ಇಂಡಿ :: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಿರಕನ ಹಳ್ಳಿ ಗ್ರಾಮದ ಈರಣ್ಣ ಡೊಮನಾಳ ಎಂಬ ಯುವ ಪ್ರಗತಿಪರ ರೈತರೊಬ್ಬರು ಕೃಷಿ ಇಲಾಖೆಯ ಸಹಾಯ ಧನದಲ್ಲಿ ಒಂದು ಪವರ್ ವೀಡರ್ ಖರೀದಿಸಿ ಉಳುಮೆ ಮಾಡಲು ಅನುಕೂಲ ಆಗುವ ರೀತಿಯಲ್ಲಿ ಅದಕ್ಕೆ ಪರಿವರ್ತನೆ ಮಾಡಿಕೊಂಡು ಒಂದು ಟ್ರ್ಯಾಕ್ಟರ್ ಮಾಡುವ ಕೆಲಸವನ್ನ ಈ ಯಂತ್ರದಿಂದ ಮಾಡಿಕೊಳ್ಳುತ್ತಿದ್ದಾರೆ ಉಳುಮೆ, ಕುಂಟೆ, ರೆಂಟೆ ಜೊತೆಗೆ ಬೀಜ ಬಿತ್ತುವುದು ಇದರಿಂದಲೇ ಮಾಡುತ್ತಿದ್ದಾರೆ ಈ ರೈತನ ಬುದ್ಧಿವಂತಿಕೆ ನೋಡಿ ಹಲವಾರು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು ಅವರಂತೆಯೇ ಇತರರು ಕೂಡ ತಯಾರಿಸಿಕೊಂಡು ಬಳಕೆ ಇಂಡಿ ತಾಲ್ಲೂಕಿನ ರೈತರು ಮುಂದಾಗಿದ್ದಾರೆ.

ಭಾರತವು ಕೃಷಿ ಪ್ರಧಾನ ದೇಶ ಆದರೆ ರೈತರಿಗೆ ಬೆಳೆಗೆ ತಕ್ಕ ಬೆಲೆ ಸಿಗುವುದು ಕಷ್ಟದಾಯಕ ಅಧಿಕ ಪ್ರಮಾಣದ ಆದಾಯ ಬಾರದೆ ಇರುವದರಿಂದ ಆದುನಿಕ ಯಂತ್ರಗಳನು ಲಕ್ಷಾಂತರ ರೂ ನೀಡಿ ಖರೀದಿ ಮಾಡುವ ಶಕ್ತಿ ದೇಶ 95% ರೈತರಲ್ಲಿ ಇಲ್ಲ. ಇದನು ಅರಿತು ನಾನು ಕಡಿಮೆ ಖರ್ಚಿನ ಈ ಟ್ರ್ಯಾಕ್ಟರ್ ತಯಾರಿಸಿದೆನೆ ಮತ್ತು ನನ್ನ ಸಂಪರ್ಕ ಮಾಡಿದ ಎಲ್ಲರಿಗೂ ಈ ಟ್ರ್ಯಾಕ್ಟರ ತಯಾರಿಗೆ ಬೇಕಾಗಿವ ಸಾಮಗ್ರಿಗಳನ್ನು ಹೇಳಿದೆನೆ ಎಂದು ಪ್ರಗತಿ ಪರ ರೈತ ಈರಣ ಡೊಮನಾಲ ನಮ್ಮ ವಾಹಿನಿ ಹೇಳಿದರು.