KRGRV
Wednesday, November 19, 2025
Homeಜಿಲ್ಲಾ ಸುದ್ದಿಗಳುರಸ್ತೆ ಮೇಲಿನ ತಗ್ಗು ಗುಂಡಿಗಳನ್ನು ಮುಚ್ಚಿಸಿದ ತಹಸೀಲ್ದಾರ್ ಮಲ್ಲಣ್ಣ ಯಲಗೋಡ.

ರಸ್ತೆ ಮೇಲಿನ ತಗ್ಗು ಗುಂಡಿಗಳನ್ನು ಮುಚ್ಚಿಸಿದ ತಹಸೀಲ್ದಾರ್ ಮಲ್ಲಣ್ಣ ಯಲಗೋಡ.

ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ಮುಖ್ಯ ರಸ್ತೆಯ ಮೇಲೆ ತಗ್ಗು ಗುಂಡಿಗಳು ಬಿದ್ದ ಪರಿಣಾಮ ದಿನನಿತ್ಯ ಸಂಚರಿಸುವ ವಾಹನ ಸವಾರರಿಗೆ ತುಂಬಾ ತೊಂದ್ರೆ ಆಗುತ್ತಿತ್ತು.ಲೋಕೋಪಯೋಗಿ ಇಲಾಖೆಯೂ ಜೇವರ್ಗಿ ಪಟ್ಟಣದಲ್ಲಿ 17ಕೋಟಿ ರೂಪಾಯಿ ವೆಚ್ಚದಲ್ಲಿ ಸಿ ಸಿ ಕಾಮಗಾರಿ ನಡೆಯುತ್ತಿದೆ. ಯಾಕೆ ಕಾಮಗಾರಿ ಆಮೆ ವೇಗದಲ್ಲಿ ನಡೆಯುತ್ತಿದೆ ಎಂಬುವದು ತಿಳಿಯದಾಗಿದೆ.
ವಾಹನ ಸವಾರರ ಪರದಾಟ ಗಮನಿಸಿ ಜೇವರ್ಗಿ ತಾಲೂಕ ದಂಡಾಧಿಕಾರಿಗಳು ತಹಸೀಲ್ದಾರ್ ಮಲ್ಲಣ್ಣ ಯಲಗೋಡ ಮುಂದೆ ನಿಂತು ರಸ್ತೆ ಮೇಲಿನ ಗುಂಡಿಗಳು ಮುಚ್ಚಿಸಿ ಸಾಮಾಜಿಕ ಕಳಕಳಿಯ ತೋರಿಸಿದ್ದಾರೆ.
ತಹಸೀಲ್ದಾರ್ ರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿ. ಸಿದ್ದನಗೌಡ ಪಾಟೀಲ್ ಜೇವರ್ಗಿ

ಹೆಚ್ಚಿನ ಸುದ್ದಿ