ಯಾದಗಿರಿ: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿನಿ ನಗರದ ನಿವಾಸಿ ಕುಮಾರಿ ನಿಷ್ಠಾ ತಂ. ಚನ್ನರಾಜು ದಮ್ಮಣ್ಣನವರ್‌ಗೆ ಅವರ ನಿವಾಸದಲ್ಲಿ ಜಿಲ್ಲಾ ಯುವಕೋಲಿ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಪರೀಕ್ಷೆಯಲ್ಲಿ 625/622 ಅಂಕ ಗಳಿಸಿ ರಾಜ್ಯಮಟ್ಟದಲ್ಲಿ ಜಿಲ್ಲೆಯ ಕೀರ್ತಿಯನ್ನು ಹಬ್ಬಿಸಿದ ಸಮಾಜದ ಬಾಲಕಿಯ ಸಾಧನೆಗೆ ಜಿಲ್ಲೆಯ ಸಮಸ್ತರು ಹೆಮ್ಮೆ ಪಡುವ ಸಾಧನೆಯಾಗಿದೆ ಎಂದು ಮುಖಂಡರು ಹರ್ಷ ವ್ಯಕ್ತಪಡಿಸಿ ಶಾಲುಹೊದಿಸಿ ಸನ್ಮಾನಿಸಿ ಗೌರವಿಸಿದರು.
ಇದೊಂದು ಕೇವಲ ವೈಯಕ್ತಿಕ ಸಾಧನೆಯಾಗದೇ ಜಿಲ್ಲೆಯ ಹೆಮ್ಮೆಯ ಸಾಧನೆಯಾಗಿದ್ದು, ವಿದ್ಯಾರ್ಥಿನಿ ರಾಷ್ಟçಮಟ್ಟದಲ್ಲಿ ದೊಡ್ಡ ಸಾಧನೆ ಮಾಡುವ ಮೂಲಕ ದೊಡ್ಡ ಕೊಡುಗೆ ನೀಡಲಿ ಎಂದು ಮುಖಂಡರು ಹಾರೈಸಿದರು.
ಈ ಸಂದರ್ಭದಲ್ಲಿ ಯುವ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಮಲ್ಲು ಪೂಜಾರಿ, ತಾಲ್ಲೂಕು ಅದ್ಯಕ್ಷ ಮುದುಕಪ್ಪ ಚಾಮನಳ್ಳಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ನಿಕಟಪೂರ್ವ ಅದ್ಯಕ್ಷ ಮೌನೇಶ ಬೆಳಗೇರಾ, ಕರವೇ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ವಿಶ್ವರಾಜ ಪಾಟೀಲ್ ಹೊನಗೇರಾ, ಆರ್.ವಿ. ಶಾಲೆ ದೈಹಿಕ ಶಿಕ್ಷಕ ಮಹಾದೇವಪ್ಪ ಹೊನಗೇರಾ, ಮಲ್ಲಿಕಾರ್ಜುನ ಹೆಡಗಿಮುದ್ರ, ಸಾಬಣ್ಣ ಪ್ಯಾಟಿ ಬೆಳಗೇರಾ, ಶರಣು ಹೊನಿಗೇರಾ, ರಾಮು ಬಳಿಚಕ್ರ, ನಿಂಗು ಆಶನಾಳ, ಮಲ್ಲು ಪೂಜಾರಿ ಸೇರಿದಂತೆ ಅನೇಕರು ಇದ್ದರು.