KRGRV
Thursday, November 5, 2026
Homeಜಿಲ್ಲಾ ಸುದ್ದಿಗಳು2026-27ನೇ ಸಾಲಿನ ಸಕ್ಕರೆ ಹಂಗಾಮಿಗೆ ಕಬ್ಬಿನ ದರ (FRP) ಅಧಿಕೃತ ಆದೇಶ ಪ್ರಕಟ!

2026-27ನೇ ಸಾಲಿನ ಸಕ್ಕರೆ ಹಂಗಾಮಿಗೆ ಕಬ್ಬಿನ ದರ (FRP) ಅಧಿಕೃತ ಆದೇಶ ಪ್ರಕಟ!

​ಕರ್ನಾಟಕ ಸರ್ಕಾರದ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯವು 2025-26ನೇ ಸಾಲಿನ ಸಕ್ಕರೆ ಇಳುವರಿಯನ್ನು (Recovery %) ಆಧರಿಸಿ 2026-27ನೇ ಸಾಲಿಗೆ ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕಾದ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP) ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿದೆ.

​ಆದೇಶದ ಪ್ರಮುಖ ಮುಖ್ಯಾಂಶಗಳು:
​ಇಳುವರಿ ಆಧಾರಿತ ದರ ನಿಗದಿ: 2025-26ರ ಸಕ್ಕರೆ ಇಳುವರಿ (%) ಆಧಾರದ ಮೇಲೆ ಪ್ರತಿಯೊಂದು ಕಾರ್ಖಾನೆಗೆ ಪ್ರತ್ಯೇಕವಾಗಿ ಎಫ್‌ಆರ್‌ಪಿ ದರ ನಿಗದಿಪಡಿಸಲಾಗಿದೆ.

​ಬೆಳಗಾವಿ, ಬಾಗಲಕೋಟೆ ಹಾಗೂ ಇತರ ಜಿಲ್ಲೆಗಳು:
ಸಕ್ಕರೆ ಇಳುವರಿ ಹೆಚ್ಚಿರುವ ಕಾರ್ಖಾನೆಗಳಿಗೆ
(ಉದಾ: 11.5% – 12.2%) ಪ್ರತಿ ಮೆಟ್ರಿಕ್ ಟನ್‌ಗೆ ₹4,000 ರಿಂದ ₹4,350ಕ್ಕೂ ಹೆಚ್ಚು ದರ ನಿಗದಿಯಾಗಿದೆ.
​ಇತರ ಜಿಲ್ಲೆಗಳ ದರ: ಇಳುವರಿ ಕಡಿಮೆ ಇರುವ ಪ್ರದೇಶಗಳಲ್ಲಿ ಪ್ರತಿ ಟನ್‌ಗೆ ₹3,383 ರಿಂದ ₹3,800 ರವರೆಗೆ ದರ ಪಟ್ಟಿ ಬಿಡುಗಡೆಯಾಗಿದೆ.

​ಕಬ್ಬು ಬೆಳೆಗಾರ ರೈತ ಬಾಂಧವರು ತಮ್ಮ ವ್ಯಾಪ್ತಿಯ ಸಕ್ಕರೆ ಕಾರ್ಖಾನೆ ನಿಗದಿಪಡಿಸಿರುವ ಅಧಿಕೃತ ಎಫ್‌ಆರ್‌ಪಿ (FRP) ದರವನ್ನು ಪರಿಶೀಲಿಸಿ ನ್ಯಾಯಯುತ ಬೆಲೆ ಪಡೆದುಕೊಳ್ಳಬಹುದು

​

ಹೆಚ್ಚಿನ ಸುದ್ದಿ