ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಮ್ಮ ಹೆಂಡ್ತಿ ಮತ್ತು ಮಗಳು ಐಶ್ವರ್ಯ ಜೊತೆ ಅಮೆರಿಕಾದಲ್ಲಿ ಟೂರ್ ಮಾಡುತ್ತಾ ಎಂಜಾಯ್ ಮಾಡ್ತಿದ್ದಾರೆ.
ಐಶ್ವರ್ಯ ಡಿಕೆ ಶಿವಕುಮಾರ್ (Aishwarya DK Shivakumar) ತಮ್ಮ ತಂದೆ ಡಿ.ಕೆ. ಶಿವಕುಮಾರ್ ಹಾಗೂ ತಾಯಿ ಜೊತೆ ಯುಎಸ್ ಎಗೆ ತೆರಳಿದ್ದು, ಅಲ್ಲಿನ ಸುಂದರ ತಾಣಗಳಲ್ಲಿ ತಿರುಗಾಡುತ್ತಾ ಎಂಜಾಯ್ ಮಾಡಿದ್ದಾರೆ, ಸುಂದರವಾದ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಯುಎಸ್’ಎ ವಿವಿಧ ತಾಣಗಳಲ್ಲಿನ ಫೋಟೊ ಕ್ಲಿಕ್ ಮಾಡಿಕೊಂಡು ಅದನ್ನ ತಮ್ಮ ಇನ್’ಸ್ಟಾಗ್ರಾಂ ಪೇಜ್ ನಲ್ಲಿ (Instagram) ಹಂಚಿಕೊಂಡಿರುವ ಐಶ್ವರ್ಯ, Sunshine , smiles and some special memories 🇺🇸 ಎಂದು ಬರೆದುಕೊಂಡಿದ್ದಾರೆ.
ತಂದೆ ಡಿಕೆ ಶಿವಕುಮಾರ್ (D K Shivakumar) ಹಾಗೂ ಅಮ್ಮ ಜೊತೆಯಾಗಿರುವ ಫೋಟೊವನ್ನು ಶೇರ್ ಮಾಡಿದ್ದಾರೆ ಐಶ್ವರ್ಯ. ಡಿಕೆಶಿ ತಮ್ಮ ಎಲ್ಲಾ ರಾಜಕೀಯ ಕೆಲಸಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡು ಮಗಳು ಮತ್ತು ಹೆಂಡ್ತಿ ಜೊತೆ ಸಮಯ ಕಳೆದಿದ್ದಾರೆ.
ಇನ್ನು ತಂದೆಯ ಜೊತೆಗಿನ ಫೋಟೊವನ್ನು ಸಹ ಐಶ್ವರ್ಯ ಹಂಚಿಕೊಂಡಿದ್ದು, ಇದನ್ನ ನೋಡಿ ಜನ ಅಮ್ಮನಂತೆ ಮಗಳು. ಮಗಳಿಗೆ ಒಳ್ಳೆಯ ತಡೆಗೋಡೆ ತಂದೆ ಡಿ.ಕೆ.ಶಿ… ತಂದೆಯ ಶ್ರಮ ಮಗಳ ಸಂತೋಷದ ಜೀವನದ ಹಾದಿ ಎಂದು ಕಾಮೆಂಟ್ ಮಾಡಿದ್ದಾರೆ.
ಐಶ್ವರ್ಯ ಸುಂದರವಾದ ಫೋಟೊಗಳನ್ನು ನೋಡಿ, ನೀವೇ ಸನ್ ಶೈನ್ (sunshine), ತುಂಬಾ ಸುಂದರವಾದ ಫೋಟೊಗಳು, ನೀವು ಅಷ್ಟೇ ಸುಂದರವಾಗಿದ್ದೀರಿ. ಅಮ್ಮನಂತೆ ಸುಂದರಿ ನೀವು, ಬ್ಯೂಟಿ ಫುಲ್ ಪಿಕ್ಚರ್ಸ್, ನೀವು ಎವರ್ ಗ್ರೀನ್ ಬ್ಯೂಟಿ, ಅವತ್ತು ಕ್ರಶ್ ಆಗಿದ್ರು, ಇವತ್ತು ಕ್ರಶ್, ಯಾವಾಗ್ಲೂ ನೀವೇ ನನ್ನ ಕ್ರಶ್ ಅಂತ ಬರೆದುಕೊಂಡಿದ್ದಾರೆ.
ಐಶ್ವರ್ಯ ರಾಜಕೀಯಕ್ಕೆ ಇಳಿಯದಿದ್ದರೂ ತಂದೆಯಂತೆ ಜನಪ್ರಿಯತೆ ಪಡೆದಿರೋದಂತೂ ನಿಜಾ, ಇವರು ಎಂಟರ್’ಪ್ರೀನ್ಯೂರ್ ಹಾಗೂ ಎಜುಕೇಶನಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಮುಂದೊಂದು ದಿನ ಐಶ್ವರ್ಯ ದೇಶದ ಶಿಕ್ಷಣಾ ಮಂತ್ರಿಯಾಗಲಿದ್ದಾರೆ ಎಂದು ಹೇಳ್ತಿದ್ದಾರೆ ಜನ. ಇನ್ನು ಪಾಸಿಟಿವ್ ಕಾಮೆಂಟ್ ಇದ್ದ ಮೇಲೆ ನೆಗೆಟಿವ್ ಕಾಮೆಂಟ್ ಇದ್ದೆ ಇರುತ್ತೆ. ಐಶ್ವರ್ಯ ಯಾವತ್ತೂ ತಮ್ಮ ಗಂಡನ ಜೊತೆಗಿನ ಫೋಟೊ ಹಾಕೋದೆ ಇಲ್ಲ, ಇಲ್ಲೂ ಸಹ ಗಂಡನ ಜೊತೆಗಿನ ಫೋಟೊ ಶೇರ್ ಮಾಡಿಲ್ಲ, ಹಾಗಾಗಿ ಗಂಡ ಎಲ್ಲಿ ಅಂತ ಕೇಳಿದ್ದಾರೆ. ಜೊತೆಗೆ ಡಿಕೆಶಿ ಇರೋದ್ರಿಂದ ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಅಂತಾನೂ ಹೇಳಿದ್ದಾರೆ ಜನ.