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ