
ನಾಲತವಾಡ ಏ 09 : ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಸಮೀಪದ ನಾಗಬೇನಾಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮುರಿಗೇಮ್ಮ ಪೀರಾಪೂರ ರವರು ಮನೆ ಉಳವರಿಗೆ ಬಸವ ವಸತಿ ಯೋಜನೆ ಅಡಿಯಲ್ಲಿ ಮನೆ ಮಂಜೂರು ಮಾಡುವಂತೆ ಮಾಡುತ್ತಿರುವ ಅವರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ವೀರೇಶನಗರದ ಸಂಗಪ್ಪ ಸುಲ್ತಾನಪೂರ ಸೇರಿದಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಪಂ ಸಿಇಒ ಅವರಿಗೆ ಇಂದು ಮನವಿ ಸಲ್ಲಿಸಿದ್ದಾರೆ.ಪಿಡಿಒ ಗ್ರಾಮದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ,ಪಂಚಾಯತ ಕಾರ್ಯಾಲಯದಲ್ಲಿ ಇರುವುದೇ ಅಪರೂಪದ ಗ್ರಾಮ ಸಭೆಯ ಮೂಲಕ ಸಿದ್ದಪಡಿಸಲಾದ ಬಸವ ವಸತಿ ಯೋಜನೆಯ ಪಟ್ಟಿಯಲ್ಲಿ ಉಳ್ಳವರೆ ಹೆಚ್ಚಿದ್ದು,ಅವುಗಳನ್ನು ಪರಿಶೀಲನೆ ಮಾಡದೆ ಇರುವ ಪರಿಣಾಮ ಮನೆ ಇಲ್ಲದ ಅರ್ಹರಿಗೆ ವಂಚನೆ ಆಗುತ್ತಿದೆ.14 & 15ನೇ ಹಣಕಾಸು ಯೋಜನೆಯ ಅನುದಾನವು ಸಂಪೂರ್ಣ ದುರುಪಯೋಗವಾಗುತ್ತಿದೆ.ಈ ಪಿಡಿಒವರವರನ್ನು ವರ್ಗಾಯಿಸಿ ಗ್ರಾಮದ ಅಭಿವೃದ್ಧಿಗೆ ಅನುವು ಮಾಡಿಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

