ಬೆಂಗಳೂರ 03 :: ಡಿಜಿಟಲ್ ಆರೋಗ್ಯ, ಜೈವಿಕ ತಂತ್ರಜ್ಞಾನ ಮತ್ತು ಬಲವಾದ ಸಾರ್ವಜನಿಕ-ಖಾಸಗಿ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದ ಇಕೋ ಸಿಸ್ಟಂನಲ್ಲಿ ನಾಯಕತ್ವ ಹೊಂದಿರುವ ಕರ್ನಾಟಕವು, ಮುಂದಿನ ಪೀಳಿಗೆಯ ಆರೋಗ್ಯ ರಕ್ಷಣಾ ಪರಿಹಾರಗಳಲ್ಲಿ ಕೊಬೆ ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಲು ಸನ್ನದ್ಧವಾಗಿದೆ. ಜೀನೋಮಿಕ್ ಡಯಾಗ್ನೋಸ್ಟಿಕ್ಸ್ ಮತ್ತು ಪುನರುತ್ಪಾದಕ ಔಷಧದಂತಹ ಸಹಯೋಗದ ಸಂಭಾವ್ಯ ಕ್ಷೇತ್ರಗಳನ್ನು ನಾವು ಚರ್ಚಿಸಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬಯೋಮೆಡಿಕಲ್ ನಾವೀನ್ಯತೆಯಲ್ಲಿ ಸಹಯೋಗದ ಅವಕಾಶಗಳನ್ನು ಅನ್ವೇಷಿಸಲು ‘ಕೊಬೆ ಬಯೋಮೆಡಿಕಲ್ ಇನ್ನೋವೇಷನ್ ಕ್ಲಸ್ಟರ್’ನ ತಂಡವನ್ನು ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಭೇಟಿ ಮಾಡಿದ ನಂತರ ಸಚಿವರು ಈ ಸಂಗತಿಯನ್ನು ತಿಳಿಸಿದ್ದಾರೆ.
ನಮ್ಮ ಗ್ಲೋಬಲ್ ಇನ್ನೋವೇಷನ್ ಅಲೈಯನ್ಸ್ (GIA) ಕಾರ್ಯಕ್ರಮದಲ್ಲಿ ಜಪಾನ್ ಭಾಗವಹಿಸುವಿಕೆಯನ್ನು ಗಮನಿಸಿದಾಗ, ಜಪಾನ್ ಮತ್ತು ಭಾರತದ ನಡುವೆ ಸುಗಮ ಮಾರುಕಟ್ಟೆ ಪ್ರವೇಶವನ್ನು ಸಕ್ರಿಯಗೊಳಿಸಲು ಬೆಂಗಳೂರು ಬಯೋ ಇನ್ನೋವೇಷನ್ ಸೆಂಟರ್ (BBC), ಸಿಕ್ಯಾಂಪ್ (CCAMP) ಮತ್ತು ಐಬಿಎಬಿ ವೇದಿಕೆಗಳನ್ನು ಬಳಸಲು ರಾಜ್ಯಕ್ಕೆ ವಿಫುಲವಾದ ಅವಕಾಶ ಕಾಣಿಸುತ್ತಿದೆ. ಒಟ್ಟಾಗಿ, ಎರಡೂ ಪ್ರದೇಶಗಳಲ್ಲಿ ನಾವೀನ್ಯತೆ ಮತ್ತು ಪ್ರಭಾವವನ್ನು ಹೆಚ್ಚಿಸುವ ಮೀಸಲು ಬಯೋಟೆಕ್ ಕಾರಿಡಾರ್ ಮೂಲಕ ನಾವು ಕೊಬೆ ಮತ್ತು ಕರ್ನಾಟಕದ ನಡುವಿನ ನಿಕಟ ಪಾಲುದಾರಿಕೆಯನ್ನು ವೃದ್ಧಿಸಬಹುದಾಗಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

