KRGRV
Sunday, December 22, 2024
Homeವಾಹನ-ಉದ್ಯೋಗ2023ರಲ್ಲಿ ದಾಖಲೆಯ ಬೆಳವಣಿಗೆ ; ದೇಶದ ಪ್ರಮುಖ ನವೋದ್ಯಮ ಕೇಂದ್ರ ಕರ್ನಾಟಕ

2023ರಲ್ಲಿ ದಾಖಲೆಯ ಬೆಳವಣಿಗೆ ; ದೇಶದ ಪ್ರಮುಖ ನವೋದ್ಯಮ ಕೇಂದ್ರ ಕರ್ನಾಟಕ

ಬೆಂಗಳೂರು, 14ನೇ ನವೆಂಬರ್‌, 2024: ತನ್ನ ಪ್ರಗತಿಪರ, ಉದ್ಯಮ ಸ್ನೇಹಿ ನೀತಿಗಳಿಂದಾಗಿ ಕರ್ನಾಟಕವು ದೇಶದಾದ್ಯಂತದ ಉದ್ಯಮಿಗಳನ್ನು ಆಕರ್ಷಿಸುವ ಮೂಲಕ ನವೋದ್ಯಮಗಳಿಗೆ ಉನ್ನತ ತಾಣವಾಗಿ ತನ್ನ ಸ್ಥಾನ ಗಟ್ಟಿಗೊಳಿಸಿದೆ.

ʼರಾಜ್ಯದಲ್ಲಿ ಆರಂಭವಾದ ನವೋದ್ಯಮಗಳ ಸಂಖ್ಯೆಯು ಕೇವಲ ಒಂದು ವರ್ಷದಲ್ಲಿ, ಗಮನಾರ್ಹವಾದ ಶೇ 18.2ರಷ್ಟು ಹೆಚ್ಚಳ ಕಂಡಿದೆ. 2022ರಲ್ಲಿ 2,568 ರಷ್ಟಿದ್ದ ನವೋದ್ಯಮಗಳ ಸಂಖ್ಯೆಯು, 2023ರಲ್ಲಿ 3,036 ಕ್ಕೆ ಏರಿದೆ. ಅತ್ಯಲ್ಪ ಅವಧಿಯಲ್ಲಿನ ಈ ಗಮನಾರ್ಹ ಹೆಚ್ಚಳವು ನವೋದ್ಯಮಗಳ ವಲಯದಲ್ಲಿ ಕರ್ನಾಟಕವನ್ನು ದೇಶದಲ್ಲಿಯೇ ಮುಂಚೂಣಿ ಸ್ಥಾನಕ್ಕೆ ತಂದು ನಿಲ್ಲಿಸಿದೆ.

ಸದ್ಯಕ್ಕೆ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟಾರೆ ನವೋದ್ಯಮಗಳಲ್ಲಿ ಶೇ 8.7ರಷ್ಟು ಪಾಲನ್ನು ಕರ್ನಾಟಕ ರಾಜ್ಯವು ಹೊಂದಿದೆ. ನವೋದ್ಯಮಗಳು ಕಾರ್ಯನಿರ್ವಹಿಸುತ್ತಿರುವ ರಾಜ್ಯವಾರು ಶೇಕಡಾ ಪ್ರಮಾಣದಲ್ಲಿ ರಾಜ್ಯಕ್ಕೆ ಅಗ್ರ ಸ್ಥಾನ ಇದೆ.

ರಾಜ್ಯ ಸರ್ಕಾರದ ನೀತಿ ನಾವೀನ್ಯತೆ ಮತ್ತು ಕಾರ್ಯತಂತ್ರದ ಉಪಕ್ರಮಗಳು, ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇರುವ ಪೂರಕ ಬೆಂಬಲ ವ್ಯವಸ್ಥೆಯು ಹೊಸ ಉದ್ಯಮಗಳಿಗೆ ಆದ್ಯತೆಯ ಆರಂಭಿಕ ನೆಲೆಯಾಗಿ ಕರ್ನಾಟಕವನ್ನು ಮಾರ್ಪಡಿಸಿವೆ. ರಾಜ್ಯದಲ್ಲಿನ ನವೋದ್ಯಮಗಳು ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತ, ನಾವೀನ್ಯತೆ ಮತ್ತು ಅವಕಾಶದ ಕೇಂದ್ರವಾಗಿ ಕರ್ನಾಟಕ ಖ್ಯಾತಿಯನ್ನು ಬಲಪಡಿಸುತ್ತಿವೆ.

ಹೆಚ್ಚಿನ ಸುದ್ದಿ