KRGRV
Monday, December 23, 2024
Homeಜಿಲ್ಲಾ ಸುದ್ದಿಗಳುಉದಯಶಿವಕುಮಾರ್ ಇನ್ಫ್ರಾ ಲಿಮಿಟೆಡ್ ಸಿಬ್ಬಂದಿಯಿಂದ ಕನ್ನಡ ರಾಜೋತ್ಸವ ಹಾಗೂ ದೀಪಾವಳಿ ಅಂಗವಾಗಿ ರಕ್ತಾದಾನ

ಉದಯಶಿವಕುಮಾರ್ ಇನ್ಫ್ರಾ ಲಿಮಿಟೆಡ್ ಸಿಬ್ಬಂದಿಯಿಂದ ಕನ್ನಡ ರಾಜೋತ್ಸವ ಹಾಗೂ ದೀಪಾವಳಿ ಅಂಗವಾಗಿ ರಕ್ತಾದಾನ

ಬೆಂಗಳೂರು ನೇ 01 : ಕರುನಾಡ ನಾಡ ಹಬ್ಬ ರಾಜೋತ್ಸವ ಹಾಗೂ ಬೆಳಕಿನ ಹಬ್ಬ ದೀಪಾವಳಿ ಅಂಗವಾಗಿ ಉದಯಶಿವಕುಮಾರ್ ಇನ್ಫ್ರಾ ಲಿಮಿಟೆಡ್ (USK LTD) ಕಂಪನಿಯ ಸಿಬ್ಬಂದಿ ವರ್ಗದವರು ರಕ್ತದಾನ ಮಾಡುವದರ ಮೂಲಕ ನಾಡ ಮತ್ತು ಬೆಳಕಿನ ಹಬ್ಬವನ್ನು ಅದ್ದೂರಿಯಾಗಿ ‌ಆಚರಿಸಿದರು.

ಕಂಪನಿಯ MD ಶ್ರೀ ಉದಯ ಶಿವಕುಮಾರ ರವರು ಮಾತನಾಡಿ ದ್ವೇಷ ಅಸೂಯೆಗಳನ್ನು ಬಿಟ್ಟು ಮಾನವೀಯ ಸಂಬಂಧಗಳನ್ನು ಬೆಳಸಬೇಕಿದೆ . ಪ್ರಾಣ ಎಂಬುದು ಅಮೂಲ್ಯವಾದದ್ದು ಇಂತಹ ಜೀವ ಉಳಿಸುವ ಸೇವಾ ಕಾರ್ಯಗಳಾದ ರಕ್ತದಾನ, ನೇತ್ರದಾನಗಳಂತಹ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ನಾಡ ಹಬ್ಬ ಹಾಗೂ ದೀಪಾವಳಿ ಹಬ್ಬದ ದಿನದಂದು ಕಂಪನಿಯ ಸಿಬ್ಬಂದಿ ಸ್ವಂತ ಪ್ರೇರಣೆಯಿಂದ ರಕ್ತದಾನ ಮಾಡಿ ಜನರ ಜೀವ ರಕ್ಷಣೆಗೆ ಮುಂದಾಗಿದು ನನ್ನ ಜೀವನದಲ್ಲಿ ಅವಿಸ್ಮರಣೀಯ ದಿನ ಎಂದು ಹೇಳಿದರು

1988 ಆರಂಭವಾದ ಶ್ರೀಯುತ ಉದಯ ಶಿವಕುಮಾರ ಮಾಲಿಕತ್ವದ USK ಕಂಪನಿಯು ಕರ್ನಾಟಕದ ಹಲವಾರು ಕಾಮಗಾರಿಗಳನ್ನು ಮಾಡಿ ಕರ್ನಾಟಕ ಅಭಿವೃದ್ಧಿ ಕಾರ್ಯಗಳಲ್ಲಿ ತನ್ನದೆ ಚಾಪು ಮೂಡಿಸಿದೆ ನೆರೆಯ ರಾಜ್ಯಗಳಲ್ಲೂ ಕಾಮಗಾರಿಗಳನ್ನು ಮಾಡಿ ಸೈ ಎನಿಸಿಕೊಂಡಿರುವ USK ಕಂಪನಿ ಕರ್ನಾಟಕ ಏಕೈಕ IPO ಸೇರಿದ ಕಂಪನಿಯಾಗಿದೆ.ಶೇರು ಮಾರುಕಟ್ಟೆ ಪ್ರವೇಶ ಮಾಡಿದ ನಂತರ ತನ್ನ ಶೇರುದಾರರಿಗೆ ಅತ್ಯಧಿಕ ಲಾಭವನ್ನು ನೀಡಿತ್ತಿದೆ. ಶೇರು‌ ಪೇಟೆಯಲ್ಲಿ ಉದಯ ಶಿವಕುಮಾರ ಇನ್ಫ್ರಾ ಲಿಮಿಟೆಡ್ ಕಂಪನಿ ವಿಶ್ವಾಸ ಅರ್ಹತೆ ಕಂಪನಿಯಾಗಿ ಮುನ್ನೆಡೆಯತ್ತಿದೆ.

ಪ್ರತಿ ವರ್ಷ ಬೆಳಕಿನ‌ ಹಬ್ಬ ದೀಪಾವಳಿ ದಿನದಂದು ಕಂಪನಿಯ ಮುಖ್ಯ ಕಛೇರಿಯಲ್ಲಿ ಅದ್ದೂರಿಯಾಗಿ ಶ್ರೀ ಲಕ್ಷ್ಮೀದೇವಿ ಪೂಜೆ ಮತ್ತು ವಾಹನಗಳಿಗೆ ಮಾಡಲಾಗುತ್ತದೆ.ಈ ವರ್ಷ ಕನ್ನಡ ರಾಜೋತ್ಸವವ ಕೂಡ ಬಂದಿರುವುದರಿಂದ ದೀಪಾವಳಿ ಹಾಗೂ ರಾಜೋತ್ಸವ ಅದ್ದೂರಿಯಾಗಿ ಆಚರಿಸಿದರು.

ಈ ಸಂದರ್ಭದಲ್ಲಿ ಕಂಪನಿಯ ಮಹಿಳಾ ಮತ್ತು ಪುರುಷ ಸಿಬ್ಬಂದಿ ವರ್ಗ ಹಾಗೂ ‌USK ಆತ್ಮೀಯ ಬಳಗದ ರಘರಾಮ್ ಬಿ ಎನ, ಅಮರೇಶಣ್ಣ ಕಾಮನಕೇರಿ, ಮತ್ತು ಆತ್ಮೀಯ ಬಳಗದವರು ಇದ್ದರು ದಾವಣಗೆರೆ ಜಿಲ್ಲಾ ರೆಡಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಆನಂದ ಜ್ಯೋತಿ ಜಿಲ್ಲಾ ಜನರಲ್ ಸೆಕ್ರೆಟರಿ ರವರ ಮುಂದಾಳತ್ವದಲ್ಲಿ ಡಾ‌,ಚಿರಂತ ಎಸ ಎಂ, ಟೇಕ್ನಶನ್ ಗಿರೀಶ ಕಳಸಪ್ಪ ತಂಡದಿಂದ ರಕ್ತ ಸಂಗ್ರಹಿಸಿದರು ಈ ಸುಂದರವಾದ ಕ್ಷಣಗಳನ್ನು ಉಲ್ಲಾಸ್ ಫೋಟೋಗ್ರಫಿ ತಂಡದವರು ಸೇರೆ ಹಿಡದರು.

ಹೆಚ್ಚಿನ ಸುದ್ದಿ