KRGRV
Tuesday, November 18, 2025
Homeವೈರಲ್ ಸುದ್ದಿಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಕೊಟ್ಟಂತ ಮಹಾನ್ ನಾಯಕರ ಕೊಡುಗೆ ಅಪಾರವಾದದ್ದು: ರಾಜಾ ವೇಣುಗೋಪಾಲ ನಾಯಕ.

ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಕೊಟ್ಟಂತ ಮಹಾನ್ ನಾಯಕರ ಕೊಡುಗೆ ಅಪಾರವಾದದ್ದು: ರಾಜಾ ವೇಣುಗೋಪಾಲ ನಾಯಕ.

ಸುರಪುರ : ಯಾದಗಿರಿ ಜಿಲ್ಲೆಯ ಸುರಪುರ ನಗರದ ಪ್ರಭು ಮಹಾವಿದ್ಯಾಲಯದ ಆವರಣದಲ್ಲಿ ಇಂದು ತಾಲೂಕು ಆಡಳಿತ ವತಿಯಿಂದ 78 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣ ನೇರವೇರಿಸಿ ಕಾರ್ಯಕ್ರಮವನ್ನು.
ಉದ್ದೇಶಿಸಿ ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಮಾತನಾಡುತ್ತಾ ಮೊಟ್ಟ ಮೊದಲಿಗೆ 78 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯಗಳು ಕೋರುತ್ತಾ ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲಿ ಹಲವಾರು ನಾಯಕರ ಬಲಿದಾನದಿಂದಾಗಿ ನಮಗೆ 1947 ಆಗಸ್ಟ ರಂದು ನಮಗೆ ಸ್ವಾತಂತ್ರ್ಯ ದೊರಕಿತು.
ನಾನು ಕ್ಷೇತ್ರದ ಶಾಸಕನಾಗಿ ಮೊದಲನೇಯ ಧ್ವಜಾರೋಹಣ ಮಾಡುತ್ತಿರುವುದು ನನಗೆ ಬಹಳ ಸಂತೋಷವೆನಿಸುತ್ತಿದೆ ಆದರೆ ಈ ಸಂದರ್ಭದಲ್ಲಿ ನಮ್ಮ ತಂದೆಯವರಾದ ದಿವಂಗತ ಡಾ//ರಾಜಾ ವೆಂಕಟಪ್ಪ ನಾಯಕ ಅವರ ಕೊಡುಗೆ ಸುರಪುರ ತಾಲೂಕಿನ ಅಭಿವೃದ್ದಿಗಾಗಿ ಅಪಾರವಾದದ್ದು, ನಮ್ಮ ತಂದೆಯವರ ಹಾದಿಯಲ್ಲೆ ನಾನು ಕೂಡಾ ಸುರಪುರ ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯ, ಶಿಕ್ಷಣ ಸಂಸ್ಥೆಗಳನ್ನು ಮಾಡ ಬೇಕು ಎಂಬುದು ನನ್ನ ಮಹದಾಸೆಯಾಗಿದೆ.
ನಮ್ಮ ತಂದೆಯವರಾದ ದಿವಂಗತ ಡಾ//ರಾಜಾ ವೆಂಕಟಪ್ಪ ನಾಯಕ ಹಾಗೂ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಅವರನ್ನಾ ನೆನೆದು ಭಾವುಕರಾದರು.
ಮುಂಬರುವ ದಿನಗಳಲ್ಲಿ ನಮ್ಮ ಸರ್ಕಾರದಿಂದ ವಿವಿಧ ಕಾಮಗಾರಿಗಳಿಗೆ ಅನುದಾನ ತರಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದರು.
ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರಿಗೆ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಆಡಳಿತ ಸೇವಾ ಸಮಿತಿ ಅಧ್ಯಕ್ಷ ಕೆ.ವಿಜಯಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಕಾಶ ಗುತ್ತೇದಾರ, ಕಾಂಗ್ರೆಸ್ ಪಕ್ಷದ ಯಾದಗಿರಿ ಯುವ ಘಟಕ ಅಧ್ಯಕ್ಷ ರಾಜಾ ಕುಮಾರ ನಾಯಕ, ಪೌರಾಯುಕ್ತ ಜೀವನ ಕಟ್ಟಿಮನಿ,ತಾಲೂಕು ವೈದ್ಯಾಧಿಕಾರಿ ಡಾ ರಾಜಾ ವೆಂಕಪ್ಪ ನಾಯಕ,ತಾ.ಪಂ.ಇ.ಒ ಬಸವರಾಜ ಸಜ್ಜನ್ ,ಡಿವೈಎಸ್ಪಿ ಜಾವೇದ್ ಇನಾಮದಾರ್,ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ್, ಮುಖಂಡರಾದ ಗುಂಡಪ್ಪ ಸೊಲ್ಲಾಪುರ, ರಮೇಶ ದೊರೆ ಆಲ್ದಾಳ, ವೆಂಕಟೇಶ ಬೇಟೆಗಾರ, ಮಾಳಪ್ಪ ಕಿರದಳ್ಳಿ, ರಮೇಶ ಅರಿಕೇರಿ,

ವರದಿ : ನಬಿರಸೂಲ ಎಮ್ ನದಾಫ್.

ಹೆಚ್ಚಿನ ಸುದ್ದಿ