KRGRV
Monday, August 18, 2025
Homeಜಿಲ್ಲಾ ಸುದ್ದಿಗಳುರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎನ್ ರವಿಕುಮಾರ್

ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎನ್ ರವಿಕುಮಾರ್

ಬೆಂಗಳೂರು ಮಾರ್ಚ 14 :

ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಶ್ರೀ ಎನ್ ರವಿಕುಮಾರ್ ಅವರು ಇಂದು ಸದನದ ನಿಯಮ 68 ರ ಮೇರೆಗೆ ನಡೆದ ಸಾರ್ವಜನಿಕ ಮಹತ್ವದ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿ, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.

ರಾಜ್ಯದಲ್ಲಿ ಅಕ್ರಮ ಬಾಂಗ್ಲಾ ನುಸುಳುಕೋರರು ಬಹಳ ಜನ ಇದ್ದಾರೆ. ಅವರನ್ನು ಸರ್ಕಾರ ಪತ್ತೇ ಹಚ್ಚಿಲ್ಲ.

ರಾಜ್ಯದ ಹಾಲಿ ಶಾಸಕ ಪುತ್ರನೆ ಒಬ್ಬ ಮಹಿಳಾ ಅಧಿಕಾರಿಗಳ ಮೇಲೆ ಧಮ್ಕಿ ಹಾಕುತ್ತಾರೆ ಅಂದರೆ ಇನ್ನು ಸಾಮಾನ್ಯ ಮಹಿಳೆಯರ ಪರಿಸ್ಥಿತಿ ಏನು?

ರಾಜ್ಯದಲ್ಲಿ ದುಷ್ಕರ್ಮಿಗಳು ಪೊಲೀಸರ ಮೇಲೆಯೇ ದಾಳಿ ಮಾಡುತ್ತಿದ್ದಾರೆ, ಪೊಲೀಸ್ ವಾಹನಗಳ ಮೇಲೆ ಕಲ್ಲು ಎಸೆದು, ಪೊಲೀಸರಿಗೆ ಗಂಭೀರ ಗಾಯ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರದ ಮೃಧು ಧೋರಣೆಯೇ ಕಾರಣ ಅಲ್ಲವೇ?

ರಾಜ್ಯದ ಪೊಲೀಸ್ ಇಲಾಖೆಯನ್ನು ಬೇರೆ ಬೇರೆ ಸಚಿವರು ಪ್ರವೇಶ ಮಾಡಿ ಅಲ್ಲಿನ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಗೃಹ ಸಚಿವರು ದಕ್ಷರಿದ್ದಾರೆ ಆದರೆ ಬೇರೆ ಬೇರೆ ಸಚಿವರು ಭಾಗಿಯಾಗಿ ಪೊಲೀಸ್ ಇಲಾಖೆಯ ದಾರಿ ತಪ್ಪಿಸುತ್ತಿದ್ದಾರೆ.

ಸಿಟಿ ರವಿ ಪ್ರಕರಣದಲ್ಲಿ ಅಲ್ಲಿನ ಪೊಲೀಸರು ಸುಮಾರು 500 ಕೀಮಿ ಸುಖಾ ಸುಮ್ಮನೆ ಅವರನ್ನು ರಾತ್ರಿಯೆಲ್ಲಾ ತಿರುಗಾಡಿಸಿದ್ರು, ಈ ಬಗ್ಗೆ ಮಾನ್ಯ ಗೃಹ ಸಚಿವರಿಗೆ ಸರ್ಕಾರಕ್ಕೆ ಮಾಹಿತಿಯಿಲ್ಲ ಅಂದ್ರೆ ಹೇಗೆ? ಇದು ವೈಫಲ್ಯ ಅಲ್ಲವೇ?

ರಾಜ್ಯದಲ್ಲಿ ದಾದಾಗಿರಿ, ಗುಂಡಾಗಿರಿ, ಕೊಲೆ, ಸುಲಿಗೆ, ದರೋಡೆ ಪ್ರಕರಣ ಹೆಚ್ಚಾಗುತ್ತಿದೆ.

ಮೈಸೂರಿನ ಉದಯಗಿರಿ ಪ್ರಕರಣದಲ್ಲಿ ಪೊಲೀಸ್ ಇಲಾಖೆಯಯು ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಈ ಪ್ರಕರಣದಲ್ಲಿ ಸುಖಾ ಸುಮ್ಮನೆ RSS ಕಾರ್ಯಕರ್ತರು ಭಾಗಿಯಾಗಿದ್ದಾರೆಂದು ಅಲ್ಲಿನ ಕಾಂಗ್ರೇಸ್ ನಾಯಕರು ಮಾತನಾಡಿರುವುದು ಖಂಡನೀಯ.

RSS ತನ್ನ ಪಾಡಿಗೆ ತನ್ನ ದೇಶದ ಕಾರ್ಯವನ್ನು ಮಾಡುತ್ತಿದೆ. ಸಂಘದ ಮೇಲೆ ವೃತಾ ಆರೋಪ ಮಾಡುವುದು ಸರಿಯಲ್ಲ.

ರಾಜ್ಯದಲ್ಲಿ ಗಾಂಜಾ, ಡ್ರಗ್ಸ್ ಮಾಫಿಯಾ ಬಹಳ ಜೋರಾಗಿ ನಡೆಯುತ್ತಿದೆ. ಸಣ್ಣ ಸಣ್ಣ ಗುಡ0ಗಡಿಗಳಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದಾರೆ. ರಾಜ್ಯದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಯುವಕರು ಇದರಿಂದ ಬಲಿಯಾಗಿ ಹಾಳಾಗುತ್ತಿದ್ದಾರೆ. ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ರಾಜ್ಯದಲ್ಲಿ ಎಗ್ಗಿಲ್ಲದೇ ಮಾರಾಟ ಮಾಡುತ್ತಿದ್ದಾರೆ. ಸರ್ಕಾರ ಕೂಡಲೇ ಈ ಡ್ರಗ್ಸ್ ಮಾಫಿಯಗೆ ಕಡಿವಾಣ ಹಾಕಬೇಕು.

ರಾಜ್ಯದ ಸರ್ಕಾರಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುವ ವಾತಾವರಣ ರಾಜ್ಯದಲ್ಲಿ ಸೃಷ್ಟಿಯಾಗುತ್ತಿದೆ.

ಇನ್ನು FIR ದಾಖಲಿಸುವ ವಿಚಾರದಲ್ಲಿ ಸರ್ಕಾರ ರಾಜಕೀಯ ಮಾಡುತ್ತಿದೆ. ಉದಾಹರಣೆಗೆ ಜೇವರ್ಗಿನಲ್ಲಿ ಪುರಸಭೆ ಚುನಾವಣೆಯಲ್ಲಿ ನಮ್ಮ ಶಾಸಕರ ಮೇಲೆ, ಪುರಸಭಾ ಸದಸ್ಯರ ಮೇಲೆ ಅಲ್ಲಿನ ಪೊಲೀಸರು ದಬ್ಬಾಳಿಕೆ ಮಾಡಿ ಅವರ ಮೇಲೆಯೇ FIR ಮಾಡಿದ್ದಾರೆ. ಇವರಿಗೊಂದು ಕಾನೂನು, ವಿರೋಧ ಪಕ್ಷದವರಿಗೊಂದು ಕಾನೂನಾ? ಸರ್ಕಾರ ಸ್ಪಷ್ಟಪಡಿಸಬೇಕು.

ಸರ್ಕಾರ ಅಕ್ರಮ ಚಟುವಟಿಕೆಗಳಿಗೆ ಮಟ್ಟ ಹಾಕಬೇಕು. ಪೊಲೀಸ್ ಇಲಾಖೆಗೆ ಸರ್ಕಾರ Free Hand ಬಿಡಬೇಕೆಂದು ನಾನು ಸರ್ಕಾರವನ್ನು ಒತ್ತಾಯ ಮಾಡುತ್ತೇನೆ.

ಹೆಚ್ಚಿನ ಸುದ್ದಿ