ಹಾವು ಕಡಿದು ಮೃತ ರೈತನ ಕುಟುಂಬಕ್ಕೆ ಈಶ್ವರ್ ಸಿಂಗ್ ಠಾಕೂರ್ ಸಹಾಯ.
ಬೀದರ್ ತಾಲ್ಲೂಕಿನ ಮರಕಲ್ ಗ್ರಾಮದ ತಮ್ಮ ಹೊಲದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಹಾವು ಕಚ್ಚಿ ರೈತ ಬಸವರಾಜ್ ಭೀಮಣ್ಣ ಕಮಠಾಣೆ ನಿಧನ ಹೊಂದಿದರು.
ಭಾರತೀಯ ಜನತಾ ಪಕ್ಷದ ವಿಭಾಗದ ಪ್ರಭಾವಿಗಳು ಹಾಗೂ ಬೀದರ್ ಕ್ಷೇತ್ರದ ನಾಯಕರಾದ ಈಶ್ವರ್ ಸಿಂಗ್ ಠಾಕೂರ್ ಅವರು ಮೃತರಾದ ರೈತರನ ಮನೆಗೆ ಭೇಟಿ ನೀಡಿ ಪರಿವಾರದ ಸದಸ್ಯರಿಗೆ ಧೈರ್ಯ ತುಂಬುವAತ ಪ್ರಯತ್ನ ಮಾಡಿದರು ಹಾಗೂ ಕೃಷಿ ಇಲಾಖೆಯ ಎಡಿ ಅನ್ಸಾರಿ ಹಾಗೂ ಜೆಡಿ ಸುಗುರೆ ಅವರನ್ನು ದೂರವಾಣಿ ಮುಖಾಂತರ ಮಾತನಾಡಿ ಮೃತ ಕುಟುಂಬಕ್ಕೆ ಸರ್ಕಾರದಿಂದ ಬರಬೇಕಾದ ಪರಿಹಾರವನ್ನು ಶೀಘ್ರದಲ್ಲಿ ನೀಡಲು ಮನವಿ ಮಾಡಿದರು, ಅವರ ಮನವಿಗೆ ಸ್ಪಂದಿಸಿದ ಜೆಡಿ ಅವರು ನಿಧನರಾದ ರೈತರ ಕುಟುಂಬಕ್ಕೆ ಅತಿಶೀಘ್ರದಲ್ಲಿ ಪರಿಹಾರ ನೀಡುತ್ತೇವೆ ಎಂದು ಭರವಸೆಯನ್ನು ನೀಡಿದರು ಈಶ್ವರ್ ಸಿಂಗ್ ಠಾಕೂರ್ ಅವರು ಮೃತ ರೈತರ ಕುಟುಂಬಕ್ಕೆ ವೈಯಕ್ತಿಕ ಪರಿಹಾರ ನೀಡಿದರು ಹಾಗೂ ಅವರಿಗೆ ಸಂಪೂರ್ಣವಾಗಿ ಸರಕಾರದಿಂದ ಬರಬೇಕಾದ ಪರಿಹಾರವನ್ನು ಒದಗಿಸಲು ಪ್ರಯತ್ನ ಮಾಡುತ್ತೇನೆಂದು ವಿಶ್ವಾಸವನ್ನು ನೀಡಿದರು ಈ ಸಮಯದಲ್ಲಿ ಮರಕಲ ಗ್ರಾಮದ ಬಿಜೆಪಿ ಮುಖಂಡರಾದ ವೆಂಕಟರಾವ್ ಚಿದ್ರೆ ಮಂಡಲದ ಅಧ್ಯಕ್ಷರಾದ ರಾಜೇಂದ್ರ ಪೂಜಾರಿ, ರೈತ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ದೀಪಕ ಗಾದಗೆ, ಮುಖಂಡರಾದ ನಾಗನಾಥ್ ನಾಗರೆ, ಬಸವರಾಜ್ ಚಿಕ್ಲೆ , ಕಾಶಿನಾಥ್ ಪೊಲೀಸ್ತೆ ಮರಕಲ್ ಗ್ರಾಮದ ಹಿರಿಯ ರೈತರಾದ ಮೋಹನ್ ರಾವ್ ರಾಜವಾಡಿ, ಬಂಡೆಪ್ಪ ಕಾಮಠಾಣೆ, ದತ್ತು ಪಾಟೀಲ್, ಪ್ರಕಾಶ್ ಪಾರಾ ನಾಗನಾಥ್ ಬೀರ್ಗೆ, ಸಂತೋಷ್ ವಲ್ಲಾಪಿ, ಪಿಂಟು , ಹನುಮಂತರಾವ್ ಕೋಳಿ, ಉದಯ ಅಷ್ಟೂರೆ, ಹಾಗೂ ಮರಕಲ ಗ್ರಾಮಸ್ಥರು ಉಪಸ್ಥಿತರಿದ್ದರು.

