ಪಿಸಿಬಿ ವಾಲಿಬಾಲ್ ಮತ್ತು ಥ್ರೋ ಬಾಲ್ ಪಂದ್ಯಾವಳಿಯ ಲೋಗೋ ಮತ್ತು ಟೀ ಶರ್ಟ್ ಬಿಡುಗಡೆ ಮಾಡಿದ- ಆಹಾರ ಸಚಿವ ಕೆಹೆಚ್.ಮುನಿಯಪ್ಪ.
ಪತ್ರಕರ್ತರು ತಮ್ಮ ಕುಟುಂಬದ ಜೊತೆ ಪ್ರತಿ 3 ತಿಂಗಳಿಗೊಮ್ಮೆ ಈ ರೀತಿಯ ರಸ ಸಂಜೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಒತ್ತಡ ನಿವಾರಣೆಗೆ ಸಹಕಾರಿಯಾಗುತ್ತದೆ .
ಎಲ್ಲಾ ಪತ್ರಕರ್ತರಿಗೂ ಅನುಕೂಲವಾಗುವ ರೀತಿಯಲ್ಲಿ ಎಪಿಲ್ ,ಬಿಪಿಎಲ್ ಕಾರ್ಡ್ಗಳನ್ನು ಶೀಘ್ರದಲ್ಲಿ ನೀಡುತ್ತೇನೆ.
ಅಭಿವೃದ್ಧಿಯ ವಿಚಾರದಲ್ಲಿ ಪಕ್ಷ ಬೇದ ಮರೆತು ಕೆಲಸ ಮಾಡಬೇಕಾಗುತ್ತದೆ ಆಗ ಮಾತ್ರ ದೇಶದ ಅಭಿವೃದ್ಧಿ ಕಾಣಲು ಸಾದ್ಯ.
ಬೆಂಗಳೂರು.29 ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಆಯೋಜಿಸಿರುವ ಪಿಸಿಬಿ ವಾಲಿಬಾಲ್ ಮತ್ತು ಥ್ರೋ ಬಾಲ್ ಪಂದ್ಯಾವಳಿಯ ಲೋಗೋ ಮತ್ತು ಟೀ ಶರ್ಟ್ ಬಿಡುಗಡೆ ಮಾಡಿದ ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್ ಮುನಿಯಪ್ಪ ನವರು ಉದ್ಘಾಟಿಸಿದರು.
ನಂತರ ಮಾತನಾಡಿದ ಸಚಿವರು ಪತ್ರಕರ್ತರು ಪ್ರತಿ ನಿತ್ಯ ಸುದ್ದಿಯನ್ನು ಬರೆಯುವುದರಲ್ಲಿ ನಿರತರಾಗಿದ್ದು ಕುಟುಂಬದ ಸದಸ್ಯರಿಗೆ ಸಮಯ ನೀಡುವುದು ತುಂಬಾ ಕಡಿಮೆ ಈ ರೀತಿಯ ರಸ ಸಂಜೆ ಕಾರ್ಯಕ್ರಮದ ಮೂಲಕ ತಮ್ಮ ಒತ್ತಡ ನಿವಾರಣೆ ಮಾಡಿಕೊಳ್ಳಬಹುದು ಇದು ಒಂದು ಉತ್ತಮ ಕಾರ್ಯಕ್ರಮ ಎಂದರು.
ಕೇಂದ್ರ ದಲ್ಲಿ ನಾನು 2010 ರಲ್ಲಿ ರೈಲ್ವೆ ಸಚಿವನಿದ್ದಾಗ ಹೊಸದಾಗಿ 2500 ಕಿಮೀ ಹೊಸ ರೈಲ್ವೆ ರಸ್ತೆಯ ನಿರ್ಮಾಣ ಮಾಡಿ 25 ಹೊಸ ರೈಲ್ ಗಳನ್ನು ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲ ಮಾಡಿದ್ದೆ ಎಂದರು
ಪತ್ರಕರ್ತರಿಗೆ ಅನುಕೂಲವಾಗುವ ರೀತಿಯಲ್ಲಿ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಗಳನ್ನು ನೀಡಲು ನಿರ್ದರಿಸಿದ್ದು ಪ್ರಸ್ ಕ್ಲಬ್ ನಲ್ಲಿಯೇ ಕ್ಯಾಂಪ್ ಮಾಡುವ ಮೂಲಕ ಅನುಕೂಲ ಮಾಡುತ್ತೇನೆ ಎಂದರು.
ಈ ರೀತಿಯ ರಸ ಸಂಜೆ ಕಾರ್ಯಕ್ರಮ ಗಳು ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯಬೇಕು ಎಂದು ಮಾಧ್ಯಮದವರನ್ನು ಉರುದುಂಬಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎನ್ ಎ ಹ್ಯಾರಿಸ್, ಪ್ರಸ್ ಕ್ಲಬ್ ನ ಅಧ್ಯಕ್ಷರಾದ ಆರ್ ಶ್ರೀಧರ್,ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ಹಾಗೂ ಮಾಧ್ಯಮದ ವಿಭಾಗದ ಸಂಪಾದಕರು, ಹಿರಿಯ ವರದಿಗಾರರು ಉಪಸ್ಥಿತರಿದ್ದರು.