
ಬೆಂಗಳೂರು :: ರಾಜ್ಯದ ಅಭಿವೃದ್ಧಿ ಮಾಡಿವುದೆ ಗುತ್ತಿಗೆದಾರರು ತಮ್ಮ ಸ್ವಂತ ಹಣ ಹಾಕಿ ಕಾಮಗಾರಿ ಮಾಡುತ್ತಾರೆ.ಮಾಡಿದ ಕಾಮಗಾರಿಗೆ ಸರ್ಕಾರ ಸರಿಯಾದ ಸಮಯಕ್ಕೆ ಬಿಲ್ಲ ಪಾವತಿ ಮಾಡದೆ ಇರುವದರಿಂದ ಗುತ್ತಿಗೆದಾರರ ಪರಿಸ್ಥಿತಿ ಅಧೋಗತ್ತ ಸಾಗುತ್ತಿದೆ ಗುತ್ತಿಗೆದಾರರು ಕಾಮಗಾರಿಗಳನ್ನು ಪೂರ್ಣ ಮಾಡಿದರು ಬಿಲ್ಲ ಆಗದೆ ಸಂಕಷ್ಟ ದಲ್ಲಿ ಇದ್ದಾರೆ ಪೂರ್ಣಗೊಳಿಸಿದ ಕಾಮಗಾರಿಯ ಹಣ ಪಾವತಿಸುವಂತೆ ಸುವರ್ಣ ಕರ್ನಾಟಕ ಗುತ್ತಿಗೆದಾರರ ಸಂಘದ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಜೆಜೆಎಂ ಕಾಮಗಾರಿಗಳ ಬಿಲ್ಲ ನೀಡುವಂತೆ ಒತ್ತಾಯಿಸಿ ಗ್ರಾಮೀಣಾಭಿರುದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಸಮೀರ್ ಶುಕ್ಲಾ ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು
ಈ ಸಂದರ್ಭದಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜೋಗಿ ಜಯಪ್ಪ, ಕಲಬುರ್ಗಿ, ವಿಜಯಪುರ,ಯಾದಗಿರಿ,ರಾಯಚೂರು, ಬಾಗಲಕೋಟೆ ಜಿಲ್ಲೆಯ ಗುತ್ತಿಗೆದಾರರು ಇದ್ದರು

