KRGRV
Monday, December 23, 2024
Homeಬೆಂಗಳೂರುನಾಳೆ ಅರಮನೆ ಮೈದಾನದಲ್ಲಿ ಗುತ್ತಿಗೆದಾರ ಸಂಘದ ಸಮಾವೇಶಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ :: ಜಗನಾಥ ಸೇಗಜಿ

ನಾಳೆ ಅರಮನೆ ಮೈದಾನದಲ್ಲಿ ಗುತ್ತಿಗೆದಾರ ಸಂಘದ ಸಮಾವೇಶಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ :: ಜಗನಾಥ ಸೇಗಜಿ

ತತ್ಬೆಂತರಹಗಳೂರು : ಬೆಂಗಳೂರಿನ ಅರಮನೆ ಆವರಣದಲ್ಲಿ ನಾಳೆ ಮಾ.4 ರಿಂದ 2 ದಿನಗಳ ಕಾಲ ರಾಜ್ಯ ಗುತ್ತಿಗೆದಾರರ ಸಂಘದ ಸಮ್ಮೇಳನ ಆಯೋಜಿಸಲಾಗಿದೆ ಎಂದು ರಾಜ್ಯ ಕಾರ್ಯಾಧ್ಯಕ್ಷರಾದ ಜಗನಾಥ‌‌ ಸೆಗಜಿ ಹೇಳಿದರು.

ಅರಮನೆಯ ‌ಮೈದಾನದಲ್ಲಿ ಇಂದು GRV NEWS ನೊಂದಿಗೆ ಮಾತನಾಡಿದ ಸೇಗಜಿಯವರು ನಾಳೆ ಸೋಮವಾರ ಬೆಳಗ್ಗೆ 10ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದು, ರಾಜ್ಯಾಧ್ಯಕ್ಷ ಡಿ.ಕೆಂಪಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ‌ ಲೋಕೋಪಯೋಗಿ ಸಚಿವರಾದ ಸತೀಶ ಜಾರಕೀವಳಿ ಆರೋಗ್ಯ ಸಚಿವರಾದ ದಿನೇಶ ಗುಂಡುರಾವ್ ಹಾಗೂ ಪ್ರಮುಖ ಸಚಿವರು, ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಜಿಎಸ್‌ಟಿ ಬಿಡುಗಡೆ, ಪ್ಯಾಕೇಜ್ ಗುತ್ತಿಗೆ ಇತ್ಯಾದಿ ಗುತ್ತಿಗೆದಾರರ ಸಮಸ್ಯೆಗಳಡೆ ಚರ್ಚೆ ನಡೆಯಲಿದೆ. ಬಿಲ್ ಪಾವತಿ ಬಾಕಿ, ಅಧಿಕಾರಿಗಳು ಪ್ಯಾಕೇಜ್ ಗುತ್ತಿಗೆಯನ್ನು ಬೇಕಾದವರಿಗೆ ಕೊಡುತ್ತಿರುವುದು. ಎಸ್ಸಿ, ಎಸ್ಟಿ ಗುತ್ತಿಗೆದಾರರು ಪಡೆಯಬೇಕಿರುವ ಕಾಮಗಾರಿಗಳನ್ನು ಅನ್ಯರು ಪಡೆಯುತ್ತಿರುವುದು. ಹಿಂದಿನ ಸರ್ಕಾರದಲ್ಲಿದ್ದ ಭ್ರಷ್ಟಾಚಾರ ಈಗಲೂ ಮುಂದುವರಿದಿರುವ ಕುರಿತಂತೆ ಸಿಎಂ ಗಮನಕ್ಕೆ ತಂದು ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದರು.

ಸಂಘದ ಪದಾಧಿಕಾರಿಗಳ GRV NEWS ನ ಜೋತೆ ಮಾತನಾಡಿದ ವಿಡಿಯೋಗಳು

ರಾಜ್ಯಾದ್ಯಂತ 3000 ಕ್ಕೂ ಅಧಿಕ ಗುತ್ತಿಗೆದಾರರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ಗುತ್ತಿಗೆದಾರರ ಪ್ರಮುಖ ಬೇಡಿಕೆಗಳನ್ನು ಈ ಸಮಾವೇಶಕ್ಕೆ ಆಗಮಿಸುತ್ತಿರು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಮತ್ತು ಸಚಿವರುಗಳು ಈಡೇರಿಸುತ್ತಾರೆ ಎಂದು ವಿಶ್ವಾಸವನ್ನು ಗುತ್ತಿಗೆದ್ದಾರಸಂಘ ಹೊಂದಿದ್ದೆ ತಿಳಸಿದರು

ಈ ಸಂದರ್ಭದಲ್ಲಿ ಕರ್ನಾಟಕ ಗುತ್ತಿಗೆದಾರ ರಕ್ಷಣಾ ವೇದಿಕೆ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಶಿವಲಿಂಗಯ್ಯ ಸಿ ಡೊಣ್ಣೂರಮಠ ಕರ್ನಾಟಕ ಗುತ್ತಿಗೆದಾರ ಸಂಘದ ರಾಜ್ಯ ಉಪಾಧ್ಯಕ್ಷರಾ ದಿನೇಶ್, ಕರ್ನಾಟಕ ಗುತ್ತಿಗೆದಾರ ಸಂಘದ ರಾಜ್ಯ ಉಪಾಧ್ಯಕ್ಷರಾ ಕೃಷ್ಣೆಗೌಡ ಹಾಗೂ ಸಂಘದ ಹಿರಿಯ ಸದಸ್ಯರು ಇದ್ದರು.

ಹೆಚ್ಚಿನ ಸುದ್ದಿ