KRGRV
Monday, December 23, 2024
Homeಜಿಲ್ಲಾ ಸುದ್ದಿಗಳು" ಹುಮನಾಬಾದ ಪೊಲೀಸರಿಂದ ಕೊಲೆ ಆರೋಪಿತನ ಬಂಧನ. ಮಾರಕಾಸ್ತ್ರಗಳ ಜಪ್ತಿ”.

” ಹುಮನಾಬಾದ ಪೊಲೀಸರಿಂದ ಕೊಲೆ ಆರೋಪಿತನ ಬಂಧನ. ಮಾರಕಾಸ್ತ್ರಗಳ ಜಪ್ತಿ”.

  ಪೊಲೀಸ್ ಠಾಣೆಯಲ್ಲಿ ದಿನಾಂಕ: 02/10/2024 ರಂದು ಮಧ್ಯ ರಾತ್ರಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸದಂತೆ ಆರೋಪಿತನ ಪತ್ತೆ ಕುರಿತು ಶ್ರೀ ನ್ಯಾಮೆಗೌಡ, ಡಿ.ಎಸ್.ಪಿ ಹುಮನಾಬಾದ ರವರ ಮುಂದಾಳತ್ವದಲ್ಲಿ ಶ್ರೀ ಗುರುಲಿಂಗಪ್ಪಗೌಡ ಪಾಟೀಲ್, ಸಿ.ಪಿ.ಐ ಹುಮನಾಬಾದ ರವರ ನೇತೃತ್ವದಲ್ಲಿ ಶ್ರೀ ಸುರೇಶ ಚವ್ಹಾಣ, ಪಿ.ಎಸ್.ಐ ಹುಮನಾಬಾದ ಪೊಲೀಸ್ ಠಾಣೆ ಮತ್ತು ನೂರಿತ ಸಿಬ್ಬಂದಿಯವರನ್ನೊಳಗೊಂಡ ತಂಡವನ್ನು ರಚಿಸಿದ್ದು, ತಂಡವು ತಾಂತ್ರಿಕಒಳ ಹರಿವು (Technical Inputs), ಮಾನವ ಗುಪ್ತಚರ (Human Intelligence) ಬಳಸಿ ಪ್ರಕರಣವನ್ನು ಭೇದಿಸಿ ಆರೋಪಿತನಿಂದ ಹರಿತವಾದ ಮಾರಕಾಸ್ತ್ರಗಳಾದ ಐದು ತಲವಾರಗಳು ಅವನ ಮನೆಯಿಂದ ವಶ ಪಡಿಸಿಕೊಂಡು ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿಯೂ ಪ್ರಕರಣವನ್ನು ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.


    ಮದ್ಯಪಾನ ಮಾಡಲು ಹಣ ಕೇಳಿದಕ್ಕೆ ಕೊಡದೆ ಇದ್ದಕ್ಕೆ ಕೊಲೆ ನಡೆದಿರುತ್ತದೆ.  ಅತ್ಯಂತ ಚಾಕ ಚಕ್ಯತೆಯಿಂದ ದಾಖಲಾದ ನಾಲ್ಕು ದಿವಸಗಳಲ್ಲಿಯೇ ಪ್ರಕರಣವನ್ನು ಅಚ್ಚುಕಟ್ಟಾಗಿ ತನಿಖೆ ಮಾಡಿ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ಹುಮನಾಬಾದ ಉಪ-ವಿಭಾಗದ ಅಧಿಕಾರಿ ಹಾಗು ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ. 

 ಆರೋಪಿಗಳ ಪತ್ತೆ ಮಾಡುವಲ್ಲಿ, ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಮತ್ತು ಅಪರಾಧ ನಿಯಂತ್ರಣಕ್ಕಾಗಿ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಮುಂದುವರಿಸಿದ್ದಾರೆ

ಹೆಚ್ಚಿನ ಸುದ್ದಿ