ಚಿತ್ತಾಪುರ ಅ 25 : ಚಿತ್ತಾಪುರ ತಾಲೂಕಿನ ನಾಲಾವರ ಸ್ಟೇಷನ್ ಏರಿಯಾದ ಶರಣಪ್ಪ ಕೋಲಿ ಎಂಬುವರ 14 ವರ್ಷದ ಮಗ ಬಸವರಾಜ್ ಇಂದು ಮೂರ ಗಂಟೆ ಸುಮಾರಿಗೆ ತಂದೆ ತಾಯಿ ಹೊಲಕ್ಕೆ ಹೋಗಿದರಿಂದ ವಿದ್ಯಾರ್ಥಿ ಯೂ ಹೊಲಕ್ಕೆ ಹೋದ ಸಂದರ್ಭದಲ್ಲಿ ಕಾಲಿಗೆ ಹಾವು ಕಚ್ಚಿ ಮೃತಪಟ್ಟಿದ್ದಾನೆ ಶರಣಪ್ಪ ದಂಪತಿಗಳ ಆಕ್ರಂದ ಮುಗಿಲು ಮುಟ್ಟಿತ್ತು ದಂಪತಿಗಳಿಗೆ ಒಬ್ಬನೆ ಮಗನಾಗಿದ್ದು
ಬಡಕುಟುಂಬಕ್ಕೆ ತುಂಬಾಲಾರದ ನಷ್ಟವಾಗಿದೆ. ದಂಪತಿಗಳ ಜೀವನಕ್ಕೆ ಆಸರೆ ಆಗಬೇಕಿದ ಮಗನ್ನು ಕಳೆದುಕೊಂಡ ಈ ಬಡ ಕುಟುಂಬಕ್ಕೆ ಸರ್ಕಾರ ಸಹಾಯ ಮಾಡಬೇಕಿದೆ.