KRGRV
Monday, December 23, 2024
Homeಜಿಲ್ಲಾ ಸುದ್ದಿಗಳುಸಾಮಾಜಿಕ ಕಾಳಜಿಯುಳ್ಳ ಚಲನಚಿತ್ರ ಹೆಚ್ಚಾಗಿ ಮೂಡಿ ಬರಲಿ

ಸಾಮಾಜಿಕ ಕಾಳಜಿಯುಳ್ಳ ಚಲನಚಿತ್ರ ಹೆಚ್ಚಾಗಿ ಮೂಡಿ ಬರಲಿ

ಕೆ.ಆರ್.ಪುರ: ಸಾಮಾಜಿಕ ಕಾಳಜಿಯುಳ್ಳ ಚಲನಚಿತ್ರಗಳು ಕಡಿಮೆ ಆಗುತ್ತಿರುವ ಪ್ರಸ್ತುತ ಸಂಧರ್ಭದಲ್ಲಿ ಕದಾಂಬರಿ ಅಧಾರಿತ ಮೂಕಜೀವ ಚಲನಚಿತ್ರ ಸಾಮಾಜಿಕ ಸಂದೇಶ ಸಾರುವ ಚಿತ್ರವಾಗಿದೆ ಎಂದು ಮಾಜಿ ಸಂಸದ ಮುನಿಸ್ವಾಮಿ ಹೇಳಿದರು.

ಕೆ.ಆರ್.ಪುರ ಸಮೀಪದ ಕಾಡುಗುಡಿಯ ಶ್ರೀಶ್ರೀನಿವಾಸ ಚಿತ್ರಮಂದಿರದಲ್ಲಿ ಜೆ.ಎಂ.ಪ್ರಹ್ಲಾದ್ ಅವರ ಕದಾಂಬರಿ ಅಧಾರಿತ ಮೂಕಜೀವ ಚಲನಚಿತ್ರ ಪ್ರಥಮ
ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ಕದಾಂಬರಿ ಅಧಾರಿತ ಮೂಕಜೀವ ಚಲನಚಿತ್ರ ಸಮಾಜದಲ್ಲಿನ ಶೋಷಣೆಗೆ ಒಳಗಾಗುತ್ತಿರುವ ಶ್ರವಣ ದೊಷವುಳ್ಳ ವ್ಯಕ್ತಿಯ ಕುರಿತಾಗಿ ವಿಶೇಷ ಚಿತ್ರ ತೆರೆ ಕಂಡಿರುವುದು ಖುಷಿ ವಿಚಾರ. ಮೂಕಜೀವ ಚಲನಚಿತ್ರ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಗೊಳ್ಳಲಿ. ಸಮಾಜಿಕ ಕಾಳಜಿಯನ್ನು ಹೊಂದಿರುವ ಚಲನಚಿತ್ರಗಳು ಹೆಚ್ಚಾಗಿ ಮೂಡಿಬರಲಿ ಎಂದರು.

ಚಲನಚಿತ್ರ ನಿರ್ದೇಶಕ ಶ್ರೀನಾಥ್ ವಸಿಷ್ಠ ಮಾತನಾಡಿ, ಕಮರ್ಷಿಯಲ್ ಸಿನಿಮಾಗಳ ಮಧ್ಯೆ ಕದಾಂಬರಿ ಅಧಾರಿತ ಚಲನಚಿತ್ರಗಳು ನಶಿಸಿ ಹೋಗುವ ಹಂತಕ್ಕೆ ಬಂದು ನಿಂತಿದೆ. ನಾವು ವಿಶೇಷ ಸಂದೇಶವುಳ್ಳ ಚಲನಚಿತ್ರ ನಿರ್ಮಾಣ ಮಾಡುವ ಉದ್ದೇಶದಿಂದ ಶ್ರವಣ ದೋಷವುಳ್ಳ ಸಮಾಜಿಕ ಕಳಕಳಿಯ ಚಿತ್ರ ಜನರಿಗೆ ನೀಡಿದ್ದೇವೆ. ನಾಯಕ ನಟರಾಗಿ ಅಭಿನಯಿಸಿರುವ ಶ್ರೀಹರ್ಷ ಮುಕ್ತವಾಗಿ ಅಭಿನಯಿಸಿ ಚಿತ್ರಕ್ಕೆ ಜೀವ ತುಂಬಿದ್ದಾರೆ ಎಂದರು.

ಈ ಸಂಧರ್ಭದಲ್ಲಿ ನಾಯಕ ನಟ ಶ್ರೀಹರ್ಷ, ಚಲನಚಿತ್ರ ನಿರ್ಮಾಪಕ ಎಂ.ವೆಂಕಟೇಶ್, ಮಂಜುಳಾ, ಸ್ಥಳೀಯ ಮುಖಂಡರಾದ ಚನ್ನಸಂದ್ರ ಚಂದ್ರಶೇಖರ್, ಗುಟ್ಟಾ ಮಾರಪ್ಪ ಇದ್ದರು.

ಹೆಚ್ಚಿನ ಸುದ್ದಿ