ಜೈಭೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ,ಜೈ ಮಾದಿಗರ ಬೌದ್ಧಿಕ ವೇದಿಕೆ ಹಾಗೂ ಬಿ.ಆರ್. ಅಂಬೇಡ್ಕರ್ ಜನಪರ ರಕ್ಷಣಾ ವೇದಿಕೆ ಮತ್ತು ದಲಿತ ಸಂಘಟನೆಗಳ ಒಕ್ಕೂಟದಿಂದ ಬೃಹತ್ ತಮಟೆ ಚಳವಳಿವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ
ವಿಷಯ:- ಬಂಡಿಕೊಡಿಗೇಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಜಾಪ್ರಭುತ್ವವನ್ನು ಗಾಳಿಗೆ ತೂರಿ 2020-21 2021-22. 2022-23, 2023-2024 ರ ತನಕ ಭ್ರಷ್ಟ ಅವ್ಯವಸ್ಥೆಗಳನ್ನು ಮತ್ತು ಕಳಪೆ ಕಾಮಗಾರಿಗಳನ್ನು ಮಾಡಿ ಕೋಟಿಗಟ್ಟಲೆ ಲೂಟಿ ಮಾಡಿರುವ ಹಣದ ವಿಚಾರವಾಗಿ ಪರಿಶೀಲಿಸಿ ತನಿಖೆ ಆಗುವ ತನಕ 2024-25 ನೇ ಸಾಲಿನ ಆಯವ್ಯಯ ಮತ್ತು ಆರ್ಥಿಕ ವರ್ಷದ ತೆರಿಗೆ ಹಣವನ್ನು ಯಾವುದೇ ಕಾರಣಕ್ಕೂ ದುರ್ಬಳಕೆ ಮಾಡಿದೆ ಎಂದು ಸಂಸ್ಥಾಪಕರು ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ಬಿ ಆರ್ ಮುನಿರಾಜು ತಿಳಿಸಿದ್ದಾರೆ
ಬಂಡಿಕೊಡಿಗೇಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಒಂದು ನೂತನ ಕಟ್ಟಡಕ್ಕಾಗಿ ಹಣವನ್ನು ಮೀಸಲಿಟ್ಟು ಈಗಾಗಲೇ ಸಾರ್ವಜನಿಕರಿಗೆ ಟೊಪ್ಪಿ ಹಾಕಿ ಹಣವನ್ನು ಲೂಟಿ ಮಾಡಲು ಮುಂದಾಗಿರುವ ಭ್ರಷ್ಟ ಸದಸ್ಯರನ್ನು ಹಾಗೂ ಕೊಲೆಗಡುಕರ ಸದಸ್ಯತ್ವದ ಅಮಾನತ್ತಿಗೆ ಒತ್ತಾಯಿಸಿ ಮತ್ತು ಬಂಡಿಕೊಡಿಗೇಹಳ್ಳಿ ಗ್ರಾಮದಲ್ಲಿ ದಲಿತರ ಮನೆಗಳಿಗೆ ಮೂರು ತಿಂಗಳಿನಿಂದಲೂ ನೀರುಗಳನ್ನು ಬಿಡದೆ ಭ್ರಷ್ಟ ಹಿಟ್ಲರ್ ಆಡಳಿತ ನಡೆಸುತ್ತಿರುವ ಪೂರ್ಣಚ್ಚ ಸಂಪೂರ್ಣ ಅಭಿವೃದ್ಧಿ ನಾಪಕರಾದ ಪಿ.ಡಿ.ಓ ರವರನ್ನು ಮತ್ತು ದಲಿತರ ಹೆಸರು ಹೇಳಿಕೊಂಡು ಮೀಸಲಾತಿ ಮೂಲಕ ಕಾರ್ಯದರ್ಶಿಯಾಗಿರುವ ಗುಳ್ಳೆನರಿ ಶಿವಣ್ಣ ಮತ್ತು ಹಣದ ಆಸೆಗೆ ನ್ಯಾಯಾಲಯಕ್ಕೆ ಮೊರೆ ಹೋಗಿ ಪುನಃ ಅದೇ ಸ್ಥಳಕ್ಕೆ ಬಂದು ಹಣವನ್ನು ಲೂಟಿ ಮಾಡುತ್ತಿರುವ ಯಲಹಂಕ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕರಾದ ಅಪೂರ್ವರವರನ್ನು ಹಾಗೂ ಕೆಲವು ಸಮಸ್ಯೆಗಳ ವಿರುದ್ಧ ಎಷ್ಟು ಮನವಿಗಳನ್ನು ಸಲ್ಲಿಸಿದರೂ ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿರುವ ಸಿ.ಇ.ಓ ಹಾಗೂ ಆಯುಕ್ತರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ಅಕ್ರಮ ಆಸ್ತಿಪಾಸ್ತಿಗಳನ್ನು ತನಿಖೆಗೆ ಒಳಪಡಿಸಿ ಅಮಾನತ್ತಿಗೆ ಒತ್ತಾಯಿಸಿ ತಮಟೆ ಚಳವಳಿ ಹಾಗೂ ಬೃಹತ್ ಪ್ರತಿಭಟನೆ ನಡೆಯಿತು.