ವರದಿ :: ಅಮರೇಶಣ್ಣ ಕಾಮನಕೇರಿ
ಸಿರವಾರ ಡಿ 10 : ಬೆಳಗಾವಿ ರಾಯಚೂರು ಮಾರ್ಗದಲ್ಲಿ ಬರುವ ಸಿರವಾರ ಪಟ್ಟಣದ ನಿಲ್ದಾಣವು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಗೆ ಸೇರಿದಾಗಿದ್ದು ಈ ಬಸ್ಸ ನಿಲ್ದಾಣದಲ್ಲಿ ಬೀದಿ ದನಗಳ ಹಾವಳಿಯಿಂದ ಪ್ರಯಾಣಿಕರು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ ಪ್ರಯಾಣಿಕರ ಚೀಲಗಳಿಗೆ ನೇರವಾಗಿ ಬಾಯಿ ಹಾಕಿ ಅವರ ಚೀಲವನ್ನು ಚಲ್ಲಾಪಿ ಮಾಡುತ್ತವೆ ಅಲ್ಲದೆ ಚಿಕ್ಕ ಚಿಕ್ಕ ಮಕ್ಕಳ ಮೇಲೆ ಭಯವಿಲ್ಲದೆ ಮೇಲೆ ಎರಗುತ್ತವೆ ಅನೇಕ ಜನರು ನಿಲ್ದಾಣದಲ್ಲಿ ದನಗಳಿಂದ ದಾಳಿಗೂ ಹೋಳಗಾಗಿದ್ದಾರೆ. ನೂತನವಾಗಿ ಬಸ್ಸ ನಿಲ್ದಾಣ ನಿರ್ಮಾಣವಾಗಿದೆ ಆದರೆ ಜಾಗದ ಕೊರತೆಯಿಂದ ಬಸ್ಸ ಡ್ರೈವರಗಳು ನಿಲ್ದಾಣದಲ್ಲಿ ಬಸ್ಸ ನಿಲ್ಲಿಸಲು ಹೆಣಗಬೇಕಾಗಿದೆ ಬಸ್ಸ ನಿಲ್ದಾಣದ ತುಂಬ ನಿಲ್ಲುವ ಬೀದಿ ದನಗಳು ಬಸ್ಸಗಳಿಗೆ ದಾರಿ ಬಿಡದೆ ಅಡ್ಡಿದಿಡ್ಡ ನಿಲ್ಲುತ್ತವೆ ಬಸ್ಸ ಡ್ರೈವರಗಳ ಇವಗಳ ಹಾವಳಿಯಿಂದ ರೋಷಿ ಹೋಗಿದ್ದಾರೆ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ರಾಯಚೂರಿನಿ ಅಧಿಕಾರಿಗಳು ಪ್ರಯಾಣಿಕರಿಗೆ ಮತ್ತು ಬಸ್ಸ ಚಾಲಕರಿಗೆ ತೊಂದರೆ ಆಗದ ರೀತಿಯಲ್ಲಿ ವ್ಯವಸ್ಥೆ ಮಾಡಬೇಕು ಬಸ್ಸ ನಿಲ್ದಾಣವು ದನ ಕಟ್ಟೊಟಿಗೆ ಆಗದ ರೀತಿಯಲ್ಲಿ ನೋಡಿಕೋಳಬೇಕು ಎಂದು ನಮ್ಮ ವಾಹಿನಿವು ಆಗ್ರಹಿಸುತ್ತದೆ.

