KRGRV
Monday, December 23, 2024
Homeರಾಜಕೀಯಚನ್ನಪಟ್ಟಣ ಪ್ರಚಾರ ಅಖಾಡಕ್ಕೆ ಜಮೀರ್ ಅಹಮದ್ ಖಾನ್ ಪ್ರವೇಶ

ಚನ್ನಪಟ್ಟಣ ಪ್ರಚಾರ ಅಖಾಡಕ್ಕೆ ಜಮೀರ್ ಅಹಮದ್ ಖಾನ್ ಪ್ರವೇಶ

ಚನ್ನಪಟ್ಟಣ: ತೀವ್ರ ಜಿದ್ದಾಜಿದ್ದಿನ ಕಣವಾಗಿರುವ ಚನ್ನಪಟ್ಟಣ ಉಪ ಚುನಾವಣೆ ಪ್ರಚಾರ ಕ್ಕೆ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಪ್ರವೇಶ ಮಾಡಿದ್ದು ಮೂರು ದಿನಗಳ ಕಾಲ ಇಲ್ಲೇ ಠಿಕಾಣಿ ಹೂಡಲಿದ್ದಾರೆ.
ಸಂಡೂರು, ಶಿಗ್ಗಾವ್ ನಲ್ಲಿ ಒಂದು ವಾರ ಪ್ರಚಾರ ಮುಗಿಸಿ ಶನಿವಾರ ಬೆಂಗಳೂರಿಗೆ ಆಗಮಿಸಿದ ಅವರು ಕೆ ಎಂ ಡಿಸಿ ಅಧ್ಯಕ್ಷ ಬಿಕೆ ಅಲ್ತಾಫ್ ಖಾನ್ ಜತೆಗೂಡಿ ಸಂಜೆಯಿಂದಲೇ ಚನ್ನಪಟ್ಟಣ ದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಪರ ಪ್ರಚಾರ ಆರಂಭಿಸಿದರು.
ಬಿಸ್ಮಿಲ್ಲಾ ನಗರ, ಬಡಾ ಮಖಾನ್ , ಯಾರಬ್ ನಗರ ದಲ್ಲಿ ಮುಖಂಡರ ಸಭೆ ನಡೆಸಿ ರೋಡ್ ಶೋ ನಡೆಸಿ ಮಾತನಾಡಿದ ಅವರು , ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆವ ಸರ್ಕಾರ. ಐದು ಗ್ಯಾರಂಟಿ ಅನುಷ್ಠಾನ ಮಾಡಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್, 120 ಕೆರೆ ತುಂಬಿಸುವ ಮೂಲಕ ತಾಲೂಕಿನ ರೈತರ ಆಶಾ ಕಿರಣ ವಾಗಿದ್ದಾರೆ. ಶಾಸಕ ರಾಗಿ ಕ್ಷೇತ್ರದ ಅಭಿವೃದ್ಧಿ ಗೆ ದೊಡ್ಡ ಮಟ್ಟದ ಕೊಡುಗೆ ನೀಡಿರುವ ಅವರನ್ನು ಮತ್ತೊಮ್ಮೆ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಮುಸ್ಲಿಂ ಮುಖಂಡರ ಸಭೆ

ಈ ಮಧ್ಯೆ ಪ್ರಮುಖ ಮುಸ್ಲಿಂ ಮುಖಂಡರ ಸಭೆ ನಡೆಸಿದ ಜಮೀರ್ ಅಹಮದ್ ಖಾನ್ ಅವರು, ಚುನಾವಣೆ ಕಾರ್ಯತಂತ್ರ ಕುರಿತು ಸಮಾಲೋಚನೆ ನಡೆಸಿದರು.
ಮುಸ್ಲಿಂ ಸಮುದಾಯದ ಮತಗಳು ಬೇರೆ ಕಡೆ ಚದುರಬಾರದು. ಜತೆಗೆ ಮತದಾನ ಪ್ರಮಾಣ ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ಇದು ನಮಗೆ ಪ್ರತಿಷ್ಠೆ ಚುನಾವಣೆ ಹೀಗಾಗಿ ಸಮುದಾಯ ಪೂರ್ಣ ಪ್ರಮಾಣ ದಲ್ಲಿ ಕಾಂಗ್ರೆಸ್ ಪರ ನಿಂತು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಗೆ ಬಲ ತುಂಬಬೇಕು ಎಂದು ಮನವಿ ಮಾಡಿದರು.
ಪ್ರಚಾರಕ್ಕೆ ಆಗಮಿಸಿದ ಜಮೀರ್ ಅಹಮದ್ ಖಾನ್ ಅವರೊಂದಿಗೆ ಸಚಿವ ರಹೀಮ್ ಖಾನ್,
ಮಾಜಿ ಸಂಸದ ಡಿಕೆ ಸುರೇಶ್, ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಚರ್ಚೆ ನಡೆಸಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಗುಜರಿ ಅಫ್ರೋಜ್ ಅವರು ಜಮೀರ್ ಅಹಮದ್ ಖಾನ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು.

ಹೆಚ್ಚಿನ ಸುದ್ದಿ