ಧಾರವಾಡ/ಕಲ್ಲೂರು: ಪವಿತ್ರ ಶ್ರಾವಣ ಮಾಸದ ಮೊದಲ ಸೋಮವಾರ ಹಿಂದೂಗಳ ಪವಿತ್ರ ಶ್ರಾವಣ ಮಾಸದ ಪ್ರಾರಂಭವಾಗಿದ್ದು, ನಾಗರ ಪಂಚಮಿ ನಿಮಿತ್ತ ಗ್ರಾಮದ ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ ನೂತನ ಮಣ್ಣಿನಿಂದ ನಾಗಮೂರ್ತಿ ಪ್ರತಿಷ್ಠಾಪನೆ ಮಾಡಿ ಹಬ್ಬ ಆಚರಿಸಿದರು….
ತಾಲೂಕಿನ ಉಡಚಮ್ಮ ತಾಯಿ ಸುಕ್ಷೇತ್ರ ಕಲ್ಲೂರು ಗ್ರಾಮದಲ್ಲಿ, ನಾಗರ ಪಂಚಮಿ ನಿಮಿತ್ತವಾಗಿ ಕಲ್ಮೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಾಗಮೂರ್ತಿ ಪ್ರತಿಷ್ಠಾಪನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಊರಿನ ಸಮಸ್ತ ಜನರು ನಾಗಪ್ಪನಿಗೆ ಹಾಲು ಎರೆದು ನೈವೇದ್ಯ ಮಾಡಿ ಹಬ್ಬ ಆಚರಿಸಿದರು.
ಬೆಳಗಿನ ಜಾವ ಉಡಚಮ್ಮ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ನಾಗ ಪಂಚಮಿ ಹಬ್ಬವನ್ನು ಈ ಬಾರಿ ವಿಶೇಷವಾಗಿ ಆಚರಿಸಲಾಯಿತು. ನಾಗಮೂರ್ತಿ ಪ್ರತಿಷ್ಠಾಪನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಹಾದೇವ, ರಮೇಶ್, ಬಾಬಾ ಜಾನ್,ಮೌಲಾ, ಪ್ರವೀಣ್, ಬಸವರಾಜ ಹಾಗೂ ಗ್ರಾಮದ ಹಿರಿಯರು ಮತ್ತು ಯುವಕ ಮಂಡಳಿ ಸೇರಿದಂತೆ, ಸಮಸ್ತ ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿಗಾರರು: ಭರತ ಪೂಜಾರ (ಕಲ್ಲೂರು)

