ಬೆಂಗಳೂರು: ವಿಜಯ್ ಟಾಟಾಗೂ ಜೆಡಿಎಸ್‌ಗೂ ಸಂಬಂಧವಿಲ್ಲ ಎಂದು ಜನತಾದಳ ಪ್ರಕಟಣೆ ಹೊರಡಿಸಿದ ಬೆನ್ನಲ್ಲೇ ವಿಜಯ್ ಟಾಟಾ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೆಡಿಎಸ್ ಮುಖಂಡ, ಚನ್ನಪಟ್ಟಣದಲ್ಲಿ ನಿಖಿಲ್ ಚುನಾವಣೆಗೆ ಅಂತ ರಮೇಶ್ ಗೌಡ ನನ್ನ ಬಳಿ 50 ಕೋಟಿ ಕೇಳಿದ್ರು.
ಆಗಲ್ಲ ನನ್ನ ಪ್ರಾಜೆಕ್ಟ್ ಕಂಪ್ಲೀಟ್ ಆಗಬೇಕು ಅಂದೆ. ಅದಕ್ಕೆ 50 ಕೋಟಿ ಹಣದ ವ್ಯವಸ್ಥೆ ಮಾಡದಿದ್ದರೆ ನಿಮ್ಮ ಬ್ಯುಸಿನೆಸ್ ಕಷ್ಟ ಆಗುತ್ತೆ ಅಂತ ಹೆದರಿಸಿದರು ಎಂದು ಗಂಭೀರ ಆರೋಪ ಮಾಡಿದರು.
ದಯವಿಟ್ಟು ಜೆಡಿಎಸ್ ಕಾರ್ಯಕರ್ತರನ್ನು ಬೆಳೆಸಿ. ಯಾವುದೇ ಕಾರಣಕ್ಕೂ ನಾನು ಜೆಡಿಎಸ್ ಬಿಡಲ್ಲ. ದೇವೇಗೌಡರು ಹೇಳುವತನಕ ನಾನು ಜೆಡಿಎಸ್ ಬಿಡಲ್ಲ ಎಂದು ವಿಜಯ್ ಟಾಟಾ ಹೇಳಿದರು.