ಹನಮಸಾಗರ(ಮೇ 28): ನಗರದಲ್ಲಿ ಇತ್ತೀಚೆಗೆ ನಡೆದ ಬಂಗಾರದ ಅಂಗಡಿ ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹನಮಸಾಗರ ಅಭಿಷೇಕ ಸಿಂಗ್ರಿ ಮಾಲೀಕತ್ವದ ಓಂಕಾರ ಜುವೇಲರಿ ಅಂಗಡಿ ಬಾಗಿಲು ಮುರಿದು 5.66.104 ರೂಪಾಯಿ ಬೇಲೆ ಬಾಳುವ ಆಭರಣ ಕಳ್ಳತನ ಮಾಡಿ ಹೋಗಿದ್ದರು.ಪ್ರಕರಣದ ಪತ್ತೆ ಕುರಿತು ರಚಿಸಿದ ವಿಶೇಷ ತಂಡದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಪತ್ತೆ ಹಚ್ಚಲು ಮಾಹಿತಿ ಪಡೆದು ಆರೋಪಿತರಿಗಾಗಿ ಕಾರ್ಯಾಚರಣೆ ಇದ್ದಾಗ ಕುಷ್ಟಗಿ ನಗರದ ಅಂಬೇಡ್ಕರ ಸರ್ಕಲ್ ಎನ್ ಎಚ್ 50 ರಲ್ಲಿ ಅನುಮಾನಾಸ್ಪದವಾಗಿ ತಿರಗಾಡುತ್ತಿದ ವ್ಯಕ್ತಿಗಳಾದ ವೆಂಕಟೇಶ ತಂದೆ ರಾಮಣ್ಣ ವಯಸ್ಸು 22 ಹಸನಕಲ್ ಸಿಂಧನೂರು, ದುರಗಪ್ಪ ಸೈದಪ್ಪ/ಗಿಡ್ಡಪ್ಪ ವಯಸ್ಸು 45 ಆನಂದ ನಗರ ಹುಬ್ಬಳ್ಳಿ.ಹಾಲಿವಸ್ತಿ ಕುಶಾಲನಗರ ಕೊಡಗು ವಶಕ್ಕೆ ಪಡೆದು ವಿಚಾರಣೆಯ ಮಾಡಿದಾಗ ಆರೋಪಿತರು ಕಳ್ಳತನ ಮಾಡಿದು ಒಪ್ಪಿಕೊಂಡಿದ್ದು ಬಂಗಾರ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡ ಆಪಾದಿತರ ಮೇಲೆ ಮುಂದಿನ ಕಾನೂನು ಕ್ರಮ ಜರಗಿಲಾಗುವದು ಎಂದು ಹೇಮಂತ ಕುಮಾರ ಹೆಚ್ಚುವರಿ ಪೋಲೀಸ ಅಧೀಕ್ಷಕರು ಕೊಪ್ಪಳ. ಸಿದ್ದಲಿಂಗಪ್ಪಗೌಡ ಪಾಟೀಲ ಡಿ ವಾಯ್ ಎಸ್ ಪಿ ಗಂಗಾವತಿ. ರವರ ಮಾರ್ಗದರ್ಶನದಲ್ಲಿ ಯಶವಂತ ಹೆಚ್ಚ್ ಬಿಸನಳ್ಳಿ ಸಿ ಪಿ ಐ ಕುಷ್ಟಗಿ ವೃತ್ತ. ಧನಂಜಯ ಎಮ್ ಪಿ ಎಸ್ ಐ ಹನಮಸಾಗರ. ವಸಂತ ಎ ಎಸ್ ಐ ಹನಮಸಾಗರ.ದುರಗಪ್ಪ ಎ ಎಸ್ಐ ಕುಷ್ಟಗಿ ಠಾಣೆ .ಅಮರೇಶ ಸಿ ಎಚ್ ಸಿ 168 .ಶ್ರೀಧರ ಸಿ ಎಚ್ ಸಿ 48 ಶಿವರಾಜ ಸಿಪಿಸಿ 458.ಪರಶುರಾಮ ಪಿಸಿ162.ಜೈರಾಮ್ ಪಿಸಿ 407.ಮಂಜುನಾಥ ಎಪಿಸಿ179. ಹಾಗೂ ತಾಂತ್ರಿಕ ವಿಭಾಗದ ಪ್ರಸಾದ ಎಪಿಸಿ 166.ಮಂಜುನಾಥ ಎಪಿಸಿ87 ಉತ್ತಮ ಪತ್ತೆ ಕಾರ್ಯ ಮಾಡಿದ ಪೋಲೀಸ ಅಧಿಕಾರಿಗಳು ಮತ್ತು ಸಿಬ್ಬಂದಿಯವರಿಗೆ ಕೊಪ್ಪಳ ಪೋಲೀಸ ಅಧೀಕ್ಷಕರು ಡಾ. ರಾಮ್ ಅರಸಿದ್ದಿ ಐ ಪಿ ಎಸ್ ಕೊಪ್ಪಳ ರವರು ಪ್ರಶಂಸೆ ವ್ಯಕ್ತ ಪಡಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.
ವರದಿ : ಯಮನೂರಪ್ಪ ಆರ್ ಅಬ್ಬಿಗೇರಿ
ರಾಜ್ಯ ವಿಶೇಷ ವರದಿಗಾರರು