ಬೆಳಗಾವಿಯಲ್ಲಿ ನೇಡೆಯುತ್ತಿರುವ
ಚಳಿಗಾಲ ಅಧಿವೇಶನದಲ್ಲಿ
ರಾಜ್ಯದ ಎಲ್ಲಾ 30 ಜಿಲ್ಲೆಗಳಿಂದ ಸುಮಾರು 20,000 ಕುರುಬ ಸಮಾಜದ ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಬೆಳಗಾವಿಯೊಂದರಲ್ಲೇ 5 ಲಕ್ಷಕ್ಕೂ ಹೆಚ್ಚು ಕುರುಬರು ಇದ್ದಾರೆ.
ಬೆಂಗಳೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ವರ್ಗಕ್ಕೆ ಸೇರಿಸುವಂತೆ ಆಗ್ರಹಿಸಿ ಡಿಸೆಂಬರ್ 15ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ಪ್ರದೇಶ ಕುರುಬ ಎಸ್‌ಟಿ ಹೋರಾಟ ಸಮಿತಿ ಸೇರಿದಂತೆ ಇದರೆ ಹಲವಾರು ಕುರುಬ ಸಮುದಾಯದ ಸಂಘಟನೆಗಳು ತಿಳಿಸಿವೆ.
ಸಮಿತಿ ಅಧ್ಯಕ್ಷ ಸಿದ್ದಣ್ಣ ತೇಜಿ ಅವರು ಮಾತನಾಡಿ, ರಾಜ್ಯದ ಎಲ್ಲಾ 30 ಜಿಲ್ಲೆಗಳಿಂದ ಸುಮಾರು 20,000 ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಬೆಳಗಾವಿಯೊಂದರಲ್ಲೇ 5 ಲಕ್ಷಕ್ಕೂ ಹೆಚ್ಚು ಕುರುಬರು ಇದ್ದಾರೆ. ರಾಜ್ಯದಾದ್ಯಂತ ಕುರುಬರನ್ನು ಪರಿಶಿಷ್ಟ ಪಂಗಡ ಎಂದು ವರ್ಗೀಕರಿಸಬೇಕೆಂಬುದು ನಮ್ಮ ಏಕೈಕ ಬೇಡಿಕೆಯಾಗಿದೆ” ಎಂದು ಹೇಳಿದರು.
ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ. ಕೊಡಗು ಮತ್ತು ಬೀದರ್ ಜಿಲ್ಲೆಗಳಲ್ಲಿ, ಕುರುಬರು ಎಸ್‌ಟಿ ಸ್ಥಾನಮಾನ ಮತ್ತು ಮೀಸಲಾತಿ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ, ಆದರೆ ಉಳಿದ ಭಾಗಗಳಲ್ಲಿ 2A, ಒಬಿಸಿ ವರ್ಗದಲ್ಲಿಯೇ ಉಳಿದಿದ್ದೇವೆ. ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಸಮುದಾಯವನ್ನು ಎಸ್‌ಟಿ ಎಂದು ಗುರುತಿಸಲಾಗಿದೆ. ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಎಸ್‌ಸಿ ಎಂದು ಗುರುತಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಎಸ ಟಿ ಪಟ್ಟಿ ಇರಬೇಕಾದ ಕುರುಬ ಸಮಾಜವನ್ನು ಒಬಿಸಿ ಯಲ್ಲಿ ಇಟ್ಟು ಅನ್ಯಾಯ ಮಾಡಿದ್ದಾರೆ ದೇಶ ಮೂಲ ಆದಿವಾಸಿ ಜನಾಂಗಗಳಲ್ಲಿ ಕರ್ನಾಟಕದ ಕುರುಬ ಸಮಾಜವು ಪ್ರಮುಖವಾದದ್ದು ಆದರಿಂದ ರಾಜ್ಯ ಸರ್ಕಾರ ಗೊಂಡ ಕುರುಬ ಪರ್ಯಾಯ ಪದವಾಗಿ ಕುರಬ ಸಮಾಜವನ್ನು ಎಸ ಟಿ ಪಟ್ಟಿಗೆ ಸೇರಸಲ್ಲೆಬೇಕು ಎಂದು ಬೆಳಗಾವಿಯಲ್ಲಿ ನೇಡೆಯುತ್ತಿರುವ ಚಳಿಗಾಲ ಅಧಿವೇಶನದ ಡಿಸೆಂಬರ್ 15 ರಂದು ಪ್ರತಿಭಟಿಸಿ ಆಗ್ರಹ ಮಾಡಲಿದೆವೆ ಎಂದು ತಿಳಿಸಿದ್ದಾರೆ

