KRGRV
Sunday, March 1, 2026
Homeಜಿಲ್ಲಾ ಸುದ್ದಿಗಳುಬಸವರಾಜ ಬಾಗೇವಾಡಿ ಅವರಿಗೆ ರಾಜ್ಯ ಮಟ್ಟದ 'ಕನ್ನಡ ರಾಜ್ಯೋತ್ಸವ ಸೇವಾ ಭೂಷಣ' ಪ್ರಶಸ್ತಿ ಗೌರವ

ಬಸವರಾಜ ಬಾಗೇವಾಡಿ ಅವರಿಗೆ ರಾಜ್ಯ ಮಟ್ಟದ ‘ಕನ್ನಡ ರಾಜ್ಯೋತ್ಸವ ಸೇವಾ ಭೂಷಣ’ ಪ್ರಶಸ್ತಿ ಗೌರವ

ಬೆಳಗಾವಿ: ಕ್ರೀಡಾ ಕ್ಷೇತ್ರದಲ್ಲಿನ ಗಣನೀಯ ಸಾಧನೆಗಾಗಿ ಉತ್ನಾಳದ ಖ್ಯಾತ ಕ್ರೀಡಾ ತರಬೇತುದಾರರಾದ ಶ್ರೀ ಬಸವರಾಜ ನಂ. ಬಾಗೇವಾಡಿ ಅವರು ಈ ವರ್ಷದ ಪ್ರತಿಷ್ಠಿತ ರಾಜ್ಯ ಮಟ್ಟದ ‘ಕನ್ನಡ ರಾಜ್ಯೋತ್ಸವ ಸೇವಾ ಭೂಷಣ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ವತಿಯಿಂದ ನೀಡಲಾಗುವ ಈ ಪ್ರಶಸ್ತಿಯನ್ನು, ವಿಶ್ವ ಸಂತ ಜ್ಞಾನಯೋಗಿ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಸ್ಮರಣಾರ್ಥ ಹಮ್ಮಿಕೊಂಡಿರುವ ‘ಗುರು ನಮನ’ ಹಾಗೂ ‘2ನೇ ಅಖಿಲ ಭಾರತೀಯ ಕವಿಪೀಠ ಮಹಾ ಸಮ್ಮೇಳನ’ದ ಪುಣ್ಯಾವಸರದಲ್ಲಿ ಪ್ರದಾನ ಮಾಡಲಾಗುವುದು.
ಕಾರ್ಯಕ್ರಮದ ವಿವರ:
ಮುಂಬರುವ ಮಾರ್ಚ್ 8, 2026 ರಂದು ಬೆಳಗಾವಿಯ ಕುಮಾರ ಗಂಧರ್ವ ಸಭಾ ಭವನದಲ್ಲಿ ಅದ್ಧೂರಿ ಸಮಾರಂಭ ಜರುಗಲಿದೆ. ವಿವಿಧ ದೇಶೀಯ ಹಾಗೂ ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ತರಬೇತುದಾರರಾಗಿ ಮತ್ತು ಕ್ರೀಡಾ ನಿರ್ಣಾಯಕರಾಗಿ ಶ್ರೀ ಬಸವರಾಜ ಬಾಗೇವಾಡಿ ಅವರು ಸಲ್ಲಿಸಿರುವ ಅಪಾರ ಸೇವೆಯನ್ನು ಪರಿಗಣಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಪರಿಷತ್ತಿನ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ಮನೋಹರ ಕೆ. ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರೀಡಾ ಲೋಕದಲ್ಲಿ ಶಿಸ್ತು ಮತ್ತು ನೈಪುಣ್ಯತೆಯನ್ನು ಬೆಳೆಸುತ್ತಿರುವ ಬಾಗೇವಾಡಿ ಅವರ ಈ ಸಾಧನೆಗೆ ನಾಡಿನಾದ್ಯಂತ ಅಭಿನಂದನೆಗಳ ಸುರಿಮಳೆಯಾಗುತ್ತಿದೆ

ಹೆಚ್ಚಿನ ಸುದ್ದಿ