KRGRV
Monday, December 23, 2024
Homeರಾಜ್ಯಮಡಿವಾಳರ ಜಾಗೃತಿ ವೇದಿಕೆ ಟ್ರಸ್ಟ್‌ ನಿಂದ ಅದ್ದೂರಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ 

ಮಡಿವಾಳರ ಜಾಗೃತಿ ವೇದಿಕೆ ಟ್ರಸ್ಟ್‌ ನಿಂದ ಅದ್ದೂರಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ 

 

ಬೆಂಗಳೂರು, ಡಿ, 11: ಮಡಿವಾಳರ ಜಾಗೃತಿ ವೇದಿಕೆ ಟ್ರಸ್ಟ್‌ ನಿಂದ ಅದ್ದೂರಿಯಾಗಿ ಶ್ರೀ ಮಡಿವಾಳ ಮಾಚಿ ದೇವರ ಜಯಂತೋತ್ಸವ ಆಚರಿಸುತ್ತಿದ್ದು, ವಿಜಯನಗರದ ಆದಿಚುಂಚನಗಿರಿ ಮಠದಲ್ಲಿ ಏಪ್ರಿಲ್‌ ೧೪ ರಂದು ಮಡಿವಾಳ ಸಮಾಜದ ಪ್ರಯುಕ್ತ ಅದ್ದೂರಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಡಿವಾಳರ ಜಾಗೃತಿ ವೇದಿಕೆ ಟ್ರಸ್ಟ್ ಅಧ್ಯಕ್ಷ ಮಂಜುನಾಥ್‌ ತಿಳಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿವಾಳ ಸಮುದಾಯದ ಶ್ರೇಯೋಭಿವೃದ್ಧಿಗೆ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಆದಿಚುಂಜನಗಿರಿ ಮಠದ ಡಾ॥ ಶ್ರೀ ನಿರ್ಮಲಾನಂದ ಸ್ವಾಮೀಜಿ ಜಯಂತೋತ್ಸವವನ್ನು ಉದ್ಘಾಟಿಸಲಿದ್ದಾರೆ. ವಿಶೇಷವಾಗಿ ಗುರು ಹಿರಿಯರ ಮಾರ್ಗದರ್ಶನದಲ್ಲಿ ಈ ಬಾರಿ ವಧುವರರ ವಿವಾಹ ಏರ್ಪಡಿಸಲಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. 

ಮೂಡಬಿದಿರೆಯ ಶ್ರೀಕ್ಷೇತ್ರ ಸಮಾಜದ ಮುಕ್ತಾನಂದ ಸ್ವಾಮೀಜಿ, ಚಿತ್ರದುರ್ಗದ  ಬಸವ ಮಾಚಿ ದೇವ ಸ್ವಾಮೀಜಿ, ರೈಲ್ವೆ ಸಚಿವ ವಿ.ಸೋಮಣ್ಣ ಮತ್ತಿತರೆ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ ನಂಜಪ್ಪ. ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್, ಶಿವಕುಮಾರ್, ಕಾರ್ಯಾಧ್ಯಕ್ಷ ವೆಂಕಟರಾಮು, ಸಂಘಟನಾ ಕಾರ್ಯದರ್ಶಿಗಳಾದ ಚಂದ್ರಶೇಖರ್, ಸುರೇಶ್‌ ಮತ್ತಿತರರು ಉಪಸ್ಥಿತರಿದ್ದರು. 

ವಿವಾಹ ನೋಂದಣಿಗಾಗಿ: 9611443777

ಹೆಚ್ಚಿನ ಸುದ್ದಿ