KRGRV
Thursday, November 5, 2026
Homeಜಿಲ್ಲಾ ಸುದ್ದಿಗಳುಲಕ್ಷ್ಮಣ ಬಿ. ನಿಂಬರಗಿ ಮಾರ್ಗದರ್ಶನ ಫಲ: ಪೊಲೀಸ್ ಐಟಿ ಡ್ಯಾಶ್‌ಬೋರ್ಡ್‌ನಲ್ಲಿ ವಿಜಯಪುರಕ್ಕೆ ರಾಜ್ಯದ ಮೊದಲ ಸ್ಥಾನ

ಲಕ್ಷ್ಮಣ ಬಿ. ನಿಂಬರಗಿ ಮಾರ್ಗದರ್ಶನ ಫಲ: ಪೊಲೀಸ್ ಐಟಿ ಡ್ಯಾಶ್‌ಬೋರ್ಡ್‌ನಲ್ಲಿ ವಿಜಯಪುರಕ್ಕೆ ರಾಜ್ಯದ ಮೊದಲ ಸ್ಥಾನ

ವಿಜಯಪುರ, ನ.5: ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ‘Police IT Dashboard’ ಮಾಸಿಕ ಕಾರ್ಯಕ್ಷಮತೆ ಮೌಲ್ಯಮಾಪನದಲ್ಲಿ ವಿಜಯಪುರ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದು ಮಹತ್ವದ ಸಾಧನೆ ಮಾಡಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ಬಿ. ನಿಂಬರಗಿ ಅವರ ಮಾರ್ಗದರ್ಶನದಲ್ಲಿ ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ತಂತ್ರಜ್ಞಾನ ಆಧಾರಿತ ಸೇವೆಗಳು ಹಾಗೂ ಕಾರ್ಯಕ್ಷಮತೆಯಲ್ಲಿ ಉತ್ತಮ ಸಾಧನೆ ತೋರಿದೆ.

ರಾಜ್ಯ ಪೊಲೀಸ್ ಇಲಾಖೆ ನಿಗದಿಪಡಿಸಿರುವ 14 ವಿವಿಧ ಮಾನದಂಡಗಳ ಆಧಾರದ ಮೇಲೆ ನಡೆದ ಮೌಲ್ಯಮಾಪನದಲ್ಲಿ ವಿಜಯಪುರ ಜಿಲ್ಲೆ ಅಗ್ರಸ್ಥಾನ ಪಡೆದಿದೆ. ತಂತ್ರಜ್ಞಾನ ಬಳಕೆ, ಪ್ರಕರಣಗಳ ವಿಲೇವಾರಿ, ಇ-ಬೀಟ್ ವ್ಯವಸ್ಥೆ, ಇ-ಸಾಕ್ಷ್ಯ ಅನುಷ್ಠಾನ, ಡಿಜಿಟಲ್ ದಾಖಲೆ ನಿರ್ವಹಣೆ ಸೇರಿದಂತೆ ಹಲವು ವಿಭಾಗಗಳಲ್ಲಿ ಉತ್ತಮ ಕಾರ್ಯನಿರ್ವಹಣೆ ಈ ಸಾಧನೆಗೆ ಕಾರಣವಾಗಿದೆ.

ಈ ಗೌರವವು ವಿಜಯಪುರ ಜಿಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಶಿಸ್ತುಬದ್ಧ ಕಾರ್ಯನಿರ್ವಹಣೆ, ತಾಂತ್ರಿಕ ಅಳವಡಿಕೆ ಮತ್ತು ಪರಿಣಾಮಕಾರಿ ಆಡಳಿತಕ್ಕೆ ದೊರೆತ ಮನ್ನಣೆಯಾಗಿದೆ. ಎಸ್ಪಿ ಲಕ್ಷ್ಮಣ ಬಿ. ನಿಂಬರಗಿ ಅವರ ನೇತೃತ್ವದಲ್ಲಿ ಜಿಲ್ಲೆಯ ಪೊಲೀಸ್ ಇಲಾಖೆ ರಾಜ್ಯ ಮಟ್ಟದಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದೆ.

ಹೆಚ್ಚಿನ ಸುದ್ದಿ