KRGRV
Tuesday, November 18, 2025
HomeUncategorizedಸಚಿವ ಮುನಿಯಪ್ಪಗೆ ಅರೆಸ್ಟ್ ವಾರೆಂಟ್!? ವಿಚಾರಣೆಗೆ ಹಾಜರಾಗಲು ಕಡಕ ವಾರ್ನಿಂಗ್..?

ಸಚಿವ ಮುನಿಯಪ್ಪಗೆ ಅರೆಸ್ಟ್ ವಾರೆಂಟ್!? ವಿಚಾರಣೆಗೆ ಹಾಜರಾಗಲು ಕಡಕ ವಾರ್ನಿಂಗ್..?

2013 ರ ವಿಧಾನಸಭಾ ಚುನಾವಣೆಯಲ್ಲಿ ಕೆಜಿಎಫ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವಿ.ಶಂಕರ್ ಮೇಲೆ ಆಗಿನ ಸಂಸದರಾಗಿದ್ದ ಮುನಿಯಪ್ಪ ಮತ್ತು ಅವರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆಂಬ ಆರೋಪವಿತ್ತು.

ಬೆಂಗಳೂರು: 2013 ರಲ್ಲಿ ಕೆಜಿಎಫ್‌ನಲ್ಲಿ ನಡೆದ ಗಲಾಟೆ ಪ್ರಕರಣದ ವಿಚಾರಣೆ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು. ಆಹಾರ ಸಚಿವ ಕೆ. ಹೆಚ್. ಮುನಿಯಪ್ಪ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ, ಅವರು ಗೈರಾಗಿದ್ದಕ್ಕೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
2013 ರ ವಿಧಾನಸಭಾ ಚುನಾವಣೆಯಲ್ಲಿ ಕೆಜಿಎಫ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವಿ. ಶಂಕರ್ ಮೇಲೆ, ಆಗಿನ ಸಂಸದರಾಗಿದ್ದ ಮುನಿಯಪ್ಪ ಹಾಗೂ ಅವರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.





ವಿಚಾರಣೆಗೆ ಹಾಜರಾಗದ ಮುನಿಯಪ್ಪ ಅವರ ನಡೆಗೆ ನ್ಯಾಯಮೂರ್ತಿ ಗಜಾನನ ಭಟ್ ಅಸಮಾಧಾನ ವ್ಯಕ್ತಪಡಿಸಿದರು. ಇಂದಿನ ವಿಚಾರಣೆ ಮುಗಿಯುವುದರೊಳಗೆ ಸಚಿವರು ನ್ಯಾಯಾಲಯಕ್ಕೆ ಹಾಜರಾಗದಿದ್ದರೆ ಬಂಧನ ವಾರೆಂಟ್ ಹೊರಡಿಸುವ ಎಚ್ಚರಿಕೆಯನ್ನೂ ನೀಡಿದರು.

ಹೆಚ್ಚಿನ ಸುದ್ದಿ