ಲಿಂಗಸುಗೂರ : ತಾಲೂಕಿನ ನಡುಗಡೆ ಸಂತ್ರಸ್ಥರಿಗೆ ವಸತಿ ಸೌಲಭ್ಯ ಜೊತೆ ಶಾಶ್ವತ ಸ್ಥಳಾಂತರಕ್ಕೆ ಒತ್ತಾಯಸಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹನುಮಂತಪ್ಪ ವೆಂಕಟಾಪುರ ಹೇಳಿದರು.
ಅವರು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಯರಗೋಡಿ ಗ್ರಾಮದ ಮಾದರಗಡ್ಡಿ, ಕಡದರಗಡ್ಡಿ, ವೆಂಕಮ್ಮನಗಡ್ಡಿ ಹಾಗೂ ಕರಕಲಗಡ್ಡಿ ನಡುಗಡೆ ಪ್ರದೇಶದಲ್ಲಿ ವಾಸಿಸುತ್ತಿರುವರ ಸುಮಾರು 25 ಕುಟುಂಬದವರನ್ನು ಶಾಶ್ವತವಾಗಿ ಸ್ಥಳಾಂತರಿಸಲು ಜಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದು, ಲಿಂಗಸುಗೂರ ತಾಲೂಕಿನ ಗುರುಗುಂಟಾ ಹೋಬಳಿಯ ನಡುಗಡ್ಡೆ ಗ್ರಾಮಗಳು ಸರ್ವೆ ನಂ19ರಲ್ಲಿ ಸರಕಾರಿ ಜಮೀನು ಕಂದಾಯ ಇಲಾಖೆಗೆ ಸೇರಿದ ಸುಮಾರು 25 ಎಕರೆ 10ಗುಂಟೆ ಜಮೀನು ಇದ್ದು ಅದನ್ನು ಅನಧಿಕೃತವಾಗಿ ಒಬ್ಬ ವ್ಯಕ್ತಿ ಸಾಗುವಳಿ ಮಾಡುತ್ತಿದ್ದು, ಅದೆ ಸರ್ವೇ ನಂ 19ರಲ್ಲಿ ಒಂದು ಮೂಲೆಯಲ್ಲಿ 20 ಗುಂಟೆ ಜಾಗದಲ್ಲಿ ಈಗಾಗಲೆ ಕದರಗಡ್ಡಿ 5 ಜನ ಮಾದರಗಡ್ಡಿಯ 6ಜನ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿ ತಾಲೂಕು ಆಡಳಿತ ತ ತನ್ನ ತನ್ನ ಜವ ಜವಾಬ್ದಾರಿಯನ್ನು ಕಳೆದುಕೊಂಡಿದೆ. ಆದರೆ, ಈಗಾಗಲೆ ಪತ್ರನೀಡಿದ ಜಾಗವನ್ನು ಪರಿಶೀಲಿಸಿ ಅದು ಸಂಪೂರ್ಣ ಕಲ್ಲುಗಳಿಂದ ಕೂಡಿದೆ. ಫಲಾನುಭವಿಗಳು ಈ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಹಿಂದೇಟು ಹಾಕಿದ್ದು, ಒಟ್ಟು 25 ದಲಿತ ಸಂತ್ರಸ್ಥ ಕುಟುಂಬಗಳಲ್ಲಿ ತಾಲೂಕು ಆಡಳಿತ ಕೇವಲ 11 ಕುಂಟುಂಬಗಳಿಗೆ ಮಾತ್ರ ಹಕ್ಕು ಪತ್ರ ನೀಡಿದ್ದು, ಇನ್ನೂಳಿದ ಕುಟುಂಬಳಿಗೆ ಆಯ್ಕೆ ಪಟ್ಟಿಯಿಂದ ಕೈ ಬಿಟ್ಟಿದ್ದಾರೆ ಉಳಿದ ಸಂತ್ರಸ್ಥ ಕುಟುಂಬಗಳಿಗೆ ಹಕ್ಕು ಪತ್ರ ನೀಡಬೇಕು. ಸರ್ವೆ ನಂ 19ರಲ್ಲಿ ದೌರ್ಜನ್ಯವಾಗಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ವ್ಯಕ್ತಿಯಿಂದ ಸರಕಾರಿ ಜಮೀನು ವಶಕ್ಕೆ ಪಡೆಯದೆ ಅಧಿಕಾರಿಗಳು ಅವರೊಂದಿಗೆ ಶಾಮಿಲಾಗಿದ್ದಾರೆ ಎಂದು ಆರೊಪಿಸಿದ್ದಾರೆ.ಹಕ್ಕೊತ್ತಾಯಗಳು ನಡುಗಡ್ಡೆ ಸಂತ್ರಸ್ಥರು ಹೊಂದಿರುವ ಪಿತ್ರಾಜಿತ 66 ಎಕರೆ ಜಮೀನಿನನ್ನು ಸರಕಾರ ಖರೀದಿ ಮಾಡಬೇಕು ಅಥವಾ ಅವರಿಗೆ ಅದಕ್ಕೆ ಪರ್ಯಾಯವಾಗಿ ಗುಣಮಟ್ಟದ ಸರಕಾರಿ ಭೂಮಿಯನ್ನು ನೀಡಬೇಕು. ಸಹಾಯಕ ಆಯುಕ್ತರು, ತಹಶಿಲ್ದಾರು ಸಂತ್ರಸ್ಥರು ಹಾಗೂ ದಲಿತ ಸಂಘಟನೆ ಜೊತೆ ಸಭೆ ಕರೆಯಬೇಕು. ಇಲ್ಲವಾದಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ಆಗ್ರಹಿಸಿರುವರು. ದಸಂಸ ತಾಲೂಕು ಅಧ್ಯಕ್ಷ ಶರಣಪ್ಪ ಕಟ್ಟಿಮನಿ, ಅಜಪ್ಪ ಕರಡಕಲ್, ಶರಣಪ್ಪ ಬಂಕದಮನಿ, ಲಕ್ಕಪ್ಪ ನಾಗರಾಳ, ಇದ್ದರು.

