KRGRV
Tuesday, November 18, 2025
Homeವೈರಲ್ ಸುದ್ದಿದಲಿತರ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ಪ್ರಿಯಾಂಕಾ ಖರ್ಗೆ ಗಮನಕ್ಕೆ ತರಲುಬಂದ ದಲಿತ ಮುಖಂಡರು.? ಮಾರ್ಗ...

ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ಪ್ರಿಯಾಂಕಾ ಖರ್ಗೆ ಗಮನಕ್ಕೆ ತರಲುಬಂದ ದಲಿತ ಮುಖಂಡರು.? ಮಾರ್ಗ ಬದಲಿಸಿ ಪರಾರಿಯಾದ ಸಚಿವ ಪ್ರಿಯಾಂಕಾ.!

ಕಲಬುರಗಿ ಅ 13 :: ಕಲಬುರ್ಗಿಯಲ್ಲಿ ದಲಿತರ ಮತ್ತು ಮುಸ್ಲಿಂರ ಹಲ್ಲೆ , ಆಸ್ತಿ ಕಬಳಿಕೆ ಮಾಡುತ್ತಿರವ ಕೆಲವರ ಮೇಲೆ ಕಠಿಣ ಕಾನೂನು ಕ್ರಮ‌ ಕೈಗೊಳ್ಳುವಂತೆ ಕೋಟನೂರ ಬಳಿ ಸಚಿವ ಪ್ರಿಯಾಂಕ್ , ಅವರ ಗಮನಕ್ಕೆ ತರಲು ಸಿದ್ದವಾಗಿದ್ದ ದಲಿತ ಸೇನೆಯ ಕಾರ್ಯಕರ್ತರು ಇರುವ ಮಾಹಿತಿ ಪಡೆದು ಮಾರ್ಗ ಬಲಿಸಿ ಚಿತ್ತಾಪುರಕ್ಕೆ ಪರಾರಿಯಾದ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ದಲಿತ ಸೇನೆ ಅಧ್ಯಕ್ಷ ಹಣಮಂತ ಯಳಸಂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಚಿವರ ದಲಿತ ವಿರೋಧಿ ನೀತಿ ಖಂಡಿಸಿ ದಲಿತ ಸೇನೆಯ ಕಾರ್ಯಕರ್ತರು‌ ರಸ್ತೆ ತಡೆಗೆ ಮುಂದಾದರು ಆಗ ಪೋಲಿಸರು‌ ಮತ್ತು ‌ಕಾರ್ಯಕರ್ತರ ಮಧ್ಯೆ ಕೆಲ ಕಾಲ‌ ವಾಗ್ವಾದ ನಡೆಯಿತು ಪೋಲಿಸರು ದಲಿತ ಮುಖಂಡರನ್ನು ಮನವೊಲಿಸಿ ಪ್ರತಿಭಟನೆ ಶಾಂತಗೋಳಿಸಿದರು

ಹಿಂದು ಪರ ಸಂಘಟನೆಗಳ ಹೆಸರಿನಲ್ಲಿ ಕೆಲವರು ದೌರ್ಜನ್ಯ,ಸುಲಿಗೆ ಮಾಡುತ್ತಿದ್ದು ಈ ವಿಷಯದ ಬಗ್ಗೆ ದಲಿತ ಬಂದುಗಳು ಸಚಿವರ ಗಮನಕ್ಕೆ ತರಲು ನಗರದ ಕೋಟನೂರ ಬಳಿ ನಿಂತರೆ ಸಚಿವರುವರು ಮಾರ್ಗ ಬದಲಿಸಿ ಬೇರೆ ಮಾರ್ಗವಾಗಿ ಚಿತ್ತಾಪೂರಕ್ಕೆ ತೆರಳುತ್ತಾರೆ ಇಂತವರಿಂದಲ್ಲೆ ದಲಿತರಿಗೆ ಅನ್ಯಾಯವಾಗುತ್ತದೆ ಎಂದು ಜನರು ಪ್ರಿಯಾಂಕಾ ಖರ್ಗೆ ವಿರುದ್ಧ ಘೋಷಣೆ ಕೂಗಿದರು.

ಈ‌‌ ಸಂದರ್ಭದಲ್ಲಿ ದಲಿನೆ ಸೇನೆ ಕಾರ್ಯಕರ್ತರು ಮುಖಂಡರು ಹಾಗೂ ಮುಸ್ಲಿಂ ಮುಖಂಡರು ಹಾಜರಿದ್ದರು

ಹೆಚ್ಚಿನ ಸುದ್ದಿ