KRGRV
Tuesday, September 22, 2026
Homeಜಿಲ್ಲಾ ಸುದ್ದಿಗಳುಯಾದಗಿರಿ ವೃತ್ತದ ನೂತನ ಸಿಪಿಐ ಆಗಿ ನಾನಾಗೌಡ ಪೊಲೀಸ್ ಪಾಟೀಲ್ ಅಧಿಕಾರ ಸ್ವೀಕಾರ: ಸಿಂದಗಿ ಜನತೆ...

ಯಾದಗಿರಿ ವೃತ್ತದ ನೂತನ ಸಿಪಿಐ ಆಗಿ ನಾನಾಗೌಡ ಪೊಲೀಸ್ ಪಾಟೀಲ್ ಅಧಿಕಾರ ಸ್ವೀಕಾರ: ಸಿಂದಗಿ ಜನತೆ ಹಾಗೂ ಸಿಬ್ಬಂದಿಯಿಂದ ಶುಭಾಶಯಗಳ ಮಹಾಪೂರ

ಯಾದಗಿರಿ:ಸಿಂದಗಿ ವೃತ್ತ ನಿರೀಕ್ಷಕರಾಗಿ (CPI) ದಕ್ಷ ಹಾಗೂ ಜನಪರ ಆಡಳಿತ ನಡೆಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದ ನಾನಾಗೌಡ ಪೊಲೀಸ್ ಪಾಟೀಲ್ ಅವರು ಇದೀಗ ಯಾದಗಿರಿ ವೃತ್ತದ ನೂತನ ಸಿಪಿಐ ಆಗಿ ನೇಮಕಗೊಂಡಿದ್ದು, ಶೀಘ್ರದಲ್ಲೇ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಶುಭಾಶಯಗಳು ಹರಿದುಬರುತ್ತಿವೆ.

ಜನಸ್ನೇಹಿ ಅಧಿಕಾರಿಗೆ ಹೊಸ ಜವಾಬ್ದಾರಿ:ನಾನಾಗೌಡ ಪೊಲೀಸ್ ಪಾಟೀಲ್ ಅವರು ಸಿಂದಗಿ ವೃತ್ತದಲ್ಲಿ ಸುಮಾರು ಎರಡು ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ‘ಜನಸ್ನೇಹಿ ಪೊಲೀಸ್’ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇವರ ದಕ್ಷ ಸೇವೆಯನ್ನು ಪರಿಗಣಿಸಿ ಪೊಲೀಸ್ ಇಲಾಖೆಯು ಇವರನ್ನು ಯಾದಗಿರಿ ಜಿಲ್ಲೆಯ ಯಾದಗಿರಿ ವೃತ್ತಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಶುಭ ಹಾರೈಕೆ:ಯಾದಗಿರಿ ವೃತ್ತದ ಸಿಪಿಐ ಆಗಿ ಜವಾಬ್ದಾರಿ ವಹಿಸಿಕೊಳ್ಳಲಿರುವ ನಾನಾಗೌಡ ಪೊಲೀಸ್ ಪಾಟೀಲ್ ಅವರಿಗೆ ಸಿಂದಗಿ ವೃತ್ತದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಸಿಂದಗಿಯ ಪ್ರಮುಖರು ಮತ್ತು ಸಾರ್ವಜನಿಕರು ಹಾರ್ದಿಕವಾಗಿ ಶುಭ ಕೋರಿದ್ದಾರೆ. ಸಾರ್ವಜನಿಕ ಸ್ನೇಹಿ ಅಧಿಕಾರಿಯಾಗಿ ಗುರುತಿಸಿಕೊಂಡಿರುವ ಇವರ ನೇಮಕಾತಿಯಿಂದ ಯಾದಗಿರಿ ವೃತ್ತದಲ್ಲೂ ಕಾನೂನು ಸುವ್ಯವಸ್ಥೆ ಮತ್ತಷ್ಟು ಸುಧಾರಿಸಲಿದೆ ಎಂದು ಸಾರ್ವಜನಿಕರು ಆಶಿಸಿದ್ದಾರೆ.

ಹೆಚ್ಚಿನ ಸುದ್ದಿ