ನಮ್ಮ ಕುಟುಂಬಕ್ಕೆ ಭಾರೀ ಅನ್ಯಾಯವಾಗಿದೆ, ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ: ವಿಜಯಾನಂದ ಕಾಶಪ್ಪನವರ್
ಸಂಯುಕ್ತ ಪಾಟೀಲ್ ಯಾರು ಅನ್ನೋದು ಬಾಗಲಕೋಟೆ ಜಿಲ್ಲೆಯ ಯಾವ ಶಾಸಕನಿಗೂ ಗೊತ್ತಿಲ್ಲ, ಅವರು ತಮ್ಮನ್ನು ಕೂಡ ಯಾವತ್ತೂ ಭೇಟಿಯಾಗಿಲ್ಲ, ಅಸಲಿಗೆ ಅವರು ರೇಸ್ ನಲ್ಲಿರಲಿಲ್ಲ, ತನ್ನ ಪತ್ನಿ ಮತ್ತು ಅಜಯಕುಮಾರ್ ಸರ್ನಾಯಕ್-ಇಬ್ಬರ ಹೆಸರುಗಳನ್ನು ಮಾತ್ರ ಸಿಇಸಿಗೆ ಕಳಿಸಲಾಗಿತ್ತು. ಆದರೆ ಇಲ್ಲಿಗೆ ಬಂದು ನೋಡಿದಾಗ ಸ್ಕ್ರೀನಿಂಗ್ ಕಮಿಟಿ ಮುಂದಿದ್ದ ಪಟ್ಟಿಯಲ್ಲಿ ವೀಣಾ ಹೆಸರೇ ಇರಲಿಲ್ಲ ಎಂದು ಹೇಳಿದರು.
ದೆಹಲಿ: ಹುನಗುಂದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಕೆಂಡಾಮಂಡಲರಾಗಿದ್ದಾರೆ. ಅದು ಕಾಂಗ್ರೆಸ್ ಶಾಸಕ ಸ್ವಾಭಾವಿಕವೂ ಹೌದು. ಅವರ ಪತ್ನಿ ವೀಣಾ ಕಾಶಪ್ಪನವರ್ ಗೆ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಟಿಕೆಟ್ ತಪ್ಪಿರುವುದು ಹೆಚ್ಚುಕಡಿಮೆ ಖಚಿತವಾಗಿದೆ. ದೆಹಲಿಯಲ್ಲಿ ಸುದ್ದಿ ಗೊತ್ತಾದ ಬಳಿಕ ಮಾಧ್ಯಮದವರ ಜೊತೆ ಮಾತಾಡಿದ ಕಾಶಪ್ಪನವರ್ ಬೆಂಕಿಯುಗುಳಿದರು. ಸಂಯುಕ್ತ ಪಾಟೀಲ್ ಯಾರು ಅನ್ನೋದು ಬಾಗಲಕೋಟೆ ಜಿಲ್ಲೆಯ ಯಾವ ಶಾಸಕನಿಗೂ ಗೊತ್ತಿಲ್ಲ, ಅವರು ತಮ್ಮನ್ನು ಕೂಡ ಯಾವತ್ತೂ ಭೇಟಿಯಾಗಿಲ್ಲ, ಅಸಲಿಗೆ ಅವರು ರೇಸ್ ನಲ್ಲಿರಲಿಲ್ಲ, ತನ್ನ ಪತ್ನಿ ಮತ್ತು ಅಜಯಕುಮಾರ್ ಸರ್ನಾಯಕ್-ಇಬ್ಬರ ಹೆಸರುಗಳನ್ನು ಮಾತ್ರ ಸಿಇಸಿಗೆ ಕಳಿಸಲಾಗಿತ್ತು. ಆದರೆ ಇಲ್ಲಿಗೆ ಬಂದು ನೋಡಿದಾಗ ಸ್ಕ್ರೀನಿಂಗ್ ಕಮಿಟಿ ಮುಂದಿದ್ದ ಪಟ್ಟಿಯಲ್ಲಿ ವೀಣಾ ಹೆಸರೇ ಇರಲಿಲ್ಲ ಎಂದು ಹೇಳಿದರು.
ತಮ್ಮ ಕುಟುಂಬಕ್ಕೆ ಯಾಕೆ ಅನ್ಯಾಯ ಮಾಡಿದ್ದಾರೋ ಗೊತ್ತಿಲ್ಲ, ತಾನೊಬ್ಬ ಪಕ್ಷದ ಕಟ್ಟಾಳು ಮತ್ತು ಜವಾಬ್ದಾರಿಯುತ ಶಾಸಕನಾಗಿರುವುದರಿಂದ ಬಂಡೇಳುವ ಪ್ರಶ್ನೆ ಉದ್ಭವಿಸಲ್ಲ, ಅದರೆ ವಾಪಸ್ಸು ಹೋಗಿ ಕಾರ್ಯಕರ್ತರು, ಸಮುದಾಯದವರು ಮತ್ತು ಬಂಧು-ಮಿತ್ರರೊಂದಿಗೆ ಚರ್ಚೆ ಮಾಡಿ ಮುಂದಿನ ನಡೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ, ಚುನಾವಣೆಯನ್ನು ಅವರೇ ಮಾಡಿಕೊಳ್ಳಲಿ ಎಂದು ವಿಜಯಾನಂದ ಕಾಶಪ್ಪನವರ್ ಹೇಳಿದರು.