KRGRV
Wednesday, February 4, 2026
Homeರಾಜಕೀಯಕೇಂದ್ರದ ಐತಿಹಾಸಿಕ ಬಜೆಟ್ – ಕ್ರಾಂತಿಕಾರಿ, ಜನಸ್ನೇಹಿ ಹಾಗೂ ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಆರ್ಥಿಕ...

ಕೇಂದ್ರದ ಐತಿಹಾಸಿಕ ಬಜೆಟ್ – ಕ್ರಾಂತಿಕಾರಿ, ಜನಸ್ನೇಹಿ ಹಾಗೂ ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಆರ್ಥಿಕ ಶಿಸ್ತಿನ ಬಜೆಟ್ ಇದಾಗಿದೆ -ಎನ್. ರವಿಕುಮಾರ್.

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಕೇಂದ್ರ ಬಜೆಟ್ ಐತಿಹಾಸಿಕ, ಕ್ರಾಂತಿಕಾರಿ ಮತ್ತು ಸಂಪೂರ್ಣ ಜನಸ್ನೇಹಿಯಾಗಿದೆ.

ಸುಮಾರು ₹53.50 ಲಕ್ಷ ಕೋಟಿ ಮೊತ್ತದ ಈ ಬಜೆಟ್ ದೇಶದಲ್ಲಿ ಅಭಿವೃದ್ಧಿ ಕ್ರಾಂತಿಗೆ ದಿಕ್ಕು ತೋರಿಸುವುದರ ಜೊತೆಗೆ, ಸರ್ವತೋಮುಖ ಅಭಿವೃದ್ಧಿಗೆ ಬಲ ತುಂಬುವಂತಹದ್ದಾಗಿದೆ.

ಈ ಬಜೆಟ್‌ನ ಪರಿಣಾಮವಾಗಿ ದೇಶದ GDP ಬೆಳವಣಿಗೆ ಶೇಕಡಾ 6.8 ರಿಂದ 7.2ರ ವರೆಗೆ ಏರಿಕೆಯಾಗಲಿದೆ ಎಂಬ ನಿರೀಕ್ಷೆ ಇದೆ.

ಈ ಬಜೆಟ್ ಪ್ರಮುಖವಾಗಿ 3 ಕರ್ತವ್ಯ ಗಳ ಮೂಲಕ ಮಂಡಿಸಲಾಗಿದೆ.

1.ಉತ್ಪಾದಕತೆ, ಸ್ಪರ್ಧಾತ್ಮಕತೆ ಹೆಚ್ಚಿಸಿ ಜಾಗತಿಕ ಅಸ್ಥಿರತೆಯನ್ನು ಎದುರಿಸುವ ಸಾಮರ್ಥ್ಯ ನಿರ್ಮಿಸುವ ಮೂಲಕ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವುದು,

2.ಜನರ ಆಕಾಂಕ್ಷೆಗಳನ್ನು ಈಡೇರಿಸಿ ಅವರನ್ನು ಭಾರತದ ಸಮೃದ್ಧಿ ಪಥದ ಸಹಭಾಗಿಗಳಾಗಿಸುವುದು.
3.ಆಡಳಿತ ಸುಧಾರಣೆಗೆ ಕೃತಕ ಬುದ್ಧಿಮತ್ತೆ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳ ಅಭಿವೃದ್ಧಿ.

ದೇಶದ ಸಾರಿಗೆ ವಲಯಕ್ಕೆ ಸುಮಾರು ₹5,98 ಕೋಟಿ ರೂ.ಗಳ ಅನುದಾನ ನೀಡಲಾಗಿದ್ದು, ಆಧುನಿಕ ಮತ್ತು ಸುಧಾರಿತ ಸಾರಿಗೆ ವ್ಯವಸ್ಥೆಗೆ ಸರ್ಕಾರ ಒತ್ತು ನೀಡಿದೆ. ಜಲಮಾರ್ಗ, ರಾಷ್ಟೀಯ ಹೆದ್ದಾರಿ, ವಿಮಾನ ನಿಲ್ದಾಣ, ರೇಲ್ವೆ ಕಾರಿಡಾರ್ ಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ಇಡೀ ದೇಶವೇ ಅಭಿವೃದ್ಧಿಗೆ ಪೂರಕವನ್ನಾಗಿ ಈ ಬಜೆಟ್ ಕಾರ್ಯನಿರ್ವಹಿಸಲಿದೆ.

ಬೃಹತ್ ಹಾಗೂ ಸಣ್ಣ–ಮಧ್ಯಮ ಕೈಗಾರಿಕೆ (MSME), ಕೃಷಿ, ರಕ್ಷಣಾ ವಲಯ, ಮೂಲಭೂತ ಸೌಕರ್ಯ, ಯುವಕರು ಹಾಗೂ ಮಹಿಳೆಯರ ಸಬಲೀಕರಣಕ್ಕೆ ಈ ಬಜೆಟ್‌ನಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ.

2026ರ ಬಜೆಟ್‌ನಲ್ಲಿ ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ತೆಂಗು, ಶ್ರೀಗಂಧ, ಗೋಡಂಬಿ, ಕೋಕೋ ಮೊದಲಾದ ಅಧಿಕ ಮೌಲ್ಯದ ಬೆಳೆಗಳಿಗೆ ಆದ್ಯತೆ ನೀಡಲಾಗಿದೆ. ಶ್ರೀಗಂಧ ಪುನರುಜ್ಜೀವನ, ಕರಾವಳಿ ಪ್ರದೇಶದ ಬೆಳೆಗಳ ಉತ್ಪಾದಕತೆ ಹೆಚ್ಚಿಸುವ ಗುರಿ ನಿಗದಿಪಡಿಸಲಾಗಿದೆ. AI ಆಧಾರಿತ ‘ಭಾರತ್ ವಿಸ್ತಾರ್’ ಕೃಷಿ ಉಪಕರಣದ ಮೂಲಕ ರೈತರಿಗೆ ಮಾಹಿತಿ ನೀಡುವ ಮಹತ್ವದ ಯೋಜನೆಯೂ ಇದರಲ್ಲಿ ಸೇರಿದೆ. ಈ ಬಜೆಟ್ ನಲ್ಲಿ 32.5 ಲಕ್ಷ ಕೋಟಿ ರೂಗಳನ್ನು ರೈತರಿಗೆ ಸಾಲ ನೀಡುವ ಯೋಜಿಸಲಾಗಿದೆ. ಮೀನುಗಾರಿಕೆ ಹಾಗೂ ಪಶುಸಂಗೋಪನೆ ವಲಯಕ್ಕೂ ಬಂಪರ್ ಕೊಡುಗೆ ನೀಡಲಾಗಿದ್ದು, ಮೌಲ್ಯ ಸರಪಳಿ ಬಲಪಡಿಸುವ ಮೂಲಕ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದೆ.

ದೇಶದ 2ನೇ ಹಾಗೂ 3ನೇ ಹಂತದ MSMEಗಳ ಬೆಳವಣಿಗೆಗಾಗಿ ಕಾರ್ಪೊರೇಟ್ ಮಿತ್ರ ಯೋಜನೆ ಜಾರಿಗೊಂಡಿದ್ದು, MSME ಸ್ಥಾಪನೆಗೆ ಕ್ರೆಡಿಟ್ ಗ್ಯಾರಂಟಿ ಮಿತಿಯನ್ನು ₹10 ಕೋಟಿಗೆ ಹೆಚ್ಚಿಸಲಾಗಿದೆ.

ದೇಶದ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರಕ್ಷಣಾ ವಲಯಕ್ಕೆ ₹5.94 ಲಕ್ಷ ಕೋಟಿ ರೂ.ಗಳ ಭಾರಿ ಅನುದಾನ ನೀಡಲಾಗಿದೆ.

ದೇಶದಲ್ಲೇ ಸೆಮಿಕಂಡಕ್ಟರ್ ಉತ್ಪಾದನೆಗೆ ₹40 ಸಾವಿರ ಕೋಟಿ ರೂ.ಗಳ ಹೂಡಿಕೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.

ಪ್ರಮುಖ ನಗರಗಳಿಗೆ ಹೈ–ಸ್ಪೀಡ್ ರೈಲು ಯೋಜನೆ, ಡ್ರೋನ್‌ಗಳ ದೇಶೀಯ ಉತ್ಪಾದನೆಗೆ ಆದ್ಯತೆ ನೀಡಿರುವುದು ‘ಮೇಕ್ ಇನ್ ಇಂಡಿಯಾ’ಗೆ ಮತ್ತಷ್ಟು ಬಲ ನೀಡುತ್ತದೆ.

ಕ್ಯಾನ್ಸರ್ 17 ಅಗತ್ಯ ಔಷಧಗಳು ಹಾಗೂ 7 ಅಪರೂಪದ ಕಾಯಿಲೆಗಳ ಔಷಧಗಳ ಬೆಲೆ ಇಳಿಕೆ, ಅಪಘಾತ ಪರಿಹಾರಕ್ಕೆ ತೆರಿಗೆ ವಿನಾಯಿತಿ ನೀಡಿರುವುದು ಸಾಮಾನ್ಯ ನಾಗರಿಕರ ಮೇಲೆ ಇರುವ ಆರ್ಥಿಕ ಭಾರವನ್ನು ಕಡಿಮೆ ಮಾಡುವ ಜನಪರ ಹಾಗೂ ಮಾನವೀಯ ಕ್ರಮ ಈ ಬಜೆಟ್ ಗಳನ್ನು ಯೋಜಿಸಲಾಗಿದೆ. ಹಾಗೂ ಪ್ರತಿ ಜಿಲ್ಲೆಗಳಲ್ಲಿ ಆಸ್ಪತ್ರೆಗಳ ಅನುಕೂಲವಿತಗಳನ್ನು ಹೆಚ್ಚಿಸುವ ತೀರ್ಮಾನ ಮಾಡಲಾಗಿದೆ.

ಲಖ್ಪತಿ ದೀದಿ ಯೋಜನೆ, ಹೊಸದಾಗಿ ಪ್ರತಿ ಜಿಲ್ಲೆಯಲ್ಲಿ ಬಾಲಕಿಯರ ಹಾಸ್ಟೆಲ್‌ಗಳ ನಿರ್ಮಾಣ, ಬಡ ಮತ್ತು ಮಧ್ಯಮ ವರ್ಗಕ್ಕೆ ತೆರಿಗೆ ವಿನಾಯಿತಿ ಮುಂದುವರಿಕೆ ಸೇರಿದಂತೆ ಒಟ್ಟಾರೆ ಈ ಬಜೆಟ್ ಆರ್ಥಿಕ ಶಿಸ್ತು, ನವೀನತೆ, ಸಮಗ್ರ ಬೆಳವಣಿಗೆ ಮತ್ತು ಎಲ್ಲ ವರ್ಗಗಳ ಸಬಲೀಕರಣವನ್ನು ಒಟ್ಟುಗೂಡಿಸಿದೆ.

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಗುರಿಯತ್ತ ಈ ಬಜೆಟ್ ಮತ್ತಷ್ಟು ಬಲ ತುಂಬಲಿದೆ.

ದೇಶದ ಜನಸ್ನೇಹಿ ಬಜೆಟ್‌ಗೆ ರೂವಾರಿಯಾದ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೂ, ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಹೆಚ್ಚಿನ ಸುದ್ದಿ