KRGRV
Monday, December 23, 2024
Homeರಾಜಕೀಯನೇಮಕ ಪಟ್ಟಿಯಲ್ಲಿ ಗದಗ ಜಿಲ್ಲೆಗೆ ಸಿಗದ ಸ್ಥಾನಮಾನ… bjp ಅಧ್ಯಕ್ಷ ವಿಜಯೇಂದ್ರ ವಿರುದ್ಧ ಗದಗ ಜಿಲ್ಲೆಯಲ್ಲಿ...

ನೇಮಕ ಪಟ್ಟಿಯಲ್ಲಿ ಗದಗ ಜಿಲ್ಲೆಗೆ ಸಿಗದ ಸ್ಥಾನಮಾನ… bjp ಅಧ್ಯಕ್ಷ ವಿಜಯೇಂದ್ರ ವಿರುದ್ಧ ಗದಗ ಜಿಲ್ಲೆಯಲ್ಲಿ ಭುಗಲೆದ್ದ ಅಸಮಾಧಾನ.


ಗದಗ : ರಾಜ್ಯ ಬಿಜೆಪಿ ಪಕ್ಷದ ನೂತನ ಪದಾಧಿಕಾರಿಗಳ ನೇಮಕದಲ್ಲಿ ಗದ
ಗ ಜಿಲ್ಲೆಗೆ ಸಿಗದ ಸ್ಥಾನಮಾನದಿಂದಾಗಿ ಬಿಜೆಪಿ ನೂತನ ಅಧ್ಯಕ್ಷ ವಿಜಯೇಂದ್ರ ವಿರುದ್ಧ ತೀವ್ರ ಅಸಮಾಧನ ವ್ಯಕ್ತವಾಗುತ್ತಿದೆ.
ರಾಜ್ಯ ಬಿಜೆಪಿ ಘಟಕಕ್ಕೆ ನೇಮಕ ಮಾಡಿದ ಪಟ್ಟಿಯಲ್ಲಿ ಗದಗ ಜಿಲ್ಲೆಯನ್ನು ಪರಿಗಣಿಸದೆ ಇರುವುದು, ಒಂದೆ ಒಂದು ಸ್ಥಾನ ಕೊಡದೆ ಇರುವುದರಿಂದ ಗದಗ ಜಿಲ್ಲೆಯ ಬಿಜೆಪಿ ನಾಯಕರು ಒಳಗೊಳಗೆ ಬೇಸರ ವ್ಯಕ್ತಪಡಿಸುತ್ತದ್ದಾರೆ.
ನೂತನವಾಗಿ ನೇಮಕ ಪಟ್ಟಿಯನ್ನು ನೋಡಿದರೆ ಬಿಎಸ್ ವೈ ಬಣಕ್ಕೆ ಮಣೆ ಹಾಕಿದ್ದು ಸ್ಪಷ್ಟವಾಗುತ್ತಿದೆ.
*ಇದೊಂದು ಹೊಂದಾಣಿಕೆ ರಾಜಕಾರಣದ ನೇಮಕ ಎಂಬ ಮಾತುಗಳು ಚರ್ಚೆಯಾಗುತ್ತಿರುವ ಜೊತೆಗೆ *ಗದಗ ಜಿಲ್ಲೆಯನ್ನು ಬಿಜೆಪಿ ಮುಕ್ತ ಮಾಡುವ ಸಂಚು* ಇದರಲ್ಲಿ ಅಡಗಿದೆ ಎಂಬ ಮಾತುಗಳು ಗುಸು ಗುಸು ನಡೆದಿವೆ.
ಗದಗ ಜಿಲ್ಲೆಯ ಜೊತೆಗೆ ಧಾರವಾಡ ಜಿಲ್ಲೆಗೂ ಮಾನ್ಯತೆ ಸಿಕ್ಕಿಲ್ಲ..ಬಾಗಲಕೋಟೆಗೆ ಕೊಟ್ಟ ಮಾನ್ಯತೆ ಬಸನಗೌಡಪಾಟೀಲ ಯತ್ನಾಳ ವಿರುದ್ಧದ ನೇಮಕ ಎಂಬುದು ಸ್ಪಷ್ಟವಾಗುತ್ತಿದೆ.
ಬಣ ಮತ್ತು ಸೇಡಿನ ರಾಜಕೀಯದಿಂದ ಪಕ್ಷ‌ ಸಂಘಟನೆ ಸಾಧ್ಯವೇ ಇಲ್ಲ, ಈ ರೀತಿಯ ನೇಮಕ ಈ ಹಿಂದೆ ನಡೆದಿಲ್ಲ ಎಂಬ ಚರ್ಚೆಗಳ ಜೊತೆಗೆ ಬಿಜೆಪಿ ಇನ್ನಷ್ಟು ಬಣಗಳಾಗಿ ರೂಪಗೊಳ್ಳುವ ಸಾಧ್ಯತೆ ಹೆಚ್ಚಾಗುತ್ತಿದೆ ಎಂಬ ಚರ್ಚೆಗಳು ಕೇಳಲಾಗುತ್ತಿದೆ.
ಪಕ್ಷ ಸಂಘಟನೆಯ ಚತುರ, ಪ್ರಭುದ್ಧ ರಾಜಕಾರಣಿ, ಹಾಗೆ ಹೀಗೆ ಎಂಬುದು ಕೇವಲ ಪತ್ರಿಕೆಯ ಜಾಹೀರಾತಿಗೆ ಮಾತ್ರ ಸಿಮೀತ ಎಂಬ ಚರ್ಚೆಗಳು ಜೋರಾಗಿ ನಡೆದಿವೆ.
ಗದಗ ಜಿಲ್ಲೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಅರೆನಾಡಿ, ಅಪ್ರಭುದ್ದ, ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವ ಹಿಂಬಾಲಕರ ಮಾತಿಗೆ ಕಿವಿ ಕೊಟ್ಟು ಪಕ್ಷ ಕಟ್ಟಲು ಹೋದರೆ ಬಲವರ್ಧನೆ ಸಾಧ್ಯವೇ ಇಲ್ಲ ಎಂಬುದನ್ನು ನೂತನ ಅಧ್ಯಕ್ಷರು ಅರಿತುಕೊಳ್ಳಬೇಕೆಂಬ ಸಲಹಾ ಮಾತಗಳು ತೀವ್ರವಾಗಿವೆ.
ಬಿ.ಎಸ್.ಯಡಿಯೂರಪ್ಪ ಅವರನ್ನು ನೋಡಿ ಮೌನಕ್ಕೆ ಶರಣಾಗಬೇಕಾದ ಅನಿವಾರ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈಗಾಗಲೆ ಕರ್ನಾಟಕದಲ್ಲಿ ಪಕ್ಷಕ್ಕೆ ಸಮರ್ಥ ನಾಯಕರಿಲ್ಲದೆ ಅದೋಗತಿಗೆ ಹೋಗಿದೆ. ಇನ್ನೂ ಈ ರೀತಿಯ ನೇಮಕ, ಬಣ, ಸೇಡಿನ ರಾಜಕಾರಣದಿಂದ ಪಕ್ಷ ಕೆಲವರಿಗೆ ಮಾತ್ರ ಎಂಬಂತಾಗುವುದರಲ್ಲಿ ಸಂಶಯವಿಲ್ಲ ಎಂಬುದು ಕೇಳಲಾಗುತ್ತಿದೆ.
ವಿಜಯೇಂದ್ರೋತ್ಸವ ಆಗಬೇಕಂದರೆ ಈಗಿರುವ ಅರೆನಾಡಿ ಹಿಂಬಾಲಕರನ್ನು, ಹಣದಾಹಿ ಹಿಂಬಾಲಕರನ್ನು, ಸ್ವಾರ್ಥಕ್ಕೆ ಪಕ್ಷವನ್ನು, ಸ್ಥಾನಮಾನವನ್ನು ಬಳಸಿಕೊಳ್ಳುವವರನ್ನು, ಪಕ್ಷಕ್ಕೆ ಮೋಸ ಎಸಗುವವರನ್ನು, ಅಧ್ಯಕ್ಷರು ನನ್ನ ಜೇಬಲ್ಲಿದ್ದಾರೆ, ನನ್ನ ಕೈಚಿಲಾದಲ್ಲಿದ್ದಾರೆಂದು ಬುರುಡೆ ಬಿಡುವವರನ್ನು ದೂರವಿಟ್ಟಾಗ ಮಾತ್ರ ರಾಜ್ಯ ಬಿಜೆಪಿ ಸಂಘಟನೆಗೊಳ್ಳಬಹುದೆ ವಿನಹ ಇನ್ನೊಬ್ಬರ ಬಾಯಿಗೆ ಕಿವಿ ಕೊಟ್ಟರೆ ವಿಜಯ ಬದಲು ಅಪಜಯ ಗ್ಯಾರಂಟಿ ಎಂಬ ಮಾತುಗಳು ತೀವ್ರಗೊಂಡಿವೆ.


ಯತ್ನಾಳಗೆ ಹೆದರಿದರಾ ಯಡಿಯೂರಪ್ಪ..?
ಬಿಜೆಪಿ ನೂತನ ಅಧ್ಯಕ್ಷ ವಿಜಯೇಂದ್ರರಿಗೆ ಬಾಯಿಗೆ ಬಂದಂತೆ ರಾಜಕೀಯ ಮಾತುಗಳನ್ನಾಡುತ್ತಿರುವ ಬಿಜೆಪಿ ಹಿರಿಯ ನಾಯಕ ಬಸನಗೌಡಪಾಟೀಲ ಯತ್ನಾಳ ವಿರುದ್ಧ ಮಾತನಾಡುವುದಿಲ್ಲ, ಹೈಕಮಾಂಡ್ ಗೆ ದೂರು ಕೊಡೊದಿಲ್ಲ ಎಂದು ಹೇಳಿದ್ದನ್ನು ನೋಡಿದರೆ ರಾಜಾಹುಲಿ ಯಡಿಯೂರಪ್ಪ ಯತ್ನಾಳಗೆ ಹೆದರಿದರಾ..? ಎಂಬ ಪ್ರಶ್ನೆ ಭುಗಿಲೆದ್ದಿದೆ…

ಹೆಚ್ಚಿನ ಸುದ್ದಿ