KRGRV
Monday, December 23, 2024
Homeಜಿಲ್ಲಾ ಸುದ್ದಿಗಳುನೆಲಮಂಗಲ ಕಳಲುಘಟ್ಟ ಗ್ರಾಮ ಪಂಚಾಯ್ತಿಯಲ್ಲಿ ಪಿಡಿಒ, ಅಧ್ಯಕ್ಷರ ಪತಿಯಿಂದ ಬಾರೀ ಅವ್ಯವಹಾರ; ಗ್ರಾಮ ಪಂಚಾಯಿತಿ ಸದಸ್ಯರ...

ನೆಲಮಂಗಲ ಕಳಲುಘಟ್ಟ ಗ್ರಾಮ ಪಂಚಾಯ್ತಿಯಲ್ಲಿ ಪಿಡಿಒ, ಅಧ್ಯಕ್ಷರ ಪತಿಯಿಂದ ಬಾರೀ ಅವ್ಯವಹಾರ; ಗ್ರಾಮ ಪಂಚಾಯಿತಿ ಸದಸ್ಯರ ಆರೋಪ.

ಬೆಂಗಳೂರು ನವೆಂಬರ್ 6; ನೆಲಮಂಗಲ ತಾಲೂಕು ತ್ಯಾಮಗೋಡ್ಲು ಕಳಲು ಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸೌಮ್ಯರವರ ಪತಿ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆಡಳಿತವನ್ನು ದುರುಪಯೋಗ ಮಾಡಿಕೊಂಡು ಸರ್ವಾಧಿಕಾರಿ ದೋರಣೆ ತಾಳುತ್ತಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯರುಗಳು ಆರೋಪಿಸಿದ್ದಾರೆ.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್, ಮಾಜಿ ಅಧ್ಯಕ್ಷ ಲೋಕೇಶ್, ಆನಂದ್,ಶ್ರೀನಿವಾಸ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪತಿ ಅಂಜನಮೂರ್ತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷತೆ ವಹಿಸಿ ಜೆ ಜೆಎಂ ವಿಚಾರವಾಗಿ ಸಭೆ ಕರೆದು ಇಂಜಿನಿಯರ್, ಗುತ್ತಿಗೆದಾರರಿಗೆ ಕಮೀಶನ್ ಗೆ ಬೇಡಿಕೆ ಇಟ್ಟಿದ್ದಾರೆ, ಅಧ್ಯಕ್ಷರ ಪತಿ ಗ್ರಾಮ ಪಂಚಾಯಿತಿಯ ನಡವಳಿಕೆ ಪುಸ್ತಕನ್ನು ತೆಗೆದುಕೊಂಡು ಸದಸ್ಯರ ಮನೆಗಳ ಹತ್ತಿರ ಹೋಗಿ ಖಾತೆಗಳ ವಿಚಾರವಾಗಿ ಸಹಿ ಮಾಡಲು ಒತ್ತಾಯಿಸುತ್ತಾರೆ ಎಂದರು.

ಕೋಟ್ಯಾಂತರ ರೂಪಾಯಿ ಅವ್ಯವಹಾರ ಮುಚ್ಚಿ ಹಾಕಲು ರೆಜ್ಯುಲೇಶನ್ ಬುಕ್ಕನ್ನು ಯಾರೂ ನಮ್ಮಿಂದ ಕಿತ್ತು ಕೊಂಡು ಹೋಗಿದ್ದಾರೆ ಎಂದು ಅಧ್ಯಕ್ಷೆ ಸೌಮ್ಯ, ಪತಿ ಅಂಜನ ಮೂರ್ತಿ, ಪಿಡಿಒ‌ ಗೀತಮಣಿ ಕಳವು ಪ್ರಕರಣ ದಾಖಲಿಸಿ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದರು.

ಜಮಾಬಂದಿ ಸಭೆಯಲ್ಲಿ ಅಧ್ಯಕ್ಷರ ಪತಿ ಉಪಾಧ್ಯಕ್ಷರ ಪಕ್ಕದಲ್ಲಿ ಚೇರು ಹಾಕಿಸಿಕೊಂಡು ಫೈಲ್ ಚೆಕ್ಕು ಮಾಡುತ್ತಾರೆ, ಅಧ್ಯಕ್ಷರ ಪತಿಯೇ ವಾಟರ್ ಮನ್ ಕೆಲಸ ಮಾಡಿ ಸಂಬಳವನ್ನು ಸಂಬಂಧಿಕೆ ಹೆಸರಿನ ಖಾತೆಯಲ್ಲಿ ಹಾಕಿಸಿ ಡ್ರಾ ಮಾಡಿಕೊಂಡಿರುತ್ತಾರೆ,ಅಧ್ಯಕ್ಷರ ಪತಿಯೇ ಅಲಾನಾಯಕನಹಳ್ಳಿಯಲ್ಲಿ ಗ್ರಾಮದಲ್ಲಿ ಬೋರ್ ವೆಲ್ ಲಾರಿಗೆ ಪೂಜೆ ಮಾಡಿ ಚಾಲನೆ ನೀಡಿದ್ದಾರೆ, ಮಿಣ್ಣಾಪುರ ಗ್ರಾಮದಲ್ಲಿ ಅಧ್ಯಕ್ಷರ ಪತಿ ಅಂಜನ ಮೂರ್ತಿಯವರು ವಾಟರ್ ಫಿಲ್ಟರ್ ರಿಫೇರಿ ಮಾಡಿಸಿ ಅವರೇ ಉದ್ಘಾಟನೆ ಮಾಡಿದ್ದಾರೆ ಎಂದು ತಿಳಿಸಿದರು.

15ನೇ ಹಣಕಾಸು ಮಾರ್ಚ್ ತಿಂಗಳ ನಾಲ್ಕೇ ದಿನದಲ್ಲಿ 11ಲಕ್ಷ 75ಸಾವಿರ ಖರ್ಚು ತೋರಿಸಿ ಇದನ್ನು ಕೇಳಿದ ಉಪಾಧ್ಯಕ್ಷರಿಗೆ ಪಿಡಿಒ ಮತ್ತು ಅಧ್ಯಕ್ಷರ ಪತಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಹೇಳಿದರು.

ಹೆಚ್ಚಿನ ಸುದ್ದಿ