KRGRV
Saturday, September 26, 2026
Homeಬೆಂಗಳೂರುಮತದಾರರ ಹೆಸರು ಡಿಲೀಟ್ ಮಾಡಲು ಬಿಜೆಪಿ ಶಾಸಕ ಅಭಯ್ ಪಾಟೀಲ್ ಪತ್ರ: ಕೆಪಿಸಿಸಿ ಅಧ್ಯಕ್ಷರಾದ ಬಿ...

ಮತದಾರರ ಹೆಸರು ಡಿಲೀಟ್ ಮಾಡಲು ಬಿಜೆಪಿ ಶಾಸಕ ಅಭಯ್ ಪಾಟೀಲ್ ಪತ್ರ: ಕೆಪಿಸಿಸಿ ಅಧ್ಯಕ್ಷರಾದ ಬಿ ಕೆ ಹರಿಪ್ರಸಾದ್ ಆರೋಪ

ಬೆಂಗಳೂರು, ಸೆ.24: ಬಿಜೆಪಿ ಶಾಸಕ ಅಭಯ್ ಪಾಟೀಲ್ ಬೆಳಗಾವಿಯಲ್ಲಿ 2,500 ಮತದಾರರ ಹೆಸರು ಡಿಲೀಟ್ ಮಾಡಲು ಪತ್ರ ಬರೆದಿದ್ದಾರೆ. ಈ ಎಲ್ಲರೂ ಅಲ್ಪಸಂಖ್ಯಾತರಾಗಿದ್ದಾರೆ. ಈ ರೀತಿ ಮತದಾರರ ಹೆಸರು ಡಿಲೀಟ್ ಮಾಡಿಸಲು ಮುಂದಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಕೆಪಿಸಿಸಿ ಅಧ್ಯಕ್ಷರಾದ ಬಿ ಕೆ ಹರಿಪ್ರಸಾದ್ ಅವರು ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಹರಿಪ್ರಸಾದ್ ಅವರು ಸಾಕ್ಷಿ ಸಮೇತ ಪ್ರತಿಕ್ರಿಯೆ ನೀಡಿದರು.

“ಮತಗಳ್ಳತನವಾಗುತ್ತಿದೆ ಎಂದು ನಾವು ಹೇಳುತ್ತಲೇ ಇದ್ದೇವೆ. ಈ ಪತ್ರಕ್ಕೆ ಚುನಾವಣಾ ಆಯೋಗ ಪತ್ರ ಬರೆದು, ನಾವು ಈ ರೀತಿ ಮತದಾರರ ಹೆಸರು ತೆಗೆಯಲು ಸಾಧ್ಯವಿಲ್ಲ ಎಂದು ಹೇಳಿದೆ. ಒಂದೇ ಮನೆಯಲ್ಲಿ 50 ಮಂದಿಯ ಮತ ತೆಗೆಯಲು ಅರ್ಜಿ ನೀಡಲಾಗಿದ್ದು, ಈ ಅರ್ಜಿಯಲ್ಲಿ ಯಾರಾದರೂ ಬೋಗಸ್ ಅರ್ಜಿ ತುಂಬಿ ಸಲ್ಲಿಕೆ ಮಾಡಿದರೆ ಶಿಕ್ಷಾರ್ಹರು ಎಂದು ತಿಳಿಸಲಾಗಿದೆ” ಎಂದು ತಿಳಿಸಿದರು.

“ಫಾರಂ 7 ಸಲ್ಲಿಕೆ ಮಾಡಿ ಮತಪಟ್ಟಿಯಿಂದ ಹೆಸರು ಡಿಲೀಟ್ ಮಾಡಲು ಅರ್ಜಿ ಹಾಕಿರುವವರನ್ನು ಬಂಧಿಸಿ, ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ನಾನು ಆಗ್ರಹಿಸುತ್ತೇನೆ. ಶಾಸಕ ಅಭಯ್ ಪಾಟೀಲ್ ಅವರ ಪತ್ರ ನಮ್ಮ ಬಳಿ ಇದ್ದು, ಬೇರೆಯವರ ಮತ ತೆಗೆಯುವಂತೆ ಪತ್ರ ‌ನೀಡಲು ಯಾರಿವರು? ಕಾನೂನು ಮೀರಿ ಶಾಸಕರೇ ಬಲ್ಕ್ ಡಿಲೀಷನ್ ಗೆ ಪತ್ರ ನೀಡಿದ್ದಾರೆ. ಕಾನೂನಿಗೆ ವಿರುದ್ಧವಾಗಿ ಡಿಲೀಟ್ ಮಾಡಲು ಅರ್ಜಿ ಹಾಕಿದ್ದಾರೆ. ಅಭಯ್ ಪಾಟೀಲ್ ನೀಡಿರುವ ಪತ್ರ ನಮ್ಮ ಬಳಿ ಇದೆ. ಈ ವಿಚಾರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ” ಎಂದು ಹೇಳಿದರು.

ಸುಮಾರು 7 ಸಾವಿರ ಹೆಸರು ಡಿಲೀಟ್ ಮಾಡಲು ಅರ್ಜಿ ಹಾಕಲಾಗಿದ್ದು, ಯಾವುದಕ್ಕೂ ಸಹಿ ಇಲ್ಲವಾಗಿದೆ. ಇದರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು. ಫಾರಂ 7 ಅನ್ನು ದುರುಪಯೋಗ ಮಾಡಿಕೊಂಡಿರುವವರನ್ನು ಶಿಕ್ಷೆಗೆ ಒಳಪಡಿಸಬೇಕು. ಬಿಜೆಪಿ ನಿಜ ಸ್ವರೂಪ ಹೊರಬರುತ್ತಿದೆ. ಅಮಿತ್ ಶಾ ಹಾಗೂ ನರೇಂದ್ರ ಮೋದಿ ಅವರು 13 ಕೋಟಿ ಮತಗಳನ್ನು ಮತದಾರರ ಪಟ್ಟಿಯಿಂದ ತೆಗೆಯಲು ಮುಂದಾಗಿರುವುದಕ್ಕೆ ಇದು ಸಣ್ಣ ಉದಾಹರಣೆ. ಅವರ ಕಾರ್ಯಕರ್ತರು, ಅಂಧಭಕ್ತರು ಈ ಕೆಲಸ ಮಾಡುತ್ತಿದ್ದು, ಎಲ್ಲರೂ ಎಚ್ಚರಿಕೆ ವಹಿಸಬೇಕು. ಎಸ್ಆಆರ್ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಬಿಜೆಪಿ ವಿರುದ್ಧ ಇರುವ ನೈಜ್ಯ ಮತದಾರರ ಮತದಾನದ ಹಕ್ಕು ಕಸಿಯುವ ಹುನ್ನಾರವನ್ನು ಬಿಜೆಪಿ ಹಾಗೂ ಆರ್ ಎಸ್ಎಸ್ ಮಾಡುತ್ತಿವೆ” ಎಂದು ವಾಗ್ದಾಳಿ ನಡೆಸಿದರು.

ಹೆಚ್ಚಿನ ಸುದ್ದಿ