KRGRV
Wednesday, November 19, 2025
Homeಜಿಲ್ಲಾ ಸುದ್ದಿಗಳುಉತ್ತರ ಕರ್ನಾಟಕ ನಾಗರಿಕ ಅಭಿವೃದ್ಧಿ ಸಂಘದಿಂದ ಅಗಸ್ಟ್-25ಕ್ಕೆ ಅಟ್ಟೂರ ಲೇಔಟ್ ನಲ್ಲಿ ರೊಟ್ಟಿ ಪಂಚಮಿ...

ಉತ್ತರ ಕರ್ನಾಟಕ ನಾಗರಿಕ ಅಭಿವೃದ್ಧಿ ಸಂಘದಿಂದ ಅಗಸ್ಟ್-25ಕ್ಕೆ ಅಟ್ಟೂರ ಲೇಔಟ್ ನಲ್ಲಿ ರೊಟ್ಟಿ ಪಂಚಮಿ ಕಾರ್ಯಕ್ರಮ.

ಬೆಂಗಳೂರು ‌ಅ 13 :: ಬೆಂಗಳೂರಿನ ಉತ್ತರ ಕರ್ನಾಟಕ ನಾಗರಿಕರ ‌ಅಭಿವೃದ್ಧಿ ಸಂಘದವರು
ದಿನಾಂಕ 25 8 2024 ರಂದು ಬೆಂಗಳೂರು ಯಲಹಂಕದ ಅಟ್ಟೂರ್ ಲೇಔಟಿನಲ್ಲಿರುವ ಸಂಘದ ನಿವೇಶನದಲ್ಲಿ ಪ್ರಪ್ರಥಮ ಬಾರಿಗೆ ರೊಟ್ಟಿ ಪಂಚಮಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಕಾರ್ಯಕ್ರಮದ ಒಳಗಾಗಿ ನಿವೇಶನದ ಕಂಪೌಂಡು ಕಾಮಗಾರಿ ಪ್ರಗತಿಯಲ್ಲಿದೆ ಬೋರು ಹಾಕಿಸಲಾಗಿದೆ ಮೂರು ಇಂಚು ನೀರು ಬಿದ್ದಿದೆ .ಸಂಘದ ಕಚೇರಿಯನ್ನು ಮಂಜುನಾಥ ನಗರ ಪ್ರಾರಂಭಿಸಿದ್ದು.ಉತ್ತರ ಕರ್ನಾಟಕ ಜನರ ಅಭಿವೃದ್ಧಿ ದೃಷ್ಟಿಯಿಂದ
ಉದ್ದೇಶಿತ ಉತ್ತರ ಕರ್ನಾಟಕ ಭವನವನ್ನು ಕಟ್ಟಬೇಕೆಂಬ ಉದ್ದೇಶವನ್ನು ತಮ್ಮೆಲ್ಲ ಸಹಕಾರದಿಂದ ಸಮಿತಿಯಲ್ಲಿ ನಿರ್ಧರಿಸಲಾಗಿದೆ.


ಆದ್ದರಿಂದ ರೊಟ್ಟಿ ಪಂಚಮಿ 2024ರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ .
ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ನಾಗರಿಕ ‌ಅಭಿವೃದ್ಧಿ ಸಂಘ ಅಧ್ಯಕ್ಷರಾದ ಬಿ ಜಿ ಅವಟ್ಟಿ‌ ಮತ್ತು‌‌ ಸಂಘದ ಸರ್ವ‌ ಸದಸ್ಯರು ಉತ್ತರ ಕರ್ನಾಟಕದ ಹೃದಯವಂತರು ಸಂಘದ ಅಭಿವೃದ್ಧಿ ಆಸಕ್ತಿ ಉಳ್ಳವರು ಸಂಘಟನೆಯ ಅಭಿಮಾನಿಗಳು ಗುರು ಹಿರಿಯರು ಮತ್ತು ಸ್ನೇಹಿತರು ಈ ಸಂಘದ ಖಾತೆಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಧನ ಸಹಾಯ ನೀಡುವಂತೆ ವಿನಂತಿ ಮಾಡಿಕೊಂಡಿದ್ದಾರೆ

ಸಂಘದ ಖಾತೆಯ ವಿವರ

The North karanataka Area citizen’s development Association Bangalore

A/c no 922020066748990

IFSC code:UTIB0003361
AXIS BANK LTD

ಹೆಚ್ಚಿನ ಸುದ್ದಿ